ಆರೋಗ್ಯಕ್ಕಾಗಿ ಸೈಕಲ್ ಬಳಸಿ – ಜಿ. ಹೆಚ್. ಶ್ರೀನಿವಾಸ್.
ತರೀಕೆರೆ ಜೂನ್.5

ಯುವಕರು, ಯುವತಿಯರು ತಮ್ಮ ಆರೋಗ್ಯ ಸುಧಾರಣೆಗೆ ಪ್ರತಿದಿನ ಸೈಕಲ್ ತುಳಿಯಬೇಕು ಎಂದು ಶಾಸಕ ಜಿಎಚ್ ಶ್ರೀನಿವಾಸ್ ರವರು ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು, ಸಾರ್ವಜನಿಕ ಆಸ್ಪತ್ರೆ ತರೀಕೆರೆ, ಪುರಸಭೆ ಮತ್ತು ರೋಟರಿ ಕ್ಲಬ್, ಹಾಗೂ ಸೈಕ್ಲಿಂಗ್ ಕ್ಲಬ್ ತರೀಕೆರೆ, ಇವರ ಸಹಯೋಗದಲ್ಲಿ ಪುನೀತ್ ರಾಜಕುಮಾರ್ ಪುತ್ತಳಿ ಬಳಿ ಏರ್ಪಡಿಸಿದ್ದ ವಿಶ್ವ ಬೈಸಿಕಲ್ ದಿನಾಚರಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿದರು. ಪ್ರತಿದಿನ ವ್ಯಾಯಾಮ ಮಾಡುವವರು ಆಸ್ಪತ್ರೆಯಿಂದ,ಕಾಯಿಲೆಗಳಿಂದ ದೂರವಿರುತ್ತಾರೆ.

ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸುಧಾರಣೆಗೆ ಆಟಗಳನ್ನು ಆಡುವ ಮೂಲಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ಬೀಡಿ, ಸಿಗರೇಟ್,ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುತ್ತದೆ. ಆದ್ದರಿಂದ ತಂಬಾಕು ಸೇವನೆ ನಿಲ್ಲಿಸಿದರೆ ಆರೋಗ್ಯ ಮತ್ತು ದೇಶವು ಚೆನ್ನಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು ಸೈಕ್ಲಿಂಗ್ ಕ್ಲಬ್ಬಿನ ಅಧ್ಯಕ್ಷರಾದ ಡಾ. ದೇವರಾಜ್, ತಾಲೂಕು ವೈದ್ಯಧಿಕಾರಿಯಾದ ಡಾ. ಚಂದ್ರಶೇಖರ್, ಪುರಸಭಾ ಮುಖ್ಯ ಅಧಿಕಾರಿ ಎಚ್ ಮಹಾಂತೇಶ್, ರೋಟರಿ ಸಂಸ್ಥೆಯ ಅಧ್ಯಕ್ಷರಾದ ದಯಾನಂದ, ಮತ್ತು ಸದಸ್ಯರು ಗ್ಯಾಸ್ ರಾಜಪ್ಪ, ನಿತಿನ್, ಪ್ರವೀಣ್ ಆರ್, ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ