ನಿರಂತರ ಶ್ರಮ , ಸಾಮಾಜಿಕ ಒಡನಾಟಕ್ಕೆ ಗುನ್ನಳ್ಳಿ ರಾಘವೇಂದ್ರರವರಿಗೆ ಸಂದ ಗೌರವ …….
ವಿಜಯನಗರ (ಜೂನ್. 10) :
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನಿವಾಸಿ ಯಾದ ಗುನ್ನಳ್ಳಿ ರಾಘವೇಂದ್ರ ಅವರು ತಮ್ಮ ಇಂದಿನ ಜೀವನದ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ವೃತ್ತಿ ಬಡಿಗೇರ್ ಕೆಲಸವನ್ನು ಕಲಿತು, ಕೂಲಿ ಕಾರ್ಮಿಕನಾಗಿ ಇನ್ನೊಬ್ಬರ ಕೆಳಗೆ ಮೇಸ್ತ್ರಿ ಹೇಳಿದ ಕೆಲಸ ಮಾಡಿ, ತಮ್ಮ ಜೀವನ ಮಾಡಬೇಕಾಗಿತ್ತು.

ಇವರು 19 ನೇ ವಯಸ್ಸಿನಲ್ಲಿ ತಾನು ಬಡಿಗೇರ್ ವೃತ್ತಿಯಲ್ಲಿ ಮುಂದುವರೆದು ಕಲಿತು ದಿನದಿಂದ ದಿನಕ್ಕೆ ಉತ್ತಮ ವಾದ ಬಡಿಗೇರ್ ಕೆಲಸವನ್ನು ತಮ್ಮ ತಿಳುವಳಿಕೆಯ ಮಟ್ಟದಲ್ಲಿ ಕಲಿತು ಇವರು 25 ನೇ ವಯಸ್ಸಿನಲ್ಲಿ ಬಡಿಗೆ ಮಾಡುವ ಮೇಸ್ತ್ರಿ ಆದರು , ಕೆಲಸ ಮಾಡುತ್ತಲೇ ತಮ್ಮ ಜೊತೆಯಲ್ಲಿ ತಮ್ಮ ಕೈ ಕೆಳಗೆ ಸುಮಾರು 15 ಜನಕ್ಕೂ ಹೆಚ್ಚು ಕೆಲಸಗಾರರು ಕಲಿಸಿದ್ದು ,ಆ 15ಜನ ಕಾರ್ಮಿಕರಿಗೂ ಕೆಲಸ ಕಲಿಸಿದ ತೃಪ್ತಿ ನನಗಿದೆ ಎಂದು ಗುನ್ನಳ್ಳಿ ರಾಘವೇಂದ್ರ ರವರು ಹೇಳುತ್ತಾರೆ ,ಹಾಗೂ ಇವರು ಬಡಿಗೇರ್ ಕೆಲಸವನ್ನು ಕೂಡ್ಲಿಗಿ ತಾಲೂಕು ಅಲ್ಲದೆ ಬೆಂಗಳೂರು, ದಾವಣಗೆರೆ ,ಹಾವೇರಿ, ಬಾಗಲಕೋಟೆ ,ಚಿತ್ರದುರ್ಗ, ಹಿರಿಯೂರು, ಹೊಸಪೇಟೆ ಇನ್ನೂ ಅನೇಕ ಕಡೆಗಳಲ್ಲಿ ತಮ್ಮ ಬಡಿಗೇರ್ ವೃತ್ತಿಯನ್ನು ಮಾಡುವುದರೊಂದಿಗೆ ಉತ್ತಮ ಕೆಲಸ ಕೊಡುವ ಮಾಲೀಕನ ಬಳಿ ಒಳ್ಳೆಯ ನಂಬಿಕೆ ಉಳ್ಳವನಾಗಿ ಕೆಲಸಗಾರನಾಗಿ ಸರಿ ಸುಮಾರು 15 ವರ್ಷಗಳ ಕಾಲ ಬಿಡುವಿಲ್ಲದೆ ಕೂಲಿ ಕೆಲಸವನ್ನು ನಿರ್ವಹಿಸಿ ಜೀವನ ಮಾಡಿದರು.

ಸಮಾಜ ಸೇವೆಯಲ್ಲಿ ಅಂಬೆಗಾಲಿಡುತ್ತ ಬಡಿಗೇರ್ ಕೆಲಸದಲ್ಲಿ ಸಂಘಟನಾತ್ಮಕವಾಗಿ ಸೇವೆ ಸಲ್ಲಿಸಲು ಮುಂದಾದರು ಹಾಗೆ 2008ರಲ್ಲಿ ಕೂಡ್ಲಿಗಿ ತಾಲೂಕು ಮಟ್ಟದ ಬಡಿಗೇರ್ ಸಂಘದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ, ಆಯ್ಕೆಯಾದ ಸ್ವಲ್ಪ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ತಾಲೂಕಿನ ಕಾರ್ಮಿಕ ಸಂಘಟನೆಯಾದ ಬಡಿಗೇರ್ ಸಂಘದಲ್ಲಿ ಅಂಜದೆ ಅಳುಕದೆ ಮುಂದಾಳತ್ವದಲ್ಲಿ ವಿವಿಧ ಬಗೆಯ ಹೋರಾಟಗಳನ್ನು ಮಾಡಿಕೊಂಡು ತಮ್ಮ ಸಂಘದ ಪದಾಧಿಕಾರಿಗಳಿಗೆ ವಿವಿಧ ಯೋಜನೆಗಳಲ್ಲಿ ಬಡಿಗೇರ್ ಸಂಘದ ಫಲಾನುಭವಿಗಳಿಗೆ ಹೋಲು ಹಾಕುವ ಮಷೀನ್, ಕೊರೆಯುವ ಮಿಷನ್, ಹೀಗೆ ಕೂಲಿ ಕಾರ್ಮಿಕರ ಉಪಕರಣಗಳನ್ನು ತಾಲೂಕಿನಾದ್ಯಾಂತ ಒಟ್ಟು 128 ಜನ ಕಾರ್ಮಿಕರಿಗೆ ಇವರ ನೇತೃತ್ವದಲ್ಲಿ ಸರ್ಕಾರದಿಂದ ಸಿಗಬೇಕಾದ 2009ನೇ ಸಾಲಿನಲ್ಲಿ ಸರ್ಕಾರದ ಅಧಿಕಾರಿಗಳೊಂದಿಗೆ ಇವರು ಸೇರಿ ಕಾರ್ಮಿಕರಿಗೆ ಕಾರ್ಯಕ್ರಮವನ್ನು ರೂಪಿಸಿ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಜಾಪುರ ಭೀಮಣ್ಣ ಹಾಗೂ ಸಹಕಾರ ಸಂಘದ ಪದಾಧಿಕಾರಿ( ಸೊಸೈಟಿ) ಕೋತ್ಲಪ್ಪ ಇತರರು ಎಲ್ಲಾ ಕಾರ್ಮಿಕರಿಗೆ ಇವರ ಮೂಲಕ ವಿತರಿಸಿರುತ್ತೆವೆ ಎಂದು ತಿಳಿಸಿದರು.

ಕನ್ನಡ ನಾಡಿನ ಹಿತವನ್ನು ಬಯಸುವಂತಹ ವ್ಯಕ್ತಿ ಇವರಾಗಿದ್ದು ಇವರಿಗೆ ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ಅಪಾರವಾದ ಗೌರವದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಎಂಬ ದೊಡ್ಡ ಸಂಘಟನೆಯಲ್ಲಿ ನಗರ ಘಟಕದ ಅಧ್ಯಕ್ಷರಾಗಿಯೂ ಸ್ಥಾನವನ್ನು ಪಡೆದು ಹಾಗೆ ಕನ್ನಡ ನಾಡು ನುಡಿ ಭಾಷೆ ಜಲ ಗಡಿಗಾಗಿ ಹೀಗೆ ನೂರಾರು ಹೋರಾಟಗಳೊಂದಿಗೆ ಭಾಗವಹಿಸಿ, ಆ ಸಮಯದಲ್ಲಿ ಆಳುವಂತಹ ಸರ್ಕಾರಗಳಿಗೆ ಎಚ್ಚರಿಕೆ ಕೊಡುವಂತಹ ಹೋರಾಟಗಳಲ್ಲಿ ಭಾಗಿಯಾಗಿ ತಮ್ಮದೇ ಆದಂತಹ ವ್ಯಕ್ತಿತ್ವದ ದಾರಿಯ ಗುಣಗಳೊಂದಿಗೆ ಮುಂದುವರೆಯುತ್ತ ತಾಲೂಕು ಹಾಗೂ ಜಿಲ್ಲೆಯವರೆಗೂ ತಮ್ಮ ಹೆಸರು ಬೆಳೆಯುವುದರಲ್ಲಿ ಯಶಸ್ವಿಯಾಗಿದ್ದರು ,ಹಾಗೂ 2018ನೇ ವರ್ಷದಲ್ಲಿ ತಮ್ಮ ಉತ್ತಮ ಬೆಳವಣಿಗೆ ಮೂಲಕ ಸಿ ಐ ಟಿ ಯು ತಾಲೂಕು ಅಧ್ಯಕ್ಷರಾಗಿ ಕಾರ್ಮಿಕರಿಗೆ ಒಬ್ಬ ದೊಡ್ಡ ಶಕ್ತಿಯಾಗಿ ನಿಂತುಕೊಂಡು ತಾಲೂಕಿನಾದ್ಯಾಂತ ಸಂಘಟನೆಯ ರಾಜ್ಯ ಸಂಘಟನೆಯ ಆದೇಶದ ಮೇರೆಗೆ ಕೂಡ್ಲಿಗಿ ತಾಲೂಕಿನ ಮೂಲೆ ಮೂಲೆಯಲ್ಲಿ ಸಿಐಟಿಯು ಸಂಘಟನೆಯ ನಾಮಫಲಕಗಳನ್ನು ಹಾಕುವುದರ ಮೂಲಕ ತಾಲೂಕು ಮಟ್ಟದ ಹಾಗೂ ಗ್ರಾಮಮಟ್ಟದ ಪದಾಧಿಕಾರಿಗಳ ಜೊತೆ ಉದ್ಘಾಟನೆ ಮಾಡುವುದರೊಂದಿಗೆ ಕಾರ್ಮಿಕರಿಗೆ ಶಕ್ತಿ ತುಂಬುವುದು ರೊಂದಿಗೆ ಕಾರ್ಮಿಕರಿಗೆ ವಿವಿಧ ಸವಲತ್ತುಗಳ ತಮ್ಮ ಸಂಘಟನೆಯ ಹೋರಾಟಗಳ ಮೂಲಕ ಕಾರ್ಮಿಕರಿಗೆ ಕೊಡುಸುವುದರೊಂದಿಗೆ ಕಾರ್ಮಿಕರ ಸೇವೆಯಲ್ಲಿ ಹೆಚ್ಚಾಗಿ ಒಡನಾಟದೊಂದಿಗೆ ತಾಲೂಕಿನಾದ್ಯಾಂತ ಕಾರ್ಮಿಕರು ಇವರಿಗೆ ಗೌರವವನ್ನು ಕೊಡುವ ಕಾರ್ಮಿಕ ಸಂಘಟನೆಯ ನಿಯಮಗಳನ್ನು ಮೀರದೆ ಇಂದು ಕೂಡ್ಲಿಗಿ ತಾಲೂಕಿನಲ್ಲಿ ಸಿಐಟಿಯು ಸಂಘಟನೆಯು ಒಂದು ಒಳ್ಳೆ ಹೆಸರನ್ನು ಮಾಡಲಿಕ್ಕೆ ಕಾರಣಿಭೂತರಾಗಿರುತ್ತಾರೆ, ಕಾರ್ಮಿಕ ಇಲಾಖೆಯಲ್ಲಿ ಏನೇಲ್ಲಾ ಸವಲತ್ತುಗಳಿದ್ದರೂ ಪ್ರತಿಯೊಬ್ಬ ಕಾರ್ಮಿಕರಿಗೂ ಇಲಾಖೆ ವತಿಯಿಂದ ಸಿಗುವಂತಹ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರಿಗೂ ಚಾಚು ತಪ್ಪದೆ ಪಡೆದುಕೊಳ್ಳುವಂತೆ ತಮ್ಮ ಸಂಘಟನೆಯ ಕಚೇರಿಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಕಾರ್ಮಿಕ ಕಾರ್ಡ್, ವಿಧವಾ ವೇತನ, ವೃದ್ಯಾಪ ವೇತನ, ಪ್ರಕೃತಿ ವಿಕೋಪದಡಿಯಲ್ಲಿ ಸಹಾಯಧನ, ಹಾಗೂ ಸಾಮಾಜಿಕವಾಗಿ ರೈತರಿಗಾಗಿ ಔಷಧ ಗೊಬ್ಬರ ಕೊಡುವಂತಹ ಹೋರಾಟದೊಂದಿಗೆ ನೂರಾರು ರೈತರ ಮನಸ್ಸು ಗೆದ್ದು ಹಾಗೂ ಮಧ್ಯಪಾನದ ವಿಷಯವಾಗಿಯೂ ಸಾಕಷ್ಟು ಹೋರಾಟಗಳನ್ನು ಮಾಡಿರುತ್ತಾರೆ,ಹೀಗೆ ಅನೇಕ ಯೋಜನೆಗಳನ್ನು ಸಲಹೆ. ಸೂಚನೆಗಳು ತಿಳಿಸುವುದರೊಂದಿಗೆ ಮತ್ತು ಪಡೆದುಕೊಳ್ಳುವಂತೆ ಒಬ್ಬ ಶಕ್ತಿಯಾಗಿ ನಿಲ್ಲುವುದರೊಂದಿಗೆ ಉತ್ತಮವಾದಂತಹ ಕಾರ್ಮಿಕ ಮುಖಂಡರಾಗಿ ಹೆಸರುವಾಸಿಯದರು.

ಇವರು ಸಂಘಟನೆಯಲ್ಲಿ ನಿಷ್ಠುರವಂತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ ಹಾಗೂ ಇವರಿಗೆ ಸಮಾಜದ ಇನ್ನೊಂದು ಜವಾಬ್ದಾರಿಯ ಪದವಿ ಹುಡಿಕೊಂಡು ಬಂದಿರುತ್ತೆ ಅದುವೇ ಎಸ್ ಡಿ.ಎಂ ಸಿ ಜಿಲ್ಲಾ ಅಧ್ಯಕ್ಷರಾಗಿ ಪದವಿಯನ್ನು 2019 ರಂದು ಆದೇಶದ ಪ್ರತಿ ಸ್ವೀಕರಿಸಿ, ಶಾಲಾ ಕಾಲೇಜುಗಳಲ್ಲಿ ಜಿಲ್ಲಾದ್ಯಾಂತ ಎಸ್. ಡಿ. ಎಮ್. ಸಿ ಪದವಿಗೆ ಇರುವಂತಹ ಗೌರವವನ್ನು ತಾಲೂಕು ಮಟ್ಟದ ಎಸ್. ಡಿ. ಎಂ. ಸಿ ಪದಾಧಿಕಾರಿಗಳಿಗೆ ಹಾಗೂ ಗ್ರಾಮಮಟ್ಟದಲ್ಲಿ ಇರುವಂತಹ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಒಳ್ಳೆಯ ಮಾರ್ಗದರ್ಶಕರಾಗಿ ಎಲ್ಲಿ ಯಾವುದೇ ಶಾಲೆಯಲ್ಲಿಯೂ ಸಹ ಎಸ್. ಡಿ. ಎಂ ಸಿ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಕಡೆಗಣಿಸುವಂತ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ನಿಯಮಾವಳಿಗಳನ್ನು ತಿಳಿಸುವುದರೊಂದಿಗೆ ಎಲ್ಲಾ ಶಾಲಾ-ಕಾಲೇಜಿನ ಮುಖ್ಯಸ್ಥರುಗಳು ಎಸ್. ಡಿ. ಎಂ. ಸಿ ಅಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ಚಾಚು ತಪ್ಪದೇ ಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇಕು ಎಂಬ ರಾಜ್ಯ ಸಮಿತಿಯ ನಿಯಮಗಳ ಮೇರೆಗೆ ಜಿಲ್ಲಾದ್ಯಾಂತ ಸಂಘಟನೆಯ ನಿಯಮಾವಳಿಗಳನ್ನು ಅನುಸರಿಸಿ ಇಂದು ಉತ್ತಮವಾದಂತ ಹೋರಾಟಗಾರ ಎಂದು ಪರಿಗಣಿಸಿ 2023ನೇ ವರ್ಷದಲ್ಲಿ ರಾಜ್ಯಮಟ್ಟದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸಭೆ ಕರೆದಿದ್ದು ,ಈ ಸಭೆಯಲ್ಲಿ ರಾಜ್ಯಾದ್ಯಾಂತ ಆಗಮಿಸಿದ ಮುಖಂಡರಗಳ ಪೈಕಿ ಗುನ್ನಳ್ಳಿ ರಾಘವೇಂದ್ರ ಕೂಡ್ಲಿಗಿ ಇವರನ್ನು ಬೆಂಗಳೂರುನಲ್ಲಿ ರಾಜ್ಯ ಮಟ್ಟದ ಸಭೆಯಲ್ಲಿ ಆಯ್ಕೆ ಮಾಡುವ ಮೂಲಕ ಹಿರಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸ್ನೇಹಿತರು ಕಾರ್ಮಿಕರು ಸಂಘ ಸಂಸ್ಥೆಯವರು ತುಂಬು ಹೃದಯದ ಅಭಿನಂದನೆಯನ್ನು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ