ನಿಸರ್ಗ ……
( ಜೂನ್ .10 )

ಹಸಿರೇ ಉಸಿರಾಗಿದೆ ಇಂದು
ಬಾನೆತ್ತರ ಬೆಳೆದಿದೆ ಮುಂದು
ಭತ್ತದಿ ಗುಡಿಸಲು ಒಂದು
ಹೊಂಗಿರಣದಿ ಸೂರ್ಯ ಬಂದು..
ತೆಂಗು ನೋಡು ಬಾನೆತ್ತರ
ಪ್ರಕೃತಿಯ ಹಸಿರು ಚಿತ್ತಾರ
ಪ್ರತಿಬಿಂಬವು ಕೂಡ ಒಂದೇತರ
ನದಿಯು ಹರಿಯುತ್ತಿರೆ ವಿಸ್ತಾರ..
ಕಳೆಯು ಕಾಣದಾಗಿದೆ ಅಲ್ಲಿ
ಬಂದು ನೆಲೆಸಿ ನೀವಿಲ್ಲಿ
ಆಕಾಶ ಭೂಮಿ ಕೂಡಿತಿಲ್ಲಿ
ಸ್ವರ್ಗವೇ ತಲೆದೋರಿದೆ ಹೊಲದಲ್ಲಿ..
ಪರಿಶುದ್ಧವಾದ ವಾತಾವರಣ ಕಾಣುತಿದೆ
ಮನಶಾಂತಿಯ ತವರು ಮನೆಯಾಗಿದೆ
ಊರಿಗೊಂದು ವನ ಬೆಳೆಸಬೇಕಾಗಿದೆ
ಮುಂದಿನ ಪೀಳಿಗೆಯ ಬದುಕಿದೆ..
🌱🌱🌱🌱🌱🌱🌱🌱
ಮುತ್ತು.ಯ.ವಡ್ಡರ
(ಶಿಕ್ಷಕರು)
ಬಾಗಲಕೋಟ