ಕಲುಷಿತ ನೀರು ಪೂರೈಕೆ ಮಾಡಿದರೆ ಪಿಡಿಓ ಹೊಣೆ — ಶರಣಪ್ಪ ಮುದ್ಗಲ್.
ಕೊಟ್ಟೂರು ಜೂನ್.16

ಕೊಟ್ಟೂರು ಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆ ಮಾಡಿದಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೆ ಹೊಣೆಯಾಗುತ್ತಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಶರಣಪ್ಪ ಮುದ್ಗಲ್ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು, ನಳಗಳನ್ನು ಅಳವಡಿಸಿ ನೀರು ಪೋಲಾಗುವುದನ್ನು ನಿಯಂತ್ರಿಸಿ, ನೀರಿನ ಟ್ಯಾಂಕ್ ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಿಓ ಗಳಿಗೆ ತಾಕೀತು ಮಾಡಿದರು.ಕೊಟ್ಟೂರು ಕೆರೆಗೆ ದಾರಿ ನಿರ್ಮಿಸಿ ತೂತುಗಳನ್ನು ರಿಪೇರಿ ಮಾಡಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿ ಕೆರೆ ದಂಡೆಯಲ್ಲಿ ಗಿಡಮರಗಳನ್ನು ಬೆಳೆಸಿ ಸುಂದರ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ಮಳೆ ಬಾರದ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ, ಈಗಾಗಲೇ 1400 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖಾಧಿಕಾರಿ ಸಭೆಯಲ್ಲಿ ವಿವರಿಸಿದಾಗ ಆಡಳಿತಾಧಿಕಾರಿ ಮಾತನಾಡಿ ಮಳೆಯ ಮುನ್ಸೂಚನೆಯನ್ನು ರೈತರಿಗೆ ತಿಳಿಸಿರಿ ಹಾಗೂ ನಕಲಿ ಬೀಜಗಳ ಮಾರಾಟ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನೊತ್ತು ಬೀದಿ ದೀಪಗಳು ಉರಿಯುತ್ತಿರುವುದನ್ನು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಾಗ ಜೆಸ್ಕಾಂ ಅಧಿಕಾರಿ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದರು. ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ಆಡಳಿತಾಧಿಕಾರಿಗಳು ನೀಡಿದರು.

” ಪುಷ್ಟಿ ಯೋಜನೆ “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಯವರು ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳ ಸಂರಕ್ಷಣೆಗಾಗಿ ಪುಷ್ಟಿ ಯೋಜನೆ ಬಗ್ಗೆ ಹಾಗೂ ಗರ್ಭಿಣಿಯರಿಗೆ ಮಾತೃ ವಂದನಾ ಸೌಲಭ್ಯದ ಬಗ್ಗೆ ತಿಳಿಸಲಾಯಿತು ಹಾಗೂ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನಲ್ಲಿ 42 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.ಇದಕ್ಕೆ ಮುಖ್ಯ ಕಾರಣ ಏನು? ಎಂದು ತಾ. ಪಂ ಸಹಾಯಕ ನಿರ್ದೇಶಕರು ಶರಣಪ್ಪ ಮುದ್ಗಲ್ ರವರು ಪ್ರಶ್ನಿಸಿ ಉತ್ತರಿಸಿದರು ವಯಸ್ಕರು ಕಡಿಮೆ ವಯಸ್ಸಿನಲ್ಲಿ ಮದುವೆ ಆಗುವುದು, ಇದಕ್ಕೆ ಮುಖ್ಯ ಕಾರಣವಾಗಿದೆ ಇವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು ಇವರ ಬಗ್ಗೆ ಎಚ್ಚರವಹಿಸಿ ಸೂಕ್ತ ವಯಸ್ಸಿಗೆ ಮದುವೆ ಆಗುವಂತೆ ಮಾಹಿತಿ ನೀಡಬೇಕು ಎಂದರು “ಎಸ್ ಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಡ್ಡಾಯ “ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಹಾಸ್ಟೆಲ್ ನಿಂದ ವಂಚಿತ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶ ಹೊರಡಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ ರವರು ಸಭೆಯಲ್ಲಿ ತಿಳಿಸಿದರು ನಮ್ಮ ಇಲಾಖೆಯಲ್ಲಿ ಸರ್ಕಾರಿ ವಕೀಲರ ಜೊತೆ ಪ್ರಾಕ್ಟೀಸ್ ಮಾಡುತ್ತಿರುವ ಕಾನೂನು ಪದವೀಧರರಿಗೆ ಮಾಸಿಕವಾಗಿ 10 ಸಾವಿರ ರೂಪಾಯಿ 2 ವರ್ಷದ ಅವಧಿವರೆಗೆ ಶಿಷ್ಯವೇತನ ನೀಡಲಾಗುತ್ತದೆ ನಂತರ ಪುಸ್ತಕ ಮತ್ತು ಲ್ಯಾಪ್ ಟಾಪ್ ಖರೀದಿಸಲು 50 ಸಾವಿರ ರೂಪಾಯಿ ಸಹಾಯಧನವಾಗಿ ನೀಡಲಾಗುವುದು ಎಂದು ಹೇಳಿದರುತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಎರಡು ಕಚೇರಿಗಳನ್ನು ಬಿಟ್ಟರೆ ಯಾವುದೇ ತಾಲ್ಲೂಕು ಮಟ್ಟದ ಕಚೇರಿಗಳು ಕೊಟ್ಟೂರಿನಲ್ಲಿ ಪ್ರಾರಂಭಿಸದಿರುವುದರಿಂದ ಕೂಡ್ಲಿಗಿ ತಾಲ್ಲೂಕು ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿಗಳನ್ನು ಸಭೆಗೆ ಕಳುಹಿಸುವುದರಿಂದ ಕೊಟ್ಟೂರು ತಾಲ್ಲೂಕಿಗೆ ಸಂಬಂಧಿಸಿದಂತೆ ನಿಖರ ಅಂಕಿ ಅಂಶಗಳು ಹಾಗೂ ಮಾಹಿತಿ ಸಭೆಯಲ್ಲಿ ನೀಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿತು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಪರಮೇಶ್ವರ, ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು