ಗಡಿನಾಡು ಪತ್ರಕರ್ತರ ಸಮಾವೇಶದ ಪೂರ್ವಭಾವಿ ಸಭೆ.
ಇಂಡಿ ಜೂನ್.27





ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಮತ್ತು ಎಲ್ಲಾ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಗಡಿನಾಡು ಪತ್ರಕರ್ತರ ಸಮಾವೇಶದ ಪೂರ್ವಭಾವಿ ಸಭೆ ಮಾಡಲಾಯಿತು. ಸಮಾವೇಶದ ಬಗ್ಗೆ ಚರ್ಚಿಸಿ ಹಲವಾರು ರೂಪರೇಷೆಗಳ ಬಗ್ಗೆ ನಿರ್ಣಯ ಮಾಡಲಾಯಿತು. ಸಮಾವೇಶಕ್ಕೆ ಯಾವ ಧುರಿಣರನ್ನು ಕರೆತರಬೇಕು ಸಾಹಿತಿಗಳು ರೈತ ಮುಖಂಡರು ದಲಿತ ಮುಖಂಡರು ಮತ್ತು ರಾಜಕಾರಣಿಗಳು ಹಾಗೂ ಸಮಾಜದ ಮುಖ್ಯದ ಜನಪರ ಕಾಳಜಿಯುಳ್ಳ ವ್ಯಕ್ತಿಗಳನ್ನು ಸಮಾವೇಶಕ್ಕೆ ಕರೆತರಲು ಧ್ವನಿ ಸಂಘದ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.`ಸಮಾಜದ ಒಳಿತಿಗಾಗಿ ಪತ್ರಕರ್ತರು ದುಡಿಯುವದು ಬಹು ಮುಖ್ಯ ಅವರ ಜೀವಕ್ಕೆ ಕೂತ್ತು ಬಂದಾಗ ಯಾವ ವ್ಯಕ್ತಿಯು ಮುಂದೆ ಬಂದು ಅವರಿಗೆ ಸಾಹಾಯ ಸಹಕಾರ ನೀಡುವದಿಲ್ಲ ಅದಕ್ಕಾಗಿ ನಾವುಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕನಿಷ್ಠ ಧ್ವನಿ ಸಂಘದ ತಾಲೂಕ ಅಧ್ಯಕ್ಷರಾದ ಪವನ ಕೊಡಹೊನ್ನ ಹೇಳಿದರು.ಈ ಸಂಧರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಎಸ್ ಎಮ್ ಬಿರಾದಾರ, ಅಧ್ಯಕ್ಷರಾದ ಪವನ ಕೊಡಹೊನ್ನ, ಉಪಾದ್ಯಕ್ಷರಾದ ಶಶಿಕುಮಾರ ಹರಿಜನ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ ವಾಲಿಕಾರ,ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅಶೋಕ ನಾಯಕೋಡಿ, ಖಜಾಂಚಿ ಸತೀಶ ವಾಲಿಕಾರ, ಸದಸ್ಯರಾದ ರಾಜಶೇಖರ ಶಿಂಧೆ, ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ

