ಇಂಡಿ ತಾಲೂಕು ಪ್ರಥಮ ವಕೀಲರ ಸಂಘಕ್ಕೆ ಪ್ರಶಸ್ತಿ ಜುಲೈ 8 ರಂದು ಮೆಗಾ ಲೋಕ ಅದಾಲತ್.

ಇಂಡಿ ಜೂನ್.27

ರಾಜ್ಯ ಕಾನೂನು ಸೇವೆಗಳಪ್ರಾಧಿಕಾರದ ನಿರ್ದೇಶನದಂತೆಸ್ಥಳೀಯ ನ್ಯಾಯಾಲಯದಲ್ಲಿಜುಲೈ ೮ ರಂದು ರಂದು ಬೆಳಗ್ಗೆ೧೦.೩೦ ರಿಂದ ಸಂಜೆ ೫ ರ ವರೆಗೆ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯಗಳಲ್ಲಿ ಬಾಕಿಇರುವ ಪ್ರಕರಣಗಳಲ್ಲಿಕಾನೂನು ಪ್ರಕಾರ ರಾಜಿಆಗಬಹುದಾದ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ್ಯಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವಉದ್ದೇಶದಿಂದ ಮೆಗಾ ಲೋಕಅದಾಲತ್ ಆಯೋಜಿಸಲಾಗಿದೆ.ಕಳೆದ ಬಾರಿ ನಡೆದ ಲೋಕಅದಾಲತ್‌ನಲ್ಲಿ ೧೮೨೦ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಮತ್ತು ೧೫ ಲಕ್ಷ ೮೯ ಸಾವಿರ ರೂ ಬ್ಯಾಂಕು, ಪುರಸಭೆ,ಗ್ರಾ.ಪಂ ಕರವಸೂಲಾತಿ, ಫೈನಾನ್ಸ,ಬಡ್ಡಿ ವ್ಯವಹಾರ ಸೇರಿದಂತೆ ಇಲಾಖೆಗಳಿಗೆ ಸಂದಾಯವಾಗಬಹುದಾದ ಹಣ ಸಂದಾಯವಾಗಿದೆ ಎಂದರು. ಈ ಬಾರಿಅದಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಈ ಅದಾಲತ್ ನಲ್ಲಿ ಹೊಲ,ಮನೆ,ಬ್ಯಾಂಕು, ಅಪಘಾತ, ಚೆಕ್ ಬೌನ್ಸ,ಜನನ, ಸಹಕಾರಿ, ಸಣ್ಣ ಪುಟ್ಟ ಗಲಾಟೆ,ಆರೋಪ ಸೇರಿದಂತೆ ಇನ್ನಿತರಪ್ರಕರಣಗಳನ್ನು ವಿಚಾರಣೆಮಾಡುವದರ ಮೂಲಕ ಅಂದೇಅಂತಿಮ ನಿರ್ಣಯದ ಮೂಲಕ ರಾಜಿಮಾಡಲಾಗುತ್ತದೆ ಎಂದು ಅವರು ಹೇಳಿದರು.ಹಲವು ವರ್ಷಗಳ ಕಾಲ ಕಾನೂನುಹೋರಾಟ ಮಾಡಿ ಒಬ್ಬರು ಗೆಲ್ಲುತ್ತಾರೆ,ಮತ್ತೊಬ್ಬರಿಗೆ ಸೋಲಾಗುತ್ತದೆ.ಆದರೆ ಅದಾಲತ್ ನಲ್ಲಿ ಇಬ್ಬರಿಗೂತೃಪ್ತಿಯಾಗುವ ತೀರ್ಮಾನಮಾಡಲಾಗುತ್ತದೆ. ಲೋಕ್ಅದಾಲತನಲ್ಲಿ ರಾಜಿಯಾದಪ್ರಕರಣಗಳ ಆದೇಶಅಂತಿಮವಾಗಿರುತ್ತದೆ. ಕಡಿಮೆಖರ್ಚಿನಲ್ಲಿ ಶೀಘ್ರ ಇತ್ಯರ್ಥ್ಯಪಡಿಸಿಕೊಳ್ಳಲು ಅವಕಾಶವಿದೆ.ನೇರವಾಗಿಯೂ ಭಾಗವಹಿಸಬಹುದು.ಇಬ್ಬರಿಗೂ ತೃಪ್ತಿಯಾದರೆ ಮಾತ್ರಇತ್ಯರ್ಥ ಮಾಡುತ್ತೇವೆ. ಮತ್ತೆಮೇಲ್ಮನವಿಗೆ ಅವಕಾಶ ಇರುವದಿಲ್ಲ.ಕೌಟುಂಬಿಕ ಕಲಹಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವದುಎಂದು ಬುದಾರಪುರ ಹೇಳಿದರುಹೆಚ್ಚಿನ ಪ್ರಕರಣ ಇತ್ಯರ್ಥಕ್ಕೆಇಂಡಿಯ ವಕೀಲರ ಸಂಘಕ್ಕೆ ಬಿ.ವೀರಪ್ಪ ಪ್ರಶಂಸೆ ಪತ್ರ ನೀಡಿದ್ದಾರೆ.ಮತ್ತು ಇನ್ನೂ ವಿಜಯಪುರಜಿಲ್ಲೆಯಲ್ಲಿ ಇಂಡಿ ಪ್ರಥಮ ಸ್ಥಾನಪಡೆದಿದೆ ಎಂದರು.

ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button