ಡಿ.ಎಸ್.ಎಸ್ ವಲಯ ಮಟ್ಟದ – ಪದಾಧಿಕಾರಿಗಳ ಆಯ್ಕೆ.
ಕಲಕೇರಿ ಏ.02





ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಣಶ್ಯಾಳ ಗ್ರಾಮ ಅಲ್ಪಸಂಖ್ಯಾತರ ಗ್ರಾಮ ಶಾಖೆಯ ಸಂಚಾಲಕರ ನನ್ನಾಗಿ ಲಾಲಸಾಬ ಹುಣಶ್ಯಾಳ ಹಾಗೂ ಎಸ್ಟಿ ಗ್ರಾಮ ಶಾಖೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬನ್ನೇಟ್ಟಿ ಪಿಟಿ ಗ್ರಾಮಗಳ ಎಸ್ಸಿ ಹಾಗೂ ಅಲ್ಪಸಂಖ್ಯಾತರ ಗ್ರಾಮ ಶಾಖೆ ಸಂಚಾಲಕರನನ್ನಾಗಿ ಅಕ್ಬರ್ ಬನ್ನೇಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಲಕೇರಿ ವಲಯ ಶಾಖೆ ಸಂಚಾಲಕರನ್ನಾಗಿ ಶಿವು ಹೊಸಮನಿ ಹಾಗೂ 12 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನೂತನ ತಾಳಿಕೋಟಿ ತಾಲೂಕಿನ ದ.ಸಂ.ಸ ಪದಾಧಿಕಾರಿಗಳಾದ ಶ್ರೀ ಹಣಮಂತ ವಡ್ಡರ, ಅನೀಲ ಬಡಿಗೇರ, ಸಂಗಮೇಶ ನಡವಿನಕೇರಿ ಸಂಘಟನಾ ಸಂಚಾಲಕರನ್ನಾಗಿ ಹಾಗೂ ವಿದ್ಯಾರ್ಥಿ ಒಕ್ಕೂಟ ತಾಲೂಕ ಸಂಚಾಲಕರನ್ನಾಗಿ ಜೈ ಭೀಮ್ ಹೊಸಮನಿ ಇವರನ್ನು ಮುಂಬರುವ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ರಮೇಶ ಆಸಂಗಿ ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ರಮೇಶ ಆಸಂಗಿ, ಜಿಲ್ಲಾ ಸಂ.ಸಂಚಾಲಕರು ಶ್ರೀ ಶರಣು ಶಿಂದೆ, ಶ್ರೀ ಅಶೋಕ್ ಚಲವಾದಿ, ವಿನಾಯಕ ಗುಣಸಾಗರ, ಪ್ರಕಾಶ್ ಗುಡಿಮನಿ ಮತ್ತು ಶ್ರೀ ಲಕ್ಕಪ್ಪ ಬಡಿಗೇರ ಮಾತನಾಡಿ ಸಂಘಟನೆ ಕುರಿತು ಹಾಗೂ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಪ್ರಜಾಪ್ರಭುತ್ವ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಸಾಮಾಜಿಕ ಸಮಾನತೆಗಾಗಿ, ದಲಿತರ ಹಕ್ಕುಗಳಿಗಾಗಿ, ಶೋಷಿತ ಸಮುದಾಯಗಳಿಗಾಗಿ ಹಾಗೂ ಬಾಬಾ ಸಾಹೇಬ್ರ ತತ್ವ ಸಿದ್ದಾಂತದಡಿಯಲ್ಲಿ ನಮ್ಮ ಸಂಘಟನೆಯನ್ನು ಮುನ್ನುಗ್ಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ದೇವೇಂದ್ರ ಬಡಿಗೇರ್. ಕಾಸಿಂಸಾಬ್ ನಾಯ್ಕೋಡಿ. ದಾವಲ್ ನಾಯ್ಕೋಡಿ. ಚಂದ್ರಕಾಂತ್ ಬಡಿಗೇರ್. ಲಕ್ಷ್ಮಣ ಕುದ್ರುಗೊಂಡ. ಉಮೇಶ್ ಬಡಿಗೇರ್. ಪರ್ಸು ಬಡಿಗೇರ್. ಇನ್ನೂ ಅನೇಕ ಮುಖಂಡರು ಯುವಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ