“ವೀರ ಯೋಧರ ಸೇವೆ ಚಿರ ಸ್ಮರಣೆ”…..

ಭಾರತ ಮಾತೆಯ ಸೇವೆಗೆ
ಜನ್ಮವೆತ್ತಿದ ವರ ಪುತ್ರರು
ವೀರ ಯೋಧರು ದೇಶದ ಶಕ್ತಿ
ಜೈ ಜವಾನ್ ಜೈ ಕಿಸಾನ್
ವೈಯಕ್ತಿಕ ಬದುಕು ಬದಿಗಿರಿಸಿ
ಜನ್ಮಭೂಮಿ ಸೇವೆಗೆ ಜೀವನ ಸವಿಸುವ
ಭಾರತ ಮಾತೆಯ ಗಡಿಯ ಸದಾ ಕಣ್ಗಾವಲು
ಚಳಿ ಮಳೆ ಗಾಳಿಗೆ ಮೈಯೊಡ್ಡಿ
ಪ್ರತಿಕ್ಷಣವು ಗಡಿರೇಖೆ ಕಾಯುವರು
ನಿತ್ಯ ಹೋರಾಟದಲಿ
ಸುಖಭೋಗ ಜೀವನ ತ್ಯಾಗದಿ
ದೇಶ ಸೇವೆಗೆ ಸಿದ್ಧ
ಬದ್ಧರಾದ ನಿಜ ದೇಶ ಸೇವಕರು
ಕುಟುಂಬ ಪರಿವಾರ ಲೆಕ್ಕಿಸದ
ನಿಜ ಯೋಗಿಳು
ದೇಶವಾಸಿಗಳ ಬದುಕಿಗೆ ಬೆಳಕು
ಚೆಲ್ಲುವ ಭಾಗ್ಯಧಾತರು
ನಿದಿರೆಗೆ ಜಾರುವ ಮುನ್ನ ಪ್ರತಿ ಕ್ಷಣ
ಯೋಧರ ನೆನವ ಮನವು ಪಾವನವು
ಭಾರತ ಮಾತೆಯ
ಧೀರ ಯೋಧರು
ಭಾರತ ಮಾತೆಯ ವೀರಯೋಧರಿಗೆ
ಗೌರವ ಪೂರ್ವಕ ಸಲಾಂ
ಜೈಹಿಂದ್ ವಂದೇ ಮಾತರಂ
ಭಾರತ ಮಾತಾಕಿ ಜೈ
ಜಯಘೋಷ ನಿತ್ಯ ನಿರಂತರ
ಗಜಕೇಸರಿ ಯಂತೆ ಘರ್ಜಿಸೋಣ
ವೀರ ಯೋಧರ ಸೇವೆ ಚಿರ ಸ್ಮರಣೆ
ನಮಸ್ತೇ ಭಾರತ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.