ಡಾ, ಎಚ್.ವಿಶ್ವನಾಥ್ ಅವರ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ – ಗಾನ ಕೋಗಿಲೆ ಉಮೇಶ್ ನಾಯಕ್ ಅವರ ಸಾಧನೆಗೆ ತಕ್ಕ ಪ್ರಶಸ್ತಿ ಪುರಸ್ಕಾರ ಲಭಿಸಲಿ ಎಂದು ಹಾರೈಸಿದರು.
ದಾವಣಗೆರೆ ಜು.07

ಡಾಕ್ಟರ್. ಎಚ್.ವಿಶ್ವನಾಥ್ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷರು ಸ್ಥಾನಕೋತ್ತರ ಅಧ್ಯಯನ ಕೇಂದ್ರ ಮೈಸೂರು ಅರವತ್ತೊಂದನೇ ವರ್ಷದ ಹುಟ್ಟು ಹಬ್ಬ ಆಚರಣೆಯ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಶ್ರೀ ಬಸವ ಪ್ರಭುಗಳು ವಿರುಕ್ತ ಮಠ ದಾವಣಗೆರೆ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಇವರಿಗೆ ಜಾನಪದ ಕ್ಷೇತ್ರದಲ್ಲಿ ಅತ್ಯುತ್ತಮ ಗಾಯನ ಸೇವೆ ಮಾಡಿರುವ ಹಾಗೂ 25 ವರ್ಷಗಳ ಕಾಲ ವೃತ್ತಿಪರ ಗಾಯಕ ರಾಗಿ ಸೇವೆ ಸಲ್ಲಿಸುತ್ತಿದ್ದು ಕರ್ನಾಟಕ ಸರ್ಕಾರ ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ ವಾರ್ಷಿಕ ರಾಜ್ಯ ಪ್ರಶಸ್ತಿ ಪಡೆದ ಉಮೇಶ್ ನಾಯಕ್ ಅವರಿಗೆ ಅಭಿನಂದನೆ ಕೋರಿದರು.

ಹಾಗೂ ಮುಂಬರುವ ದಿನಗಳಲ್ಲಿ ಉಮೇಶ್ ಅವರ ಸಾಧನೆಗೆ ತಕ್ಕ ಪ್ರಶಸ್ತಿ ಪುರಸ್ಕಾರ ಸಿಗಲೆಂದು ಶುಭ ಹಾರೈಕೆ ಹಾರೈಸಿದರು ಹಾಗೂ ವಿಶ್ವನಾಥ್ ಅವರ ಅಭಿಮಾನ ಬಳಗ ದಾವಣಗೆರೆ ಗಾಂಧಿ ನಗರದಲ್ಲಿ ಕಾರ್ಯಕ್ರಮ ಮಾಡಿ ಸನ್ಮಾನಿಸಿದರು. ಇದೇ ವೇಳೆ ರಮೇಶ್ ನಾಯಕ್ ಖ್ಯಾತ ಗಾಯಕರು ಭರಮಸಾಗರ ಉಮೇಶ್ ನಾಯಕ್ ಅವರು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟೂರು ಎಂದು ವರದಿಯಾಗಿದೆ.