ಸಿದ್ದೇಶ್ವರ ಶ್ರೀ ಗಳ ಆರೋಗ್ಯ ಸ್ಥಿರವಾಗಿದೆ, ಭಕ್ತರು ಯಾವುದೇ ಸುಳ್ಳು ಸುದ್ದಿಗಳಿಗೆ ಹೆದರುವ ಅವಶ್ಯಕತೆ ಇಲ್ಲ…!
ಬಿಜಾಪುರ :
ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಶ್ರಮಕ್ಕೆ ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ, ಎಸ್ಪಿ ಹೆಚ್ ಡಿ ಆನಂದಕುಮಾರ, ವೈದ್ಯ ಡಾ. ಮಲ್ಲಣ್ಣ ಮೂಲಿಮನಿ ಮತ್ತು ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭೇಟಿ ನೀಡಿ ಶ್ರೀ ಗಳ ಆರೋಗ್ಯ ವಿಷಯದ ಬಗ್ಗೆ ಆತಂಕವಿಲ್ಲ ಎಂದು ಹೇಳಿದರು.
ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಭಕ್ತರು ಗಾಬರಿಯಾಗುವ ಅಗತ್ಯವಿಲ್ಲ ಎಂದು ವೈದ್ಯ ಮಲ್ಲಣ್ಣ ಮೂಲಿಮನಿ ಹೇಳಿದ್ದಾರೆ. ಸ್ವಾಮೀಜಿಯ ಪಲ್ಸ್, ಬಿಪಿ ನಾರ್ಮಲ್ ಇದೆ, ಗಂಜಿ ಸೇವಿಸಿದ್ದಾರೆ, ಕೆಲ ದಿನಗಳಿಂದ ಆಹಾರ ಸೇವಿಸದ ಕಾರಣ ಅವರು ಅಶಕ್ತಿಯಿಂದ ಬಳಲುತ್ತಿದ್ದಾರೆ. ಹಾಗಾಗಿ, ಅವರು ಹೊರ ಬರಲು ಸಾಧ್ಯವಾಗುತ್ತಿಲ್ಲ. ಸ್ವಾಮೀಜಿ ಆರೋಗ್ಯ ಸ್ಥಿತಿಯ ಬಗ್ಗೆ ಹೆಲ್ತ್ ಬುಲೆಟಿನ್ ಮಾಡಲಾಗುವುದು ಎಂದಿದ್ದಾರೆ.
ಜಿಲ್ಲಾಧಿಕಾರಿ ಡಾ ಮಹಾಂತೇಶ ದಾನಮ್ಮನವರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಬಂದಿದ್ದೇವೆ. ನಿನ್ನೆ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದರ್ಶನ ಪಡೆದಿದ್ದಾರೆ. ಶ್ರೀಗಳಆರೋಗ್ಯದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು C.M ಅವರ ಅದೇಶ ಇದೆ. ಅವರ ಆದೇಶದ ಮೇರೆಗೆ ನಾವು ದಿನನಿತ್ಯ ಭೇಟಿ ಮಾಡುತ್ತಿದ್ದೇವೆ. ಕೆಲ ದಿನಗಳು ಶ್ರೀಗಳು ಊಟ ಮಾಡದೆ ಇರುವ ಕಾರಣ ಅವರು ಅಶಕ್ತರಾಗಿದ್ದಾರೆ. ಭಕ್ತರು ಯಾವುದೇ ರೀತಿ ಭಯ ಪಡುವ ಆತಂಕವಿಲ್ಲ ಎಂದು ಹೇಳಿದರು.
ಭಕ್ತರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ತಪ್ಪು ಸಂದೇಶದ ಕಾರಣ ಜನರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಈ ಕಾರಣ ನಾವು ಇಲ್ಲಿ ಬಂದಿದ್ದೇವೆ.ಶ್ರೀಗಳು ಆರೋಗ್ಯವಾಗಿದ್ದಾರೆ. ಏನೇ ಆದರೂ ನಾವು ಎಲ್ಲರ ಗಮನಕ್ಕೆ ತಂದೆ ತರುತ್ತೇವೆ ಯಾವುದೆ ಸುಳ್ಳು ಮಾಹಿತಿಗಳಿಗೆ ತಲೆ ಕೊಡಬೇಡಿ ಭಕ್ತರು ಗಾಬರಿಯಾಗಬೇಕಿಲ್ಲ. ಟ್ರಾಫಿಕ್, ಜನ ಸಂದನಿ, ಗದ್ದಲ ನಿವಾರಣೆಗೆ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಎಸ್ಪಿ ಹೆಚ್ ಡಿ ಆನಂದಕುಮಾರ ಹೇಳಿದರು.