ಶಾಲಾ ಮಕ್ಕಳಲ್ಲಿ ಡೆಂಗ್ಯೂ ತಡೆ – ಪ್ರತಿಜ್ಞಾ ವಿಧಿ ಬೋಧನೆ.
ಗುಂಡನಪಲ್ಲೆ ಸ.11

ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಕೀಟಜನ್ಯ ಆಶ್ರಿತ ರೋಗವಾಹಕ ರೋಗಗಳ ತಡೆಗೆ, ಗುಂಡನಪಲ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಾಲಾ ಮಕ್ಕಳಿಗೆ “ಸೊಳ್ಳೆ ನಿರ್ಮೂಲನೆ ಪ್ರತಿಜ್ಞೆ ವಿಧಿ ಬೋಧನೆ” ಆರೋಗ್ಯ ಜಾಗೃತಿ ಆಯೋಜಿಸಲಾಗಿತ್ತು.ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಕಡಿತ ಚಿಕ್ಕದು ಅಪಾಯ ದೊಡ್ಡದು ಘೋಷಣೆಗಳೊಂದಿಗೆ, ಶಾಲಾ ಮಕ್ಕಳಿಗೆ ಸೊಳ್ಳೆಗಳ ಕಡಿತದಿಂದ ಬರುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ ಆನೆಕಾಲು ಮೆದುಳು ಜ್ವರ ಡೆಂಗ್ಯೂ ಚಿಕೂನ್ ಗುನ್ಯಾ ಝಿಕಾ ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಮಹತ್ವ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವದರ ಬಗ್ಗೆ ಹಾಗೂ ಪಾಲಕರು ನೆರೆ ಹೊರೆ ಜಾಗೃತಿ ಮೂಡಿಸುವುದು. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ನಮ್ಮ ಗುರಿಯಾಗಬೇಕು ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ, ಕಾಪಾಡಿ ಕೊಳ್ಳಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು.

ಅನುಪಯುಕ್ತ ಟೆಂಗಿನ ಚಿಪ್ಪು ಒಡೆದ ಬಾಟಲ್ ಟೈರ್ ಟ್ಯೂಬ್ ಕಸ ವಿಲೇವಾರಿ ಮಾಡಬೇಕು ಆರೋಗ್ಯ ನಿರೀಕ್ಷಣಾಧಿಕಾರಿಗಳು ತಮ್ಮ ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸ ಬೇಕು. ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಶಾಲಾ ಮಕ್ಕಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಜಾಗೃತಿ ಪ್ರತಿಜ್ಞೆ ವಿಧಿ ಬೋಧನೆ ಮಾಡಿದರು. “ಆರೋಗ್ಯ ಜಾಗೃತಿ” ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಜಿ ಹುನಗುಂದ, ಸಹ ಶಿಕ್ಷಕರಾದ ಆರ್.ಬಿ ಅಂತರತಾನಿ, ರಾಜೇಶ ಹುಲಗನ್ನವರ, ನಾರಾಯಣಗೌಡ ಪಾಟೀಲ್,ಗುರು ಮಾತೆಯರಾದ ಭಾರತಿ ಗಣಿಯಾರ, ಅನಿತಾ ಗದಿಗೆನ್ನವರ, ಸುನಿತಾ ಮಾಸ್ತಿ, ಶಾಲಾ ಮುದ್ದು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.