“ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ” ಚಲನ ಚಿತ್ರಕ್ಕೆ ಮುಹೂರ್ತ.

ಬೆಂಗಳೂರು ಸ.11

ಸ್ನೇಹಾಲಯಂ ಕ್ರಿಯೇಷನ್ಸ್ ಬೆಂಗಳೂರ ಲಾಂಛನದಲ್ಲಿ ರಾಜೀವ್‌ಕೃಷ್ಣ ನಿರ್ಮಿಸುತ್ತಿರುವ “ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ” ಎಂಬ ವಿಭಿನ್ನ ಟೈಟಲ್ ಇರುವ ಚಲನ ಚಿತ್ರಕ್ಕೆ ಹೊಸಕೋಟೆ ತಾಲ್ಲೂಕಿನ ಎಂ ಸತ್ಯವಾರದ ಶ್ರೀ ಮಹೇಶ್ವರಮ್ಮ ದೇವಿಯ ಸನ್ನಿಧಾನದಲ್ಲಿ ಮುಹೂರ್ತ ನೆರವೇರಿತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಮಲೇಶ ಅವರು ಕ್ಲಾಪ್ ಮಾಡಿದರೆ. ಎಂ.ಸತ್ಯವಾರದ ಸಮಾಜ ಸೇವಕರಾದ ನಾಗೇಶ್ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಗೋವಾಗೆ ಟ್ರಿಪ್ ಹೊರಡುವ ಆರುಮಂದಿ ಹುಡುಗ ಹುಡುಗಿಯರ ಜೀವನದಲ್ಲಿ ಆಗಂತುಕನೊಬ್ಬ ಎದುರಾದಾಗ ಬರುವ ಸಂಕಷ್ಟಗಳು ಹಾಗೂ ಅವುಗಳನ್ನು ಆರು ಮಂದಿ ಸ್ನೇಹಿತರು ಹೇಗೆ ಎದುರಿಸುತ್ತಾರೆ ಎಂಬ ಕಥಾ ವಸ್ತುವಿರುವ ಈ ಚಿತ್ರದಲ್ಲಿ ಟಾಲಿವುಡ್ ನ ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿ ಬಂಗಾರಪೇಟ್, ದೀನ ಉಪ್ಪಾಡ, ರಾಮ್ ಜನಾರ್ದನ್, ರೂಪಶ್ರಿ, ಕಾಲಕೇಯ ಪ್ರಭಾಕರ್, ಅಶೋಕ್ ರೆಡ್ಡಿ, ದೇವರಾಜ್, ಎಂ ವಿ ಸಮಯ್, ಬಲರಾಂ, ಮೊದಲಾದವರು ಅಭಿನಯಿಸುತ್ತಿದ್ದು ಈಗಾಗಲೇ ಕನ್ನಡ, ತೆಲುಗು ಚಲನಚಿತ್ರ ರಂಗದಲ್ಲಿ ಚಿರ ಪರಿಚಿತರಾಗಿರುವ ಯುವ ಉತ್ಸಾಹಿ ನಿರ್ದೇಶಕ ಆರ್. ಕೆ. ಗಾಂಧಿ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ.ಎರಡೂವರೆ ಗಂಟೆಯ ಸಿನಿಮಾದಲ್ಲಿ “ಕ್ಲೈಮ್ಯಾಕ್ಸ್ ಇರುವುದಿಲ್ಲ” ಆದರೆ ಸಿನಿಮಾ ನೋಡಿದ ನಂತರ ಪ್ರೇಕ್ಷಕರೇ ಈ ಸಿನಿಮಾಕ್ಕೊಂದು ಒಳ್ಳೆಯ ಕ್ಲೈಮ್ಯಾಕ್ಸ್ ನೀಡಬೇಕೆಂದು ನಿರ್ದೇಶಕರು ವಿನಂತಿಸುತ್ತಾರೆ.

ಅದರಂತೆ ಪ್ರೇಕ್ಷಕ ಪ್ರಭುಗಳು ನೀಡಿದ ಅತ್ಯುತ್ತಮ ಕ್ಲೈಮ್ಯಾಕ್ಸ್ ಗೆ ನಗದು ಬಹುಮಾನ ವಿತರಣೆ ಮಾಡಲು ಕೂಡ ಚಿತ್ರತಂಡ ನಿರ್ಧರಿಸಿದೆ.ಸಕಲೇಶ್ವರ, ಮಂಗಳೂರು, ಬೆಂಗಳೂರು ,ಚಿಕ್ಕಬಳ್ಳಾಪುರ ಸುತ್ತ ಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಪ್ರಮೋದ್ ಆರ್ ಮತ್ತು ಬಿ ಯುವರಾಜ್ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಹಾಗೂ ಆರ್. ಕೆ. ಗಾಂಧಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಸೂರ್ಯ ಕಿರಣ್ ನೃತ್ಯ ಸಂಯೋಜನೆ, ಮಲ್ಲಿಕಾರ್ಜುನ ಕಲೆ, ಮೋಹನ್ ಕುಮಾರ್ ಪ್ರಸಾಧನ, ಇಂದ್ರ ಸ್ಥಿರ ಚಿತ್ರಣ, ಪಿ.ಆರ್.ಓ ಎಂ. ಜಿ. ಕಲ್ಲೇಶ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಗಿ, ನಿರ್ಮಾಣ ನಿರ್ವಹಣೆ ಅಶೋಕ್ ರೆಡ್ಡಿ ಅವರದಿದೆ.ಎಲ್ಲವೂ ಅಂದುಕೊಂಡಂತೆ ಆದಲ್ಲಿ ನವೆಂಬರ್ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿ ಕೊಂಡಿದೆ. ಕನ್ನಡ, ತೆಲಗು, ಎರಡು ಭಾಷೆಗಳಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ಹೇಳುತ್ತಾರೆ.

*****

ವರದಿ:ಡಾ.ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button