ಪೌರ ಕಾರ್ಮಿಕರ ಕ್ರೀಡಾಕೂಟಕ್ಕೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ ಚಾಲನೆ ನೀಡಿದರು.
ಕೊಟ್ಟೂರು ಸಪ್ಟೆಂಬರ್.25

ಪೌರ ಕಾರ್ಮಿಕರ ಸದೃಢ ದೇಹದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ.ನಸರುಲ್ಲಾ ಹೇಳಿದರು.ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನ ಹೆಚ್.ಜಿ ರಾಜ್ ಭವನ ಪಕ್ಕದ ಮೈದಾನದಲ್ಲಿ ಪೌರ ಕಾರ್ಮಿಕ ದಿನಾಚರಣೆ ನಿಮಿತ್ತ ಪೌರ ಕಾರ್ಮಿಕರ ಕ್ರೀಡಾಕೂಟಕ್ಕೆ ನಾಣ್ಯ ಪುಷ್ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ರವರು ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಸಿಬ್ಬಂದಿ ಅಧಿಕಾರಿಗಳು ಎಂಬ ಭೇದಭಾವ ಇಲ್ಲದೆ ಎಲ್ಲರೂ ಪರಸ್ಪರ ಸ್ನೇಹಿತರಂತೆ ಪಾಲ್ಗೊಂಡಿದ್ದಾರೆ ಎಂದರು.ಪೌರ ಕಾರ್ಮಿಕರು ಸ್ವಚ್ಛಗೊಳಿಸುವ ಸಮಯದಲ್ಲಿ ಪಟ್ಟಣ ಪಂಚಾಯಿತಿ ಆಡಳಿತದಿಂದ ನಿಮಗೆ ನೀಡಿದ್ದ ಬ್ಲೌಸ್ ಮಾಸ್ಕ ಶೂ ಧರಿಸಿಕೊಂಡು ಸ್ವಚ್ಛತೆ ಮಾಡಬೇಕು ನಿಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಮತ್ತು ಶಿವಮೊಗ್ಗದಲ್ಲಿ ನಾರಾಯಣ ಹೃದಯಾಲಯದ ವತಿಯಿಂದ ಚಿಕಿತ್ಸೆ ಕಾರ್ಯಕ್ರಮ ಇರುವುದರಿಂದ ತಾವೆಲ್ಲರೂ ಭಾಗವಹಿಸಿ ಆರೋಗ್ಯದ ಬಗ್ಗೆ ಚಿಕಿತ್ಸೆ ಪಡೆದು ಎಚ್ಚರ ವಹಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂ ಕಿರಿಯ ಆರೋಗ್ಯ ನಿರೀಕ್ಷಕರಾದ ಅನುಷಾ, ಸಿಬ್ಬಂದಿಗಳಾದ ಪರಶುರಾಮ್, ಚಂದ್ರಶೇಖರ್, ಸರ್ಕಾರಿ ಪದವಿಪೂರ್ವ ಕಾಲೇಜ್ ದೈಹಿಕ ಶಿಕ್ಷಕರಾದ ಶಶಿಧರ, ಅಜ್ಜಪ್ಪ, ಸೇರಿದಂತೆ ಪೌರ ಕಾರ್ಮಿಕರು ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು