ಭಕ್ತಿಯ ಕಡೆಗೆ ಒಲವು ಬರಲು ವಚನಗಳ ನೆರವು – ಡಾ. ಸಂಗಮೇಶ ಮೇತ್ರಿ.
ಇಂಡಿ ಫೆಬ್ರುವರಿ.5

ಜನರು ಭಕ್ತಿಯ ಕಡೆಗೆ ಜಾರಲು ದೇವರ ದಾಸಿಮಯ್ಯನವರ ವಚನಗಳು ಬಹು ಮುಖ್ಯ. ಅಗ್ರಹಾರವನ್ನು ಬಿಟ್ಟು ಮುದನೂರಿಗೆ ಬಂದು ರಾಮನಾಥನ ಸಾನಿಧ್ಯದಲ್ಲಿ ಜಗತ್ತಿಗೆ ಪ್ರಥಮವಾಗಿ ವಚನ ಸಾಹಿತ್ಯದ ಔತಣವನ್ನು ಕೊಟ್ಟವರು ಶ್ರೀ ದೇವರ ದಾಸಿಮಯ್ಯನವರು ಎಂದು ಡಾ. ಸಂಗಮೇಶ ಮೇತ್ರಿ ಹೇಳಿದರು. ವಿಜಯಪುರ ನಗರದ ಶ್ರೀ ಈಶ್ವರ ದಿನ್ನಿಮನಿ ಅವರ ಮನೆಯಲ್ಲಿ ನಡೆದ ತಾಯಿ ಬನಶಂಕರಿ ದೇವಿಯ ಪೂಜೆ ಹಾಗೂ ಮನೆಯಂಗಳದಲ್ಲಿ ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ಅರಿವು ಮೂಡಿಸಲು ಮನೆಯಂಗಳದಲ್ಲಿ ವಚನ ಕಾರ್ಯಕ್ರಮ ಪ್ರೇರಕವಾಗಿದೆ ಎಂದು ಹೇಳಿದರು. ಅಶ್ವಿನಕುಮಾರ ಕೋಷ್ಟಿ ಮಾತನಾಡಿ, ಸಮಾಜ ಸಂಘಟನೆಯಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ರವೀಂದ್ರ ಕಂಠಿ ಅವರು ವಚನ ವಿಶ್ಲೇಷಣೆ ಮಾಡಿ,ಮಾತನಾಡುತ್ತಾ,ದೇವರ ದಾಸಿಮಯ್ಯನವರ ವಚನಗಳಲ್ಲಿ ಬದುಕಿನ ಮಾರ್ಗದರ್ಶನ ಇದೆ.ಎಲ್ಲರೂ ಅವರ ಪ್ರತಿಯೊಂದು ವಚನದ ಸಾರಸತ್ವವನ್ನು ತಿಳಿದು ಬದುಕು ಸಾಗಿಸಬೇಕು ಎಂದು ಹೇಳಿದರು.ಪ್ರವೀಣ ಬಸರಕೋಡ ನಿರೂಪಿಸಿದರು. ಆನಂದ ಹುಲಮನಿ ಸ್ವಾಗತಿಸಿ, ವಂದಿಸಿದರು. ವಿದ್ಯಾ ದಿನ್ನಿಮನಿ. ಕಲ್ಪನಾ ಕ್ಯಾತಪ್ಪನವರ, ಲಕ್ಷ್ಮಿ ಮೇತ್ರಿ. ಪ್ರೇಮಾ ಬಿಜ್ಜಳ, ಸಂಗೀತಾ ಹುಲಮನಿ, ನಾಗೇಶ್ ಭಾವಿಕಟ್ಟಿ ಪ್ರಸಾದ ಬಸರಕೋಡ, ಬಿ ಕೆ ಅಪ್ಪಣ್ಣ ಸೇರಿದಂತೆ ದೇವಾಂಗ ಸಮಾಜದ ಅನೇಕ ಮುಖಂಡರು ಹಾಜರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ