ಹನಸಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.
ಹನಸಿ ಅಕ್ಟೋಬರ್.12

ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮ ಪಂಚಾಯಿತಿಯ 2ನೇ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಚಂದ್ರಶೇಖರ್ ಶಂಬಣ್ಣ ಗಾಳಿ, ಹಗರಿಬೊಮ್ಮನಹಳ್ಳಿ ಚುನಾವಣೆಯ ಅಧಿಕಾರಿ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ಒಟ್ಟು 17ಜನ ಸದಸ್ಯರುಗಳಲ್ಲಿ 17 ಜನ ಸದಸ್ಯರುಗಳು ಹಾಜರಾಗಿರುತ್ತಾರೆ, ಅದರಲ್ಲಿ 10, ಸದಸ್ಯರುಗಳು, ಅಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸಿದರು. ಒಂದು ಮತ, ಇನ್ವ್ಯಾಲಿಡ್ , ಅಧ್ಯಕ್ಷರಾಗಿ,ಎ.ಎಂ.ಗಂಗಾಧರಯ್ಯ, (ಸಾಮಾನ್ಯ ಪುರುಷ) ರವರು( 10ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಜೆ. ನಿಂಗವ್ವ (ಸಾಮಾನ್ಯಮಹಿಳೆ,) ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣೆ ಅಧಿಕಾರಿಗಳು ಘೋಷಿಸಿರುತ್ತಾರೆ,

ಚುನಾವಣೆಯು ಶಾಂತ ರೀತಿಯಿಂದ ಮುಕ್ತಾಯವಾಗಿದ್ದು ಕೂಡ್ಲಿಗಿ ತಾಲೂಕಿನ ಆರಕ್ಷಕ ಠಾಣೆಯ ಅಧಿಕಾರಿಗಳಾದ ಸಿಪಿಐ ಸುರೇಶ್ ತಳವಾರ್, ಹಾಗೂ ಪಿ . ಎಸ್.ಐ. ಧನಂಜಯ ಕುಮಾರ ,ರವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆಯಲ್ಲಿ ಗ್ರಾ.ಪಂ. ಅಧಿಕಾರಿಗಳಾದ , ಉಮೇಶ್ ಬಿ. ಕಾರ್ಯದರ್ಶಿ ಯಲ್ಲಪ್ಪ ಸಿ .ಹಾಗೂ ಸಿಬ್ಬಂದಿಯವರು , ಕಲ್ಲಹಳ್ಳಿ,ಕಣವಿ ನಾಯಕನ ಹಳ್ಳಿ,ಕಲ್ಲಹಳ್ಳಿ ತಾಂಡ, ಹನಸಿ ಗ್ರಾ .ಪಂ.ಸರ್ವ ಸದ್ಯಸ್ಯರು,ಗ್ರಾಮದ ಮುಖಂಡರುಗಳಾದ ಚಲವಾದಿ ಕೊಟ್ರೇಶ್,ಚಿನ್ನಪುರಿ,ಹಳ್ಳಿಮಾಬುಸಾಬ್, ಕೆ ಕೊಟ್ರೇಶ್, ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ, ಶುಭ ಹಾರೈಸಿದರು. ಹನಸಿ ಗ್ರಾಮದ ಹಿರಿಯ ಮುಖಂಡರು ಇದ್ದರು. ಈ ಚುನಾವಣೆಯು ಪಕ್ಷಾತೀತವಾಗಿ ನಡೆಯಿತು. ಈ ಚುನಾವಣೆಯು ಎರಡನೇ ಬಾರಿ ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಆಗಿರುವಂತಹ ಎ,ಎಂ. ಗಂಗಾಧರಯ್ಯ ಇವರು ಸತತವಾಗಿ 5ನೇ ಬಾರಿಯಾಗಿ ಗೆಲುವು ಸಾಧಿಸಿ ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ 2ನೇ ಅವಧಿಗೆ ಸಿಕ್ಕಿರುವದಕ್ಕೆ ಸೋಲಿಲ್ಲದ ಸರದಾರನಿಗೆ ಗ್ರಾಮದ ಮುಖಂಡರು ಯುವಕರು, ಮಹಿಳೆಯರು, ಎಲ್ಲರೂ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ:ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ