ಬದುಕು ನಮ್ಮದಾಗಲಿ…!
ಕೆಟ್ಟವರಿಗು ಒಳ್ಳೆಯ ದಾರಿ ತೋರಿಸಿ
ಅವಮಾನ ಅಪಮಾನ ಮಾಡಿದವರಿಗೆ ಸನ್ಮಾನಿಸಿ ನಮ್ಮವನಲ್ಲ ಅಂದವನೇ ನಮ್ಮವನು ಎನ್ನುವಂತಿಸಿ
ಬದುಕು ಬದಲಿಸುವ ಬನ್ನಿ ಎಲ್ಲರನ್ನು ಸಮಾಧಾನಿಸಿ
ಬದುಕು ಬದಲಾಗಲಿ ಸುಳ್ಳಿನ ಮಧ್ಯ ಸತ್ಯವಾಗಿ
ಬದುಕು ಬದಲಾಗಲಿ ಆಧರ್ಮದ ಮಧ್ಯ ಧರ್ಮವಾಗಿ
ಬದುಕು ಬದಲಾಗಲಿ ಹಿಂಸೆಯ ಮಧ್ಯ ಅಹಿಂಸೆಯಾಗಿ
ಬದುಕು ಬದಲಾಗಲಿ ಅನ್ಯಾಯದ ಮದ್ಯ ನ್ಯಾಯವಾಗಿ

ದಾನ ಧರ್ಮದಲ್ಲಿ ಕರ್ಣನಂತ ಬದುಕು ನಮ್ಮದಾಗಲಿ
ನ್ಯಾಯ ನೀತಿಯಲ್ಲಿ ಚಾಣಕ್ಯನಂತಹ ಬದುಕು ನಮ್ಮದಾಗಲಿ
ದೇಶ ಭಕ್ತಿಯಲಿ ಭಗತ್ ಸಿಂಗ್ ನಂತಹ ಬದುಕು ನಮ್ಮದಾಗಲಿ
ಸತ್ಯ ಅಂಹಿಸೆಯಲಿ ಗಾಂಧೀಜಿಯಂತ ಬದುಕು ನಮ್ಮದಾಗಲಿ
ಹೆತ್ತವರಿಗೆ ವಿಧೇಯಕರಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿ
ಅನಾಥರಿಗೆ ಬಂಧುವಾಗಿ ನೋಂದವರಿಗೆ ಆಶ್ರಯವಾಗಿ
ಗುರುಗಳಿಗೆ ಪ್ರೀತಿ ಪಾತ್ರರಾಗಿ ಸ್ನೇಹಿತರಿಗೆ ಬೆನ್ನೆಲುಬಾಗಿ
ಬದುಕು ಬದಲಿಸುವ ಬನ್ನಿರಿ ಮಾನವನಾಗಿ
ಶ್ರೀ ಮುತ್ತು. ಯ. ವಡ್ಡರ
ಬಾಗಲಕೋಟ
Mob-9845568484