ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿಗೆ ಕೇಂದ್ರವನ್ನು ಉದ್ಘಾಟಿಸಿದ – ಶಾಸಕ ಕಾಶಪ್ಪನವರ.

ಹುನಗುಂದ ಡಿಸೆಂಬರ್.4

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಅವರ ನೆರವಿಗೆ ಬಾರದ ಕೇಂದ್ರ ಸರ್ಕಾರ.ನಮ್ಮ ರಾಜ್ಯದ ಪಾಲನ್ನು ಕೊಡುವಲ್ಲಿ ಮಲತಾಯಿ ಧೋರಣೆಯನ್ನು ತಾಳಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹುನಗುಂದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಸರ್ಕಾರಿ ಆದೇಶದಂತೆ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಅವರು ತಾಲೂಕ ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರೂ ಸಹಿತ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ತಾಲೂಕಿನ ರೈತರ ಅಲ್ಪ ಸ್ವಲ್ಪ ಬೆಳೆದ ಸೂರ್ಯಕಾಂತಿ ಬೆಳೆಗೆ ಮಾರುಕಟ್ಟೆ ದರಕ್ಕಿಂತ ಸರ್ಕಾರ ಹೆಚ್ಚಿನ ದರ ರೂ. ೬೭೬೦/- ನಿಗಧಿಗೊಳಿಸಿ ಬೆಂಬಲ ಬೆಲೆಗೆ ಖರೀದಿಸುತ್ತದೆ.ರೈತನು ಆನ್‌ಲೈನ್ ಮೂಲಕ ಅರ್ಜಿಯೊಂದಿಗೆ ನೋಂದಾಣೆ ಮಾಡಿ ಕೊಂಡು ಅದರ ಸದುಪಯೋಗ ಪಡಿಸಿ ಕೊಳ್ಳಬೇಕು.ಒಬ್ಬ ರೈತನಿಂದ ೧೫.ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಲಾಗುವುದು ಎಂದರು.ಕೆಒಎಫ್ ಅಧಿಕಾರಿ ಆರ್.ಎನ್.ನಾಡಗೌಡ್ರ ಮಾತನಾಡಿ ಫಡೆರೆಷನ್ ನಿಯಮದಂತೆ ಗುಣ ಮಟ್ಟದ ಸೂರ್ಯಕಾಂತಿ ಬೀಜವನ್ನು ಖರೀದಿಸಲಾಗುವದು.ಇದಕ್ಕೆ ರೈತರು ಸಹಕರಿಸಬೇಕು ಎಂದರು.ಗ್ರೇಡರ್ ಬಸವರಾಜ ಡೋರನಾಳ ಮಾತನಾಡಿ ಸೂರ್ಯಕಾಂತಿ ಶೇ, ೪೫.ಗ್ರಾಂ ಗುಣ ಮಟ್ಟದ ಬೀಜಗಳನ್ನು ಖರೀದಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ,ಮುಖಂಡರಾದ ಶಿವಾನಂದ ಕಂಠಿ,ಶಿವಪ್ಪ ದರಗಾದ,ಮಲ್ಲು ಹೂಗಾರ, ನಿರ್ದೇಶಕ ಬಸವಂತಪ್ಪ ಅಂಟರತಾನಿ,ಬಸವರಾಜ ಬಂಗಾರಿ,ನಿಂಗಪ್ಪ ಹಂಚನಾಳ,ಮಂಜುನಾಥ ಕಟಗಿ,ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ದಂಡೀನ ಹಾಗೂ ಇತರರು ಇದ್ದರು. ಟಿಎಪಿಸಿಎಂಎಸ್ ಸಿಬ್ಬಂದಿ ರಾಜಶೇಖರ ಕರಂಡಿ ನಿರೂಪಿಸಿದರು. ವ್ಯವಸ್ಥಾಪಕ ಬಿ.ಎಸ್. ಕುದರಿಮನಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button