ಅನಂತ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಆಕ್ರೋಶ – ಕಾಂಗ್ರೇಸ್ ನಿಂದ ಅಣಕು ಶವಯಾತ್ರೆ.
ಹೊಸಪೇಟೆ ಜನೇವರಿ.16

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾದ ಶ್ರೀ ಸಿದ್ಧರಾಮಯ್ಯರವರನ್ನು ಅವಹೇಳನ ಕಾರಿಯಾಗಿ ಅಗೌರವದಿಂದ ಮಾತನಾಡಿದ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಅನಂತ ಕುಮಾರ್ ಹೆಗಡೆಯವರ ಅಣಕು ಶವಯಾತ್ರೆಯನ್ನು ನಗರದ ಒಡಕರಾಯ ದೇವಸ್ಥಾನ ದಿಂದ ತಾಲೂಕಾ ಕಚೇರಿವರೆಗೆ ಪಟಾಕಿ ಸಿಡಿಸುತ್ತಾ ಅವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಾ, ಧಿಕ್ಕಾರ ಕೂಗುತ್ತಾ ತಾಲೂಕಾ ಕಚೇರಿ ಮುಂದೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆ ಗೊಂಡು, ಹೆಗಡೆಯವರ ಭಾವ ಚಿತ್ರವಿರುವ ಬ್ಯಾನರ್ ಗೆ ಕಾಲಿನಿಂದ ತುಳಿದು, ಪೊರಕೆಗಳಿಂದ ಮತ್ತು ಮೊಟ್ಟೆಗಳನ್ನು ಹೊಡೆದು, ಆಕ್ರೋಶ ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಖ್ ನೀವು ಈ ದೇಶವನ್ನು ಗುತ್ತಿಗೆ ತಗೊಂಡಿದ್ದೀರಾ ನಾವೆಲ್ಲರೂ ದೇಶಭಕ್ತರಲ್ವಾ? ರಾಮನ ಭಕ್ತರಲ್ವಾ? ನಾನು ಶಾಸಕನಾಗಿದ್ದಾಗ 200 ದೇವಸ್ಥಾನಗಳನ್ನು ನಮ್ಮ ಕ್ಷೇತ್ರದಲ್ಲಿ ಕಟ್ಟಿಸಿದ್ದೇನೆ.

ಇಂದು ಸಿದ್ದರಾಮಯ್ಯನವರ ಯೋಜನೆಗಳಿಂದ ಈ ತಿಂಗಳ ಕೊನೆಯ ವರದಿ ಪ್ರಕಾರ ಒಂದು ಕೋಟಿಗೂ ಅಧಿಕ ಮಹಿಳೆಯರು ಶೇ.90 % ದೇವಸ್ಥಾನಗಳಿಗೆ ಬಸ್ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಒಂದು ಓಟಿಗಾಗಿ ಜಗಳವನ್ನಿಟ್ಟು ಅಮಾಯಕರ ರಕ್ತವನ್ನು ಹರಿಸಬೇಡಿ, ವಿಜಯನಗರ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರು ಅವಿನಾಭಾವ ದಿಂದಿದ್ದೇವೆ. ಇಂಥ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಸಿದ್ದರಾಮಯ್ಯನ ಅಭಿಮಾನಿಗಳು ರಾಜ್ಯದ ತುಂಬೆಲ್ಲಾ ಇದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಲ್ಲಿ ಪ್ರತಿಭಟಿಸಲು ಕರೆ ನೀಡಿದ್ದೇವೆ. ಚುನಾವಣೆ ಗೋಸ್ಕರ ಈ ರೀತಿ ಅಶಾಂತಿ ಉಂಟು ಮಾಡುವುದನ್ನು ನಿಲ್ಲಿಸಬೇಕು ಎಂದರು.ಮನವಿಯಲ್ಲಿ, ಇತ್ತೀಚಿಗೆ ಕುಮುಟಾ ಪಟ್ಟಣದಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ರವರು ಮಾತನಾಡುತ್ತಾ, ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದ್ದಾರೆ.ರಾಜ್ಯದಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿಕೆ ನೀಡಿ ರಾಜ್ಯದ ದೇಶದ ಜನರಿಗೆ ನೋವುಂಟು ಮಾಡಿದ್ದರು. ಚುನಾವಣೆ ಸಮೀಪಿಸಿ ದಂತೆಸಾರ್ವಜನಿಕವಾಗಿ ಕಾಣಿಸಿ ಕೊಂಡಿರುವ ಸಂಸದ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಹೇಳುವುದರ ಜೊತೆಗೆ ಅಶಾಂತಿಗೆ ಕಾರಣರಾಗಿ ಮಾತನಾಡಿರುವ ಹಿನ್ನಲೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಅವರು ಸಾರ್ವಜನಿಕವಾಗಿ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು, ಜೊತೆಗೆ ಸಂಸದ ಸ್ಥಾನದಿಂದ ವಜಾ ಮಾಡಿ, ರಾಜ್ಯದಿಂದ ಗಡಿಪಾರು ಮಾಡ ಬೇಕೆಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಮೂಲಕ ಆಗ್ರಹ ಮಾಡುತ್ತಿದೆ.ಈ ಸಂಧರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಶ್ರೀ ಸಿರಾಜ್ ಶೇಖ್, ಹೆಚ್.ಜಿ. ವಿರೂಪಾಕ್ಷ, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಡಿ.ವೆಂಕಟರಮಣ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಜಾ ಹುಸೇನ್, ರಘು ಕುಮಾರ್, ಎಲ್.ಸಿದ್ದನಗೌಡ, ಸಂಗಪ್ಪ, ಹೆಚ್.ಮಹೇಶ್, ರಾಮಚಂದ್ರ ಗೌಡ, ಪಿ.ವೀರಾಜನೇಯ, ಬಿ.ಮಾರೆಣ್ಣ, ಜಿ. ತಮ್ಮನ್ನೆಳ್ಳಪ್ಪ, ಸೋಮಶೇಖರ್ ಬಣ್ಣದಮನೆ,ಜೆ.ಶಿವಕುಮಾರ. ಗೋಪಾಲ ಕೃಷ್ಣ,*ನಗರಸಭೆ ಸದಸ್ಯರಾದ ಮಹಮ್ಮದ್ ಗೌಸ್, ಜಿ ರಾಘವೇಂದ್ರ, ಎಸ್.ಬಿ.ಮಂಜುನಾಥ, ಸಣ್ಣ ಮಾರೆಪ್ಪ, ಲಿಂಗಣ್ಣ ನಾಯಕ, ಭರತ್ ಕುಮಾರ್ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ