ಇಂದು ಮಹಿಳೆ ಎಲ್ಲ ರಂಗದಲ್ಲೂ ಸಶಕ್ತಳು – ಮಮತೆ,ಕರುಣೆ, ವಾತ್ಸಲ್ಯ, ತಾಳ್ಮೆಗೆ ಸಕಾರ ಮೂರ್ತಿ.
ಹುನಗುಂದ ಜನೇವರಿ.18

ಪ್ರತಿಯೊಂದು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಿಸಿ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಬುಧವಾರ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮಕ್ಕೆ ದೀಪ ಬೇಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸಲು ಸಶಕ್ತರನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯ ನಿಜಕ್ಕೂ ಮಹತ್ವ ಪೂರ್ಣವಾದುದು. ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಜೀವನ ನಡೆಸುವಂತಿತ್ತು. ಆದರೇ ಇಂದು ಮಹಿಳಯರು ಎಲ್ಲ ರಂಗದಲ್ಲಿ ತಮ್ಮ ಪ್ರತಿಭೆಗಳನ್ನು ತೋರುವ ಮೂಲಕ ಮಹಿಳೆ ಸಬಲೆ ಯನ್ನುವುದ್ದನ್ನು ಸಾಬೀತು ಮಾಡಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉನ್ನತವಾದ ಹಾಗೂ ಗೌರವಯುತ ಸ್ಥಾನವಿದೆ. ಮಮತೆ,ಕರುಣೆ,ವಾತ್ಸಲ್ಯ,ತಾಳ್ಮೆ, ಇವೆಲ್ಲ ಹೆಣ್ಣಿಗೆ ಗರ್ಭದಿಂದ ಬಂದ ಆಭರಣಗಳು.ಪೃಕೃತಿಗೂ ಮಹಿಳೆಗೂ ಅವಿನೋಭಾವ ಸಂಬಂಧವಿದೆ. ನಮ್ಮ ಸಂಸ್ಕೃತಿ,ಕುಟುಂಬ ನಿರ್ವಹಣೆ,ಸಮಾಜ,ದೇಶ, ಆರೋಗ್ಯಕರ ಮನೋಭಾವನೆ ಯಿಂದ ಮುನ್ನಡೆದು ಉನ್ನತಿ ಹೊಂದಲು ಉತ್ತಮ ಮಹಿಳೆಯರ ಪಾತ್ರ ಅತ್ಯಗತ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಾತಿ,ಮತ,ಧರ್ಮವನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಹಿಳೆಯರು ಇಂತಹ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡು ತಮ್ಮಲ್ಲಿರುವ ದೃಢ ಮನಸ್ಸು ಹಾಗೂ ಚಾಕ ಚಕ್ಯತೆಯಿಂದ ಎಲ್ಲ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ಹರ್ಷದಾಯಕವಾಗಿದೆ. ಇಂಥ ಸಂಘ-ಸಂಸ್ಥೆಗಳ ಮೂಲಕ ನೂತನ ಯೋಜನೆಗಳನ್ನು ಜಾರಿ ಮಾಡಿದರೆ ಗ್ರಾಮೀಣಾಭಿವೃದ್ಧಿ ಜೊತೆಗೆ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರೆಕಿಸಿ ಕೊಡಲು ಸಾಧ್ಯ ಎಂದರು.ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಗಣೇಶ ಮಾತನಾಡಿ ಕುಟುಂಬದ ಆರೋಗ್ಯ ಕಾಪಾಡಿ ಕೊಳ್ಳವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಎಲ್ಲ ಮಹಿಳೆಯರು ಪೂಜನೀಯರಾಗಿರುತ್ತಾರೆ. ಸಂತಾನವನ್ನು ಪಡೆದು ವಂಶಾಭಿವೃದ್ಧಿ ಮಾಡುವ ಹೆಣ್ಣು ಮನೆಗೆ ನಿರಂತರ ಬೆಳಕಿ ನಂತಿರುತ್ತಾಳೆ. ಮಹಿಳೆಯರು ಸಂಘಟಿತರಾಗಿ ಕೌಶಲ್ಯಭಿವೃದ್ಧಿ ಬೆಳೆಸಿ ಕೊಳ್ಳುವ ಮೂಲಕ ಜ್ಞಾನವಂತರಾಗ ಬೇಕು.ಮಹಿಳೆಯರು ಹುಟ್ಟಿದ ಮತ್ತು ಮೆಟ್ಟಿದ ಎರಡು ಮನೆಗಳನ್ನು ಬೆಳಗುವ ನಂದಾ ದೀಪವಾಗಬೇಕು.ಎಲ್ಲ ರಂಗಗಳಲ್ಲಿ ಸಾಧನೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಕೃಷ್ಣಾ ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂತೋಷ ಕುಮಾರ,ಪದ್ಮಾ ಕುಲಕರ್ಣಿ,ನಾಗರತ್ನ ಭಾವಿಕಟ್ಟಿ,ಎ.ಸಿ.ಗೌಡರ,ನೀಲಮ್ಮ ಆಲೂರ,ಅರುಣಾ ಜುಮನಾಳ,ಅರುಣಕುಮಾರ ಮಠಪತಿ,ಶಿವಲಿಂಗಮ್ಮ ಹಡಪದ,ಆನಂದ ಪಡಸಲಗಿ,ಮನೋಹರ, ಇನ್ನು ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ