ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕ್ ಸವಾರ ಸ್ಥಳದಲ್ಲಿ ದುರ್ಮರಣ.
ಹುನಗುಂದ ಜನೇವರಿ.18

ಪಟ್ಟಣದಿಂದ ಅಮೀನಗಡ ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರ ಮಾರ್ಗ ಮಧ್ಯದಲ್ಲಿ ನಿಯಂತ್ರಣ ತಪ್ಪಿ ಬೈಕ್ ಹಾಕಿಕೊಂಡು ಬಿದ್ದು ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ರಾತ್ರಿ ಹುನಗುಂದ ಸಮೀಪದ ಬೇವಿನಮಟ್ಟಿ ಕ್ರಾಸ್‌ನ ಬಳಿ ನಡೆದಿದೆ.ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಅಮೀನಗಡ ಪಟ್ಟಣದ ವಾರ್ಡ್ ನಂ.೧ರ ನಿವಾಸಿ ಮಹಾಲಿಂಗ ಮಲ್ಲಪ್ಪ ಹಲ್ಯಾಳ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.ಘಟನೆಯ ವಿವರ-ಅಮೀನಗಡ ಪಟ್ಟಣದ ನಿವಾಸಿ ಮಹಾಲಿಂಗ ಹಲ್ಯಾಳ ಈತನು ಅಮೀನಗಡದಲ್ಲಿ ವಾಟರ್ ಪಿಲ್ಟರ್ ಸಪ್ಲಾಯ್ ಮಾಡುತ್ತಿದ್ದ.ಬುಧವಾರ ಹುನಗುಂದ ಪಟ್ಟಣದಿಂದ ಅಮೀನಗಡ ಕಡೆಗೆ ಅತೀ ಜೋರಾಗಿ ಬೈಕ್ ತಗೆದು ಕೊಂಡು ಹೋಗುತ್ತಿರುವಾಗ ಬೇವಿನಮಟ್ಟಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಬೈಕ್ ಸ್ಕೀಡ್ ಆಗಿ ರಸ್ತೆ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಹುನಗುಂದ ಪೊಲೀಸ್ ಠಾಣೆ ಪಿಎಸ್‌ಐ ಚನ್ನಯ್ಯ ದೇವೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ