ಸಂವಿಧಾನ ಮತ್ತು ಅಂಬೇಡ್ಕರವರನ್ನು ವಿರೋಧಿಸುವ ಪಟ್ಟಭದ್ರ ಹಿತಾಸಕ್ತಿಗಳ ಹೇಳಿಕೆ ಖಂಡನೀಯ – ಕಾಶಪ್ಪನವರ.
ಹುನಗುಂದ ಜ.26

ದೇಶದ ಪವಿತ್ರ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ, ಬಾಬಾಸಾಹೇಬ ಅಂಬೇಡ್ಕರ ಅವರ ಕುರಿತು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ಹೇಳಿಕೆ ನೀಡುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸಬೇಕು ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ರವಿವಾರ ಪಟ್ಟಣದ ಟಿ.ಸಿ.ಎಚ್ ಕಾಲೇಜ್ ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ 76 ನೇ. ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಾತ್ಯಾತೀತ ತಳಹದಿ, ಜನರಿಂದ ಜನರಿಗಾಗಿ ಇರುವ ಪವಿತ್ರ ಪ್ರಜಾಪ್ರಭುತ್ವವನ್ನು ಡಾ, ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿ ಅಧ್ಯಕ್ಷತೆಯಲ್ಲಿ ಜಗತ್ಪ್ರಸಿದ್ಧ ಸಂವಿಧಾನ ರಚಿಸಿ ನಮಗೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಡಾ, ಅಂಬೇಡ್ಕರ ಕೊಟ್ಟ ಸಂವಿಧಾನದ ಅಡಿಯಲ್ಲಿ 76 ವರ್ಷ ಎಲ್ಲವನ್ನು ಅನುಭವಿಸಿ ಸದ್ಯ ಅವರನ್ನು ಮತ್ತು ಅವರ ಕೊಟ್ಟ ಸಂವಿಧಾನವನ್ನು ವಿರೋಧಿಸುವ ಮನಸ್ಥಿತಿಯುಳ್ಳವರು ಈ ದೇಶದ ಪ್ರಜೆಗಳೋ ಇಲ್ಲ ಬೇರೆ ದೇಶದ ಪ್ರಜೆಗಳೋ ಎನ್ನವುದು ಅನುಮಾನ ಕಾಡುತ್ತಿದೆ. ಸಂವಿಧಾನ ಬದಲಾವಣೆ ಮಾಡ್ತೀವಿ ಎನ್ನುವ ಪಟ್ಟಭದ್ರ ಹಿತಾಸಕ್ತಿಗಳುನ್ನು ನಾವು ಖಂಡಿಸದಿದ್ದರೇ ನಾವು ನಿಜವಾದ ಭಾರತೀಯರು ಎನ್ನಿಸಿ ಕೊಳ್ಳುವುದಕ್ಕೆ ಅರ್ಹರಲ್ಲ. ದೇಶದ ಸ್ವಾತಂತ್ರ ಹೋರಾಟಕ್ಕೆ ತ್ಯಾಗ, ಬಲಿದಾನಗೈದ ದಿಗ್ಗಜರನ್ನು ಮತ್ತು ಮಹಾತ್ಮರನ್ನು ಸ್ಮರಿಸಿ ಕೊಳ್ಳಬೇಕಾಗುತ್ತದೆ ಎಂದರು.ತಹಶೀಲ್ದಾರ ನಿಂಗಪ್ಪ ಬಿರಾದಾರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಡಾ, ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿದ ಬೃಹತ್ ಸಂವಿಧಾನವನ್ನು ನಮಗೆ ನಾವೇ ಅಂಗೀಕಾರ ಮಾಡಿಕೊಂಡ ದಿನವಾಗಿದೆ. ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವತಂತ್ರ ಹೋರಾಟಗಾರರು ನಿರ್ಣಯದಂತೆ ಜನವರಿ 26 ರಂದು ನಮ್ಮ ದೇಶದ ಸಂವಿಧಾನ ಜಾರಿಗೆ ಬಂದಿದೆ ಅಲ್ಲಿಂದ ನಮ್ಮ ದೇಶದಲ್ಲಿ ಸುಸ್ಥಿತಿ ಆಡಳಿತ ಜಾರಿಯಲ್ಲಿದೆ ಎಂದರು.ಧ್ವಜಾರೋಣದ ಬಳಿಕ ಪಿ.ಎಸ್.ಐ ಪ್ರಕಾಶ್.ಡಿ ನೇತೃತ್ವದಲ್ಲಿ ಮತ್ತು ವಿವಿಧ ಶಾಲೆಗಳ ಎನ್.ಸಿ.ಸಿ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ನಡೆಸಿದ ಪಥ ಸಂಚಲನ ಕೂಡಿದ ಜನರ ಕಣ್ಮನವನ್ನು ಸೆಳೆಯಿತು.ಈ ಸಂದರ್ಭದಲ್ಲಿ ಕಬ್ಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕೆ.ಪಿ.ಎಸ್ ಧನ್ನೂರದ ಕು.ಚಂದ್ರಿಕಾ ನಾಗಬೇನಾಳ, ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿ.ಎಂ.ಎಸ್.ಆರ್ ಕಾಲೇಜ್ ವಿದ್ಯಾರ್ಥಿಗಳಾದ ಮಂಜುನಾಥ ಮುರಟಗಿ, ಪ್ರವೀಣ್ ಭೋವಿ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಅಂತರ್ಜಾತಿ ವಿವಾಹದ ಮೂರು ಜೋಡಿ ದಂಪತಿಗಳಿಗೆ ಸಾಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ವಿತರಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸದಸ್ಯರಾದ ಬಸವರಾಜ್ ಗೊನ್ನಾಗರ, ಶಾಂತಾ ಮೇಲಿನಮನಿ, ಮುಖಂಡರಾದ ಮಹಾಂತೇಶ ಅವಾರಿ, ಶಿವಾನಂದ ಕಂಠಿ, ಶೇಖರಪ್ಪ ಬಾಗವಾಡಗಿ, ಸಿದ್ದಪ್ಪ ಹೊಸೂರ, ಮಾಂತಪ್ಪ ಪಲ್ಲೇದ ನೀಲಪ್ಪ ತಪೇಲಿ, ವಿಶ್ವನಾಥ ಬ್ಯಾಳಿ, ಸಂಗಪ್ಪ ಹೂಲಗೇರಿ, ತಾ.ಪಂ. ಇ.ಓ ಮುರಳಿಧರ ದೇಶಪಾಂಡೆ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಸುನಿಲ್ ಸವದಿ ಸೇರಿದಂತೆ ಅನೇಕ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮಿನ ಕಿಲ್ಲೇದಾರ ಸ್ವಾಗತಿಸಿದರು, ಸಂಗಮೇಶ ಹೊದ್ಲೂರ ನಿರೂಪಿಸಿ ವಂದಿಸಿದರು.
ಬಾಕ್ಸ್ ಸುದ್ದಿ:-ಡಾ, ಬಾಬಾ ಸಾಹೇಬರು ಕೊಟ್ಟ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ.
ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾಯಿಸಲು ಎಷ್ಟೇ ಕಸರತ್ತು ನಡೆಸಿದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ. ಸರ್ವರಿಗೂ ಸಮಬಾಳ ಸಮಪಾಲು ತತ್ವದ ಅಡಿಯಲ್ಲಿ ಡಾ, ಬಾಬಾಸಾಹೇಬ್ ಅಂಬೇಡ್ಕರ ಅವರು ಕೊಟ್ಟ ಪವಿತ್ರ ಸಂವಿಧಾನ ನೂರಾರು ವರ್ಷ ಜಾರಿಯಲಿ ಇದ್ದೇ ಇರುತ್ತೆ.ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧ.
ವಿಜಯಾನಂದ ಕಾಶಪ್ಪನವರ. ಶಾಸಕರು ಹುನುಗುಂದ ಮತಕ್ಷೇತ್ರ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ