ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀಮಡಿವಾಳ ಮಾಚಿದೇವರ ಶರಣರ ಜನ್ಮ ದಿನ ಆಚರಣೆ.
ಸಿಂದಗಿ ಫೆಬ್ರುವರಿ.1

ಇಂದು ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಶ್ರೀ ಮಡಿವಾಳ ಮಾಚಿ ದೇವರ ಶರಣರ ಜನ್ಮದಿನವನ್ನು ಆಚರಣೆ ಮಾಡಲಾಯಿತು 12.ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಹಾಗೆ ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎನ್ನುವ ಹಾಗೆ ಬಸವಾದಿ ಶರಣರ ಮೂಲ ಆಸೆ ಯಾಗಿತ್ತು ಆದರೆ ಅದರ ವಿರುದ್ಧವಾಗಿ ವರ್ಣಾಶ್ರಮ ಇತ್ತು ಈ ಪದ್ಧತಿ ಇದು ಅನಾವಶ್ಯಕ ಮತ್ತು ಇದರಿಂದ ಮನುಷ್ಯ ಕುಲಕ್ಕೆ ವಿನಾಶವಾಗುವುದು ಹಾಗಾಗಿ ನಾವು ಅವರು ಶ್ರೇಷ್ಠರು ಇವರು ಕನಿಷ್ಠರು ಎಂಬ ಭೇದ ಭಾವವನ್ನು ಮರೆತು ಮಾನವೀಯ ಧರ್ಮ ಎತ್ತು ಹಿಡಿಯ ಬೇಕೆಂದು ಬಸವಾದಿ ಶರಣರ ಆಸೆಯಾಗಿತ್ತು ವರ್ಣಾಶ್ರಮ ಪದ್ಧತಿ, ಮೈಗೂಡಿಸಿ ಕೊಂಡ ಮನ ಮೈಲಿಗೆ ಮಾಡಿಕೊಂಡ ಕೆಲ ಮನುಜರ ಮನದ ಮೈಲಿಗೆಯನ್ನು ಸ್ವಚ್ಛ ಗೊಳಿಸಿದು ಬಸವಾದಿ ಶರಣರ ವಚನಗಳು ಹಂತ ಬಸವಾದಿ ಶರಣರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಬಿಚ್ಚು ಖಡ್ಗವನ್ನು ಹಿಡಿದು ಹೋರಾಟ ಮಾಡಿ ಶರಣ ಸಂತತಿ ಮತ್ತು ವಚನ ಸಾಹಿತ್ಯವನ್ನು ಉಳಿಸುವಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಟ ಮಾಡಿದವರು ವೀರ ಗಣಾಚಾರಿ ಮಾಚಿದೇವರು ಅಂತಹ ಶರಣರ ಆದರ್ಶ ಮತ್ತು ಮಾರ್ಗದರ್ಶನ ನಮಗೆ ಮನುಜ ಕುಲಕ್ಕೆ ಅತ್ತೆ ಅವಶ್ಯಕತೆವಾಗಿದ್ದು ನಾವು ಅವರ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಜೀವನದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಅಂಗವಿಕಾರವಳಿದು, ಜಂಗಮ ಲಿಂಗಲಾಂಛನ ವಿಭೂತಿ ರುದ್ರಾಕ್ಷಿಯ ದರ್ಶನವಿಲ್ಲದೆ ಜಂಗಮ ವೆನಿಸಿಕೊಂಬ ಭಂಗಿತರು, ಭಕ್ತ, ವಿರಕ್ತರಾಗಲಾಗದೆಂಬ ಕಲಿದೇವಯ್ಯ ಕಾಯಕವೇ ನಿಜ ಭಕ್ತಿ, ಪರರ ಸೇವೆಯೇ ನಿಜ ಧರ್ಮ, ಸಾಮಾಜಿಕ ಕ್ರಾಂತಿಯೇ ನಿಜ ಮನುಷ್ಯ ಗುಣ ಎಂದು ಜಗತ್ತಿಗೆ ಸಾರಿದ. ಮಹಾಸಿದ್ದ ಶರಣಶ್ರೀ ಮಡಿವಾಳ ಮಾಚಿದೇವ ಮತ್ತು ನಮಗೆ ಹೆಮ್ಮೆಯ ವಿಷಯ ಅಂದರೆ ಅವರು ಇದೆ ದೇವರ ಹಿಪ್ಪರಗಿ ಜನಿಸಿದ್ದು ಅವರ ತಂದೆ ಶ್ರೀಪರ್ವತಯ್ಯ ಮತ್ತು ತಾಯಿ ಶ್ರೀಸುಜ್ಞಾನಿ ಉದರದಲ್ಲಿ ಜನಿಸಿದ ಮಹಾನ್ ಶರಣರು ಎಂದು ಶ್ರೀ ಮಡಿವಾಳ ಮಾಚಿ ದೇವರ ಶರಣರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಪ್ರಯೋಗ ಶಾಲಾ ಅಧಿಕಾರಿಗಳಾದ ರಾಜಶೇಖರ್ ನರಗೋದಿ .ಇದೆ ಸಂದರ್ಭದಲ್ಲಿ ದಂತ ವೈದ್ಯಾಧಿಕಾರಿಯಾದ. ಡಾ,ರಮೇಶ್ ರಾಠೋಡ್ ಮಾತನಾಡಿದರು ಕಾರ್ಯಕ್ರಮ ನಿರೂಪಣೆ ಶ್ರೀಎಂ.ಪಿ .ಸಾಗರ್ ಮಾಡಿದರು ಕಾರ್ಯಕ್ರಮದಲ್ಲಿ ಶುಶ್ರೂಷಕಿ ಅಧಿಕಾರಿಯಾದ ಶ್ರೀಮತಿವಿದ್ಯಾ ಹಿರೇಪಟ್ ಮತ್ತು ಶುಶ್ರೂಷಕಿ ಅಧಿಕಾರಿಯಾದ ಶ್ರೀಮತಿ ದೇವಮ್ಮ ಕೊಣ್ಣೂರ್ ಮತ್ತು ಎಸ್.ಡಿ.ಸಿ ಶ್ರೀಮತಿ ರಾಜೇಶ್ವರಿ ಮುರ್ಗನೂರ್ ಮತ್ತು ಆಯುಷ್ ವೈದ್ಯಾಧಿಕಾರಿಗಳಾದ ಡಾ ಮಾಂತೇಶ್ ಹಿರೇಮಠ್ ಮತ್ತು ಇನ್ನೋರ್ವ ಆಯುಷ್ ಅಧಿಕಾರಿಗಳಾದ ಡಾ,ಮೌನೇಶ್ ಬಡಿಗೇರ್ ಮತ್ತು ಶುಶ್ರೂಷಕ ಅಧಿಕಾರಿಯಾದ ರಾಯಣ್ಣ ಸೊನ್ನಳ್ಳಿ ನಿಂಗಣ್ಣ ಗೊರಗುಂಡಗಿ ಎಸ್ ಡಿ ಸಿ ಯಾದ ಶಂಕರಲಿಂಗ ಮೊನೆಗೇರ, ಎಫ್.ಡಿ .ಸಿ ಯಾದ ಡಿ.ಡಿ ಮಾಳಸಿದ್ದ ಮತ್ತು ಔಷದ ಸಂಯೋಜಿಕರಾದ ಸುರೇಶ್ ಪಾಟೀಲ್. ಪ್ರಯೋಗಾಲಯ ಅಧಿಕಾರಿಯಾದ ಲವ ಗಾಣಿಗೇರ .ಮತ್ತು ಆಪ್ತ ಸಮಾಲೋಚಕರಾದ ಸಾಯ್ಬಣ್ಣ.ಕ್ಷಯ ರೋಗ ವಿಭಾಗದ ಶಶಿ ಮತ್ತು ಪ್ರಯೋಗಾಲಯ ಅಧಿಕಾರಿಗಳಾದ ಅಶೋಕ್ ಕಡಲಗೊಂಡ ಸುನಿಲ್ ನೇಮಶೆಟ್ಟಿ ಮಾಂತು ತಾಲೂಕ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ ದೇವರಹಿಪ್ಪರಗಿ