ಕರುನಾಡಿನ ನಟಿಮಣಿಯರನ್ನ ಹುಡುಕುವ ಮಹಾನಟಿ ಕಾರ್ಯಕ್ರಮ ಬಾಗಲಕೋಟೆಯಲ್ಲಿ ಆಯೋಜನೆ.
ಬಾಗಲಕೋಟೆ ಫೆಬ್ರುವರಿ.10

ನಟಿಯಾಗುವ ಕನಸಿಗೆ ನೀರೆರೆಯಲಿದೆ ಮಹಾನಟಿ ಕಾರ್ಯಕ್ರಮ, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಾಯಕ ನಟಿಯರನ್ನ ಹುಡುಕುವ ಕೆಲಸ ಶುರು(ಆವಿಷ್ಕಾರ) ಮಾಡಿದೆ. ಜೀ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು,ಡಿಕೆಡಿ ಮತ್ತು ಸರಿಗಮಪ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು , ಗಾಯಕ ಗಾಯಕಿಯರು ಹಾಗೂ ಕೊರಿಯೋ ಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ ಕನ್ನಡ ವಾಹಿನಿ ಇದೀಗ ಮಹಾನಟಿ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ನಿಮ್ಮೂರಿನಲ್ಲಿರುವ ನಟಿಯಾಗುವ ಕನಸು ಹೊತ್ತಿರುವ, ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಈ ಕಾರ್ಯಕ್ರಮವನ್ನ ಹೆಣೆದ್ದಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ.ಕರುನಾಡಿನ ಧೀಮಂತ ನಾಯಕ ನಟಿಯರ ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಾಯಕ ನಟಿಯರಿಗೆ ವೇದಿಕೆ ಕಲ್ಪಿಸಿ ಕೊಡುವ ಈ ಮಹಾನಟಿ ಕಾರ್ಯಕ್ರಮವು ,ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು, ನಿಮ್ಮ ಪ್ರತಿಭಯೆನ್ನ ಗುರುತಿಸಿ, ನಿಮ್ಮನ್ನ ಈ ವೇದಿಕೆ ಕರೆ ತರುವ ಕೆಲಸವನ್ನ ಈ ಮೂಲಕ ಮಾಡಲಿದೆ.ಮಹಾನಟಿ ಎಂಬ ಈ ರಿಯಾಲಿಟಿ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತ ವೆಂಬಂತೆ ಇದೇ ಸೋಮವಾರ 12-02-2024 ರಂದು ಬೆಳಿಗ್ಗೆ 9 ಗಂಟೆಗೆ ಲಿಟಲ್ ವಂಡರ್ಸ್ ಇಂಟರ್ನ್ಯಾಷನಲ್ ಸ್ಕೂಲ್,ಸ್ಟೇಡಿಯಂ ರೋಡ್, ನವನಗರ ಬಾಗಲಕೋಟೆ. ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು. ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರೆಸ್ ಪ್ರೂಫ್ ಜೆರಾಕ್ಸ್ ತೆಗೆದು ಕೊಂಡು ಬಂದು ಭಾಗವಹಿಸ ಬಹುದಾಗಿದ್ದು, ಜೀ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯ ಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.