ತಾಯಕನಹಳ್ಳಿ ಶ್ರೀಗುರು ಕನಕ ವಿದ್ಯಾ ಕೇಂದ್ರದಲ್ಲಿ 23.ನೇ ವರ್ಷದ ಶಾಲಾ ವಾರ್ಷಿಕೋತ್ಸವ.

ತಾಯಕನಹಳ್ಳಿ ಮಾರ್ಚ್.2

ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಜೀವನಕ್ಕೆ ಅವಶ್ಯಕವಾದ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ವಿಧಾನಸೌಧ ಕಾನೂನು ಇಲಾಖೆ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ಹೇಳಿದರು. ತಾಲೂಕಿನ ತಾಯಕನಹಳ್ಳಿ ಶ್ರೀಗುರು ಕನಕ ವಿದ್ಯಾ ಕೇಂದ್ರದಲ್ಲಿ ಆಯೋಜಿಸಿದ್ದ 23.ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಶಾಲೆಯಲ್ಲಿ 23 ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿ ಉನ್ನತ ಶ್ರೇಣಿಗೆ ಹೋಗಲು ಅನುಕೂಲ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಂದೇ ಶಾಲೆಯಲ್ಲಿ ನವೋದಯಕ್ಕೆ ಆಯ್ಕೆಯಾಗುವ ಹಾಗೆ ತರಬೇತಿ ನೀಡುವ ಶಾಲೆ ಇದಾಗಿದೆ ‌ ಇಲ್ಲಿ ಕಲಿತ ವಿದ್ಯಾರ್ಥಿಗಳು ಹಲವಾರು ಡಾಕ್ಟರ್, ಇಂಜಿನಿಯರ್, ಮತ್ತು ಸರ್ಕಾರಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಇಂಥ ಹಳ್ಳಿಯಲ್ಲಿ ಇನ್ನೂ ಎರಡು ವರ್ಷ ಕಳೆದರೆ 25.ನೇ ರಜತ ಮಹೋತ್ಸವ ಆಚರಿಸಿ ಕೊಳ್ಳಲಿರುವ ಶಾಲೆ ಎಂದರೆ ಶ್ರೀ ಗುರು ಕನಕ ವಿದ್ಯಾ ಕೇಂದ್ರ ಶಾಲೆ ಎಂದು ಹೇಳಿದರು.ಈ ವೇಳೆ ಯೋಗಾನಂದ ವಕೀಲರು ಮಾತನಾಡಿ ಹಳ್ಳಿಯ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿರುವ ಇಂತಹ ಶಾಲೆಗೆ ಪೋಷಕರು ಸಾರ್ವಜನಿಕರು ಪ್ರೋತ್ಸಾಹಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎ ಬಿ ರಂಗಪ್ಪ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ತಾಯಕನಹಳ್ಳಿ ಅವರು ಮಾತನಾಡಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಮಕ್ಕಳು ಪ್ರತಿ ವರ್ಷ ನವೋದಯ, ಮೊರಾರ್ಜಿ, ಆದರ್ಶ ಹಾಗೂ ಸೈನಿಕ ಶಾಲೆಗಳಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಇದಕ್ಕೆ ಬುನಾದಿ ಕನ್ನಡ ಮಾಧ್ಯಮ ಶಾಲೆ ಶ್ರೀ ಗುರು ಕನಕ ವಿದ್ಯಾ ಕೇಂದ್ರ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಮಂಜಣ್ಣ ಸ್ವಾಗತಿಸಿದರು.ಈ ವೇದಿಕೆಯಲ್ಲಿ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಲೆಯ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು, ನಂತರ ವಿಧ್ಯಾರ್ಥಿಗಳು ಮನೋರಂಜನೆ, ನೃತ್ಯ ಕಾರ್ಯಕ್ರಮಗಳನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು ರಾಮಚಂದ್ರಪ್ಪ, ಪ್ಯಾರಿಮಬಿ ಘನಿಸಾಬ್ ಗ್ರಾ.ಪಂ ಉಪಾಧ್ಯಕ್ಷರು, ಹೆಚ್ ಮಹಾಂತಪ್ಪ, ಕೆ. ಕೆಂಚಲಿಂಗಪ್ಪ ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ, ಹೂಡೇಂ ಗ್ರಾ.ಪಂ ಸದಸ್ಯರು ಕೆ ಎನ್ ರಾಘವೇಂದ್ರ, ಬಿ ಕುಮಾರ್, ಬಿ ಕಾಟಯ್ಯ, ಸಾಕಮ್ಮ ಅಂಜಿನಪ್ಪ, ಟಿ ಅನು ಗದ್ದಿಗೇಶ, ಪಾರ್ವತಮ್ಮ ಕ್ಯಾತಯ್ಯ ಹಾಗೂ ಮುಖಂಡರು ಶಾಂತಪ್ಪ, ಕರಿಯಣ್ಣ, ಲಕ್ಕಜ್ಜಿ ಮಲ್ಲಿಕಾರ್ಜುನ, ಹೂಡೇಂ ಗ್ರಂಥಾಲಯ ಮೇಲ್ವಿಚಾರಕರು ತುಡುಮ ಗುರುರಾಜ್, ಶಾಲಾ ಬೂದಾನಿಗಳು ಗೋಳಜ್ಜನವರ ಹನುಮಪ್ಪ ಹಾಗೂ ಶಾಲಾ ಮುಖ್ಯ ಶಿಕ್ಷಕರು ಸುನಿತಾ ಗುರುರಾಜ್, ಸಾಹ ಶಿಕ್ಷಕರು ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ಪ್ರಭಾಕರ, ರುದ್ರಮ್ಮ , ಬಸವರಾಜ, ಕುಬೇರ, ಸರೋಜಾ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಎಲ್ಲಾ ಸದಸ್ಯರು ಮತ್ತು ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button