ಗೌರವ ಧನ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ – ಮಾಂತೇಶ ಬಸರಗಿ ಒತ್ತಾಯ.
ಜಮಖಂಡಿ ಸ.18

ರಾಜ್ಯ ಸರ್ಕಾರವು ನಾಲ್ಕು ತಿಂಗಳಾದರೂ ಅತಿಥಿ ಶಿಕ್ಷಕರ ಗೌರವ ಧನವನ್ನು ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರವು ಅತಿಥಿ ಶಿಕ್ಷಕರ ವೇತನ ಬಿಡುಗಡೆ ಮಾಡಬೇಕು, ವಿಳಂಬ ಧೋರಣೆ ತೋರಿದರೆ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮಾಡ ಬೇಕಾಗುತ್ತದೆ. ಸಾಮಾಜಿಕ ಹೋರಾಟಗಾರ ಮತ್ತು ಅಧ್ಯಕ್ಷರು ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ ಜಮಖಂಡಿ ಮಾಂತೇಶ ಬಸರಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು. ಮಾಂತೇಶ ಬಸರಗಿ ಮಾತನಾಡುತ್ತಾ ರಾಜ್ಯ ಸರ್ಕಾರ ಆರ್ಥಿಕ ಇಲಾಖೆಯ ವೇತನ ಹೆಚ್ಚಳದ ಕುರಿತು ಕಳುಹಿಸಿದ ಕಡಿತದ ಸಂಖ್ಯೆ 166 ಎಸ್ ಇ ಎಸ್ 202 ಇದರ ಪ್ರಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ವೇತನ 10,000 ದಿಂದ 15000 ಕ್ಕೆ ಏರಿಕೆ ಯಾಗಬೇಕು ಪ್ರೌಢ ಶಾಲಾ ಅತಿಥಿ ಶಿಕ್ಷಕರ ವೇತನ 10500 ರಿಂದ 16 ಸಾವಿರಕ್ಕೆ ಏರಿಕೆ ಮಾಡಬೇಕು ಈ ಪ್ರಸ್ತಾವನೆಯನ್ನು ಸಹಮತಿಗೆ ಆರ್ಥಿಕ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಇಂದಿನ ಅತಿಥಿ ಶಿಕ್ಷಕರ ಬದುಕಿನ ಆಶಾಕಿರಣವಾಗಿರುವ ಸಂಬಳವು ಸಿಗದೇ ಇದ್ದ ಮತ್ತೊಂದು ಕೆಲಸವು ಸಿಗದೇ ಅತಿಥಿ ಶಿಕ್ಷಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಅತಿಥಿ ಶಿಕ್ಷಕರ ವೇದನೆಯನ್ನು ಕೇಳುವರು ಯಾರು ಇಲ್ಲದಂತಾಗಿದೆ ಸರ್ಕಾರವು ಸಚಿವರು ಪ್ರತಿಪಕ್ಷ ನಾಯಕರು ಕೂಡ ಅತಿಥಿ ಶಿಕ್ಷಕರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಕುಮಾರ್ ತೇಲಿ, ಶಿವಲಿಂಗ ಮಾಳಿ, ಶ್ರೀಶೈಲ್ ಬಿರಾದಾರ್ ರವೀಂದ್ರ ರತ್ನಾಕರ್, ಅಣ್ಣಪ್ಪ ದಡ್ಡಿಮನಿ, ರಮೇಶ್ ಕಾಕಂಡಕಿ, ಚಂದ್ರಕಾಂತ್ ಬ್ಯಾಡಗಿ, ಗಿರೀಶ್ ಕಾಂಬಳೆ, ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ