ಚಿತ್ರದುರ್ಗದಲ್ಲಿ ಶ್ರೀ ಮುರುಳಿ ಅಟೋ ಮೊಬೈಲ್ಸ್ ಮತ್ತು ದ್ವಿಚಕ್ರ ವಾಹನಗಳ ನೂತನ ಗ್ಯಾರೇಜ್ ಆರಂಭ.
ತಮಟಕಲ್ಲು ಮಾರ್ಚ್.3

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯ ಮೆದೇಹಳ್ಳಿ N H # 4 ಬೈ ಪಾಸ್ ಎದುರು ” ಶ್ರೀ ಮುರುಳಿ ದ್ವಿಚಕ್ರ ವಾಹನಗಳ ಆಟೋ ಮೊಬೈಲ್ಸ್ ಮತ್ತು ಗ್ಯಾರೇಜ್ ನ್ನು ಇಂದು ನೂತನವಾಗಿ ಆರಂಭಿಸಲಾಗಿದೆ.ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು ಗ್ರಾಮದ ಶ್ರೀಯುತ ಶಿವಮೂರ್ತಿ ಮತ್ತು ಶ್ರೀಮತಿ ತಿಮ್ಮಕ್ಕನವರ ದ್ವಿತೀಯ ಪುತ್ರ ಶ್ರೀಮುರುಳಿ ಇವರು ಅತ್ಯಂತ ಆತ್ಮ ವಿಶ್ವಾಸದೊಂದಿಗೆ ಈ ಗ್ಯಾರೇಜ್ ನ್ನು ಆರಂಭಿಸಿದ್ದಾರೆ,ಇಲ್ಲಿ ಎಲ್ಲಾ ದ್ವಿಚಕ್ರ ವಾಹನಗಳ ಉತ್ತಮ ಗುಣಮಟ್ಟದ ಬಿಡಿ ಭಾಗಗಳು ಸಿಗುತ್ತವೆ ಅಲ್ಲದೆ ಉತ್ತಮ ರೀತಿಯ ಸರ್ವೀಸ್ ನ್ನೂ ಸಹ ಇಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಮಾಡಿ ಕೊಡಲಾಗುತ್ತದೆ.

ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಹಾಗೂ ನೆರೆ ಹೊರೆಯ ಎಲ್ಲಾ ರೈತರು ಸಾರ್ವಜನಿಕರು,ಸ್ನೇಹಿತರು,ಹಿತೈಷಿಗಳು, ಹಾಗೂ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ. ಇಲ್ಲಿ ಅತೀ ಹೆಚ್ಚು ಮೈಲೇಜು ಹಾಗೂ ದೀರ್ಘಕಾಲಿಕ ಬಾಳಿಕೆ ಬರುವ ದ್ವಿಚಕ್ರ ವಾಹನಗಳ ಎಲ್ಲಾ ಬಿಡಿ ಭಾಗಗಳು ರಿಯಾಯತಿ ದರದಲ್ಲಿ ದೊರೆಯುತ್ತವೆ ಮತ್ತು ಉತ್ತಮ ಗುಣಮಟ್ಟದ ಎಲ್ಲಾ ದ್ವಿಚಕ್ರ ವಾಹನಗಳ ಸುರಕ್ಷತೆ ಹಾಗೂ ವಿನೂತನ ಟೆಕ್ನಾಲಜಿಯೊಂದಿಗೆ ಎಲ್ಲಾ ಸರ್ವೀಸ್ ಗಳನ್ನು ಮಾಡಿ ತ್ವರಿತವಾಗಿ ರೆಡಿ ಮಾಡಿ ಕೊಡಲಾಗುತ್ತದೆ.ಈ ಸಂದರ್ಭದಲ್ಲಿ ಎಂ.ಟಿ ಮಂಜುನಾಥ್ LIC ,ಯಶ್ವಂತ್ ಕುಮಾರ್ ಪೊಲೀಸ್ ಇಲಾಖೆ, ಮಂಜುನಾಥ್.ಎಲ್ , ಕೆ.ಎಸ್. ಆರ್ .ಟಿ .ಸಿ, ಮಲ್ಲಿಕಾರ್ಜುನ್, ರಮೇಶ್ ಕೆ.ಜಿ ,ಮಧುಸೂದನ್,ಅಜಯ್,ಬಸವರಾಜ್, ವಿಜಯ್ , ಚೇತನ್,ಶ್ರೀಮತಿ ಅನ್ನಪೂರ್ಣ ,ಮಂಜಮ್ಮ ಆರೋಗ್ಯ ಇಲಾಖೆ, ರಾಧಾ, ತಿಮ್ಮಕ್ಕ, ಶಾರದಮ್ಮ,ರವಿಕುಮಾರ್.ಜಿ ಉಪಸ್ಥಿತರಿದ್ದರು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಳ್ಳಕೆರೆ

