ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭ.
ವಡಗೇರಿ ಮಾರ್ಚ್.16

ಇಳಕಲ್ಲ ತಾಲೂಕಿನ ವಡಗೇರಿ ಗ್ರಾಮದ ಚಿಲ್ಡ್ರನ್ಸ್ ಸಕ್ಸಸ್ ಸ್ಕೂಲ್ ಏಕಲ್ ವಿದ್ಯಾಲಯದಲ್ಲಿ S.S.L.C ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂದು ಶುಭಾಶಯ ಕೋರಿದರು.ಗಣ್ಯ ಮಹನಿಯರಿಂದ ಕಾರ್ಯಕ್ರಮ ಉದ್ಘಾಟನೆ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು, ಪೋಷಕರ ಕನಸು ನನಸಾಗಿಸಬೇಕು ಎಂದು ವಿಶೇಷ ಉಪನ್ಯಾಸ ನೀಡಿದ ಜೆ.ಪಿ.ಕಂಪ್ಲಿಮೈಬು ನಧಾಫ್ ಅಧ್ಯಕ್ಷರು ಶಾಂತಿನಿಕೇತನ ಚಿಲ್ಡ್ರನ್ ಸಕ್ಸಸ್ ವಡಗೇರಿ, S.G ಹೊಸಮನಿ ಮುಖ್ಯಗುರುಗಳು ಪ್ರೌಢ ಶಾಲೆ ವಡಗೇರಿ, ಮುತ್ತಪ್ಪ ಹಿರೇಕುರಬರ SDMC ಅಧ್ಯಕ್ಷರು, S.V ತಂತ ಗುಂಟಿ, M.S.ಕಾರಭಾರಿ ಉಪನ್ಯಾಸಕರು ಹಮಿನಗಡ,ಬಸಪ್ಪ ಮಾದರ ಗ್ರಾಪಂ ಅಧ್ಯಕ್ಷರು ವಡಗೇರಿ, ಪರೀಕ್ಷೆ ನಿಮ್ಮ ಬುದ್ಧಿಮಟ್ಟ ಅರಿಯಲು ಒಂದು ಸಾಧನವಾಗಿದೆ,ಶಿಕ್ಷಕರು ಹೇಳಿದ ಪಾಠ ಯಾರು ಗಮನದಲ್ಲಿಟ್ಟುಕೊಂಡು ಪರೀಕ್ಷೆ ಎದುರಿಸಿ ಎಂದು ಆರ್.ಮುಜಾವರ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿಶರಣಪ್ಪ ಕುರುಬರ, ಧರ್ಮಪ್ಪ ವಗ್ಗರ, ಎಂ.ಬಿ.ನೆಗಲಿ, ಕರಿಯಪ್ಪ ಮಾದರ, ಲಕ್ಷ್ಮಣ ಮಾದರ, ಸೋಮಪ್ಪ ಕೆಂದೂರ್, ಎಸ್.ಸರ್ಕಾವಸ್ ಮತ್ತಿತರರು ಉಪಸ್ಥಿತರಿದ್ದರು. ಬಸು ಮಾದರ, ಮೈಬು ನದಾಫ, ಆಡಳಿತ ಮಂಡಳಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ