“ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರಧಾನ” ಎಂ.ಬಸವರಾಜ್ ಕಕ್ಕುಪ್ಪೆ.
ಕೂಡ್ಲಿಗಿ ಮೇ.19

ಚೇತನ ಫೌಂಡೇಶನ್ ಕರ್ನಾಟಕ ಇವರು ಆಯೋಜಿಸಿರುವ ವಚನ ವೈಭವ ಬಸವ ಜಯಂತಿಯ ಅಂಗವಾಗಿ ಕವಿಗೋಷ್ಠಿ, ಉಪನ್ಯಾಸ, ವಚನ ಗಾಯನ ಹಾಗೂ ಬಸವಚೇತನ ರಾಜ್ಯ ಪ್ರಶಸ್ತಿ, “ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರಧಾನ” ಕಾರ್ಯಕ್ರಮ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ಧಾರವಾಡದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎಂ ಬಸವರಾಜ್ ಕಕ್ಕುಪ್ಪೆಯವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ ನೀಡಿ ರೈತ ಸಂಘದ ಮತ್ತು ಇತರ ಸಂಘ ಸಂಸ್ಥೆಗಳ ರೈತ ಚಳುವಳಿ ಹೋರಾಟಗಾರರನ್ನಾಗಿ ಗುರುತಿಸಿ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಎಮ್ ಬಸವರಾಜ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಿಂದ ರೈತರು ವಿಮುಕ್ತರಾಗುತ್ತಿದ್ದಾರೆ . ಇಂದಿನ ಯುವಕರು ಉದ್ಯೋಗ ಹರಸಿ ಆರಿಸಿಕೊಂಡು ನಗರಗಳತ್ತ ಮುಖ ಮಾಡುತ್ತಿದ್ದು. ಇದು ರೈತರಿಗೆ ಬೇಸರದ ಸಂಗತಿ. ಮತ್ತು ರೈತರಿಗೆ ಬೆಳೆದ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದರು. 12 ನೇ. ಶತಮಾನದಲ್ಲಿ ಬಸವಣ್ಣನವರು ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಮತ್ತು ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂದು ಸಾರಿ ಸಾರಿ ಬಸವಾದಿ ಶರಣರು ಹೇಳುತ್ತಾ ಬಂದಿದ್ದಾರೆ. ಇನ್ನೂ ಮುಂದಾದರೂ ಸರ್ಕಾರಗಳು ಕೃಷಿಗೆ ಒತ್ತು ಕೊಡದಿದ್ದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡ್ಲಿಗಿ ತಾಲೂಕಿಗೆ ಸಮಗ್ರ ನೀರಾವರಿ ಹೋರಾಟದ ಕುರಿತು ಸ್ವವಿವರವಾಗಿ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಶ್ರೀ ವೇ.ಜ್ಞಾ. ಬ್ರ. ಚರಂತಯ್ಯ ಹಿರೇಮಠ್ ಕೊಣ್ಣೂರು ಮಠದ ಸ್ವಾಮೀಜಿಗಳು ಪುಣ್ಯಕ್ಷೇತ್ರ ಹುಬ್ಬಳ್ಳಿ ಧಾರವಾಡ ಹಾಗೂ ಉದ್ಘಾಟಿಸಿ. ಸುರೇಶ ಎಸ್ ಸಮಗಿ, ಪ್ರಾಧ್ಯಾಪಕರು ಶಿಕ್ಷಣ ವಿಶ್ವವಿದ್ಯಾನಿಲಯ ಧಾರವಾಡ ಬಿಎ ಓಂಕಾರ್ ಸ್ವಾಮಿ, ಪೀರ ಸಾಬ್ ನದಾಫ್ ನಿವೃತ್ತ ನೌಕರರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ, ಗೌರವಾಧ್ಯಕ್ಷರು ಚೇತನ ಫೌಂಡೇಶನ್ ಧಾರವಾಡ, ಎಲ್ ಐ ಲಕ್ಕಮ್ಮನವರ್ ರಾಜ್ಯ ಸಮಿತಿ ಸದಸ್ಯರು ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಡಾ. ಜಿ. ಶಿವಣ್ಣ ರಾಜ್ಯಾಧ್ಯಕ್ಷರು ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರು, ಚಂದ್ರಶೇಖರ ಮಡಲಗೇರಿ ಆಯೋಜಕರು ಚೇತನ ಫೌಂಡೇಶನ್ ಕರ್ನಾಟಕ, ಅಶೋಕ್ ಕುಮಾರ್ ಸಿಂದಗಿ. ಸುನಂದ ಜಾಲವಾದಿ. ಸುರೇಶ್ ಕೋರೆಕೊಪ್ಪ ಸಾಹಿತಿ ತೆರಿಗೆ ಅಧಿಕಾರಿ ಬೆಳಗಾವಿ. ಸೋಮಶೇಖರಯ್ಯ ಹಿರೇಮಠ. ನವೀನ್ ಬಿ ಸಜ್ಜನ್. ಅನುಷಾ ಹಿರೇಮಠ್. ವೈನವಿ ಬಿಸಿ. ಚೇತನ ಫೌಂಡೇಶನ್ ರಾಜ್ಯ ಸಂಚಾಲಕರಾದ ಸಂಗೀತ ಮಠಪತಿ. ವಿದ್ಯಾ ದೇವಗಿರಿ. ಭಾಗ್ಯಶ್ರೀ ರಜಪೂತ. ನಿರಂಜನ್ ಕುಮಾರ್ ಎ. ಹೊಸಹಳ್ಳಿ. ಕೆ. ಎಸ್. ವೀರೇಶ್ ಹೊಸಹಳ್ಳಿ. ಸೇರಿದಂತೆ ರಾಷ್ಟ್ರೀಯ ಬಸವಚೇತನ ಪ್ರಶಸ್ತಿ ಪುರಸ್ಕೃತರು. ಬಸವಚೇತನ ಪ್ರಶಸ್ತಿ ಪುರಸ್ಕೃತರಿಗೆ ಚೇತನ ಫೌಂಡೇಶನ್ ವತಿಯಿಂದ ಪ್ರಶಸ್ತಿ ಗೌರವಿಸಿ ಪ್ರಧಾನ ಮಾಡಲಾಯಿತು.ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಅಶ್ವಿನಿ ಪ್ರಕಾಶನ ಗದಗ, ನವಿಲುಗರಿ ಸಾಹಿತ್ಯ ವೇದಿಕೆ ಧಾರವಾಡ, ಸುವರ್ಣ ಮಹಿಳೆಯರ ಕನಸಿನ ಧಾರವಾಡ, ಕುಮಾರೇಶ್ವರ ನಗರ ಮಹಿಳಾ ಮಂಡಳಿ ಧಾರವಾಡ ಮತ್ತು ಅನೇಕ ವಿದ್ವಾಂಸರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.