ಇಂದು ಮಾನ್ವಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ – ವಿರುದ್ಧ ಪ್ರತಿಭಟನೆ.
ಮಾನ್ವಿ ಏ.06

ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯದ ಜನರ ನೆಮ್ಮದಿಯನ್ನು ಕಸಿದು ಕೊಳ್ಳುತ್ತಿದೆ. ಗ್ಯಾರಂಟಿಗಳ ಅನುಷ್ಠಾನದಿಂದ ದಿವಾಳಿಯಾಗಿರುವ ಕಾಂಗ್ರೇಸ್ ಸರ್ಕಾರ ಅದರ ಋಣಭಾರವನ್ನು ಜನರ ಮೇಲೆ ಹಾಕುತ್ತಿದೆ.ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವಸ್ತುಗಳ ಬೆಲೆ ಏರಿಕೆ ನಿರಂತರ ಏರಿಕೆ ಹಾಗುತ್ತಲೆ ಸಾಗಿದೆ. ಹಾಲು, ವಿದ್ಯುತ್, ಮದ್ಯ, ಡೀಸೆಲ್, ಟೀ-ಕಾಫಿ, ಹೋಟೆಲ್ ತಿಂಡಿ-ತಿನಿಸು ಎಲ್ಲವೂ ಗಗನಕ್ಕೆ ಏರುತ್ತಿದೆ. ಬಡವರು ಹೊರಗೆ ಹೋಗಿ ಚಹಾ ಕೂಡಾ ಕುಡಿಯದಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ನೆಮ್ಮದಿಯೇ ಹಾಳಾಗಿದೆ. ಮನೆ ಹಾಳು ಗ್ಯಾರಂಟಿಗಳಿಗೆ ಕರ್ನಾಟಕ ಬಲಿಯಾಗುತ್ತಿದೆ. ಈ ಸಂದರ್ಭದಲ್ಲಿ ಇಂದು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ಪತ್ರ ತಹಸೀಲ್ದಾರ್ ಮಾನ್ವಿ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ್ ವಕೀಲರು ಮುಖಂಡರಾದ ಶರಣಪ್ಪ ಗೌಡ ನಕ್ಕುಂದಿ, ಮಲ್ಲಿಕಾರ್ಜುನಗೌಡ ಸಂಗಾಪುರ, ಶ್ರೀನಿವಾಸ್ ಎಲ್.ಐ.ಸಿ ನರಸಿಂಹ ನಾಯಕ್ ಕರಡಿಗುಡ್ಡ, ಮಂಡಲ ಉಪಾಧ್ಯಕ್ಷರಾದ ಗೋಪಾಲ ಇಬರಾಂಪುರ, ಬಸವ ಪ್ರಭು ಪಾಟೀಲ್, ಮಂಡಲ ಎಸ್/ಸಿ ಮೋರ್ಚಾ ಅಧ್ಯಕ್ಷರಾದ ಶಿವಕುಮಾರ್, ಎಸ್/ಟಿ ಮೋರ್ಚಾ ಅಧ್ಯಕ್ಷರಾದ ಅಮರೇಶ್ ಜಾನೇಕಲ್, ಮಾನ್ವಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಕುಮಾರಸ್ವಾಮಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಚಂದ್ರಶೇಖರ್ ನಾಯಕ್, ಮಂಡಲ ಉಪಾಧ್ಯಕ್ಷರಾದ ಶಿವನಗೌಡ ಬೊಮ್ಮನಾಳ,ವೆಂಕಟೇಶ್ ಕೋನಾಪುರ್ ಪೇಟೆ, ತಾಯಣ್ಣ ಕಿನ್ನರಿ, ಸದ್ದಾಂ ಹುಸೇನ್, ಭಾಸ್ಕರ್ ಜಗಲಿ, ಕರೀಂ ಪಟೇಲ್, ನಾಗಲಾಪುರ ಗುರುರಾಜ್, ಉಮಾಪತಿ ಹರ್ವಿ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಭಾಗವಹಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ