TET ಪರೀಕ್ಷೆ ಬರೆಯುವ – ಭಾವಿ ಶಿಕ್ಷಕರಿಗಾಗಿ.

ಹೀರೆಮಳಗಾವಿ ನ.04

1) TET ಪರೀಕ್ಷೆಯಲ್ಲಿ ಹೇಗಾದರು ಮಾಡಿ ಅರ್ಹತೆ ಪಡೆಯಿರಿ.

2) ಗೊತ್ತಿರಲಿ TET ಮುಗಿದ ತಕ್ಷಣವೇ 18.000 ಶಿಕ್ಷಕರನ್ನು ಸರ್ಕಾರ ತುಂಬಿ ಕೊಳ್ಳಲಿದೆ. ಅದರಲ್ಲಿ ಒಂದು ಸೀಟು ನಿಮ್ಮದಾಗಲಿ.

3) ನಿಮಗಾಗಿ ಒಂದು ಅಂದವಾದ ಸರ್ಕಾರಿ ಶಾಲೆ ಕಾಯುತ್ತಿದೆ ಹಾಗಾಗಿ TET ಪಾಸ್ ಆಗಿರಿ.

4) ನಿಮ್ಮನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿ ಕೊಳ್ಳಲು H.M ರವರು ಕಾಯುತ್ತಿದ್ದಾರೆ.

5) DDPI ಸಾಹೇಬರಿಂದ ಆರ್ಡರ್ ಕಾಪಿ ಪಡೆಯುವ ಅವಿಸ್ಮರಣೀಯ ಕ್ಷಣ ಹತ್ತಿರ ಬರುತ್ತಿದೆ.

6) ನಿಮ್ಮ ಹಾಗೂ ನಿಮ್ಮ ಕುಟುಂಬದ ಕನಸು ನನಸಾಗಿಸುವ ಕಾಲ ಬಂದಿದೆ ಪ್ರಯತ್ನಿಸಿರಿ.

7) ಸರ್ಕಾರಿ ಶಾಲೆಯ ಶಿಕ್ಷಕ ಸಿಬ್ಬಂದಿಗಳ ಪಟ್ಟಿಗೆ ನಿಮ್ಮ ಹೆಸರು ಬರೆಯುವ ಕ್ಷಣಕ್ಕಾಗಿ TET ಓದಲೇ ಬೇಕು.

8) ಮೊದಲ ಸಂಬಳ ಪಡೆಯುವ ಸೌಭಾಗ್ಯದ ಅದೃಷ್ಟತೆಗೆ TET ಬೇಕೇ ಬೇಕು.

9) ಅವಮಾನ ಅಪಮಾನ ಅನುಮಾನಗಳಿಗೆ ಪೂರ್ಣ ವಿರಾಮ ಹಾಕಿ ಸನ್ಮಾನದ ದಿನ ಹತ್ತಿರ ಬರುತ್ತಿದೆ.

10) ಕುಟುಂಬದ ಆರ್ಥಿಕತೆ ಸಮಸ್ಯೆ ಪರಿಹರಿಸುವ ಕ್ಷಣ ಬಂದೊದಗಿದೆ.

11) Good morning teacher, Good evening teacher, ಎಂದು ಹೇಳಲು ವಿದ್ಯಾರ್ಥಿಗಳು ನಿಮಗಾಗಿ ಕಾಯುತ್ತಿದ್ದಾರೆ.

12) ಇಡೀ ಊರಿನ ಜನರಿಂದ ಸರ್ / ಟೀಚರ್ ಎಂಬ ಗೌರವ ಪಡೆಯುವುದಕ್ಕಾಗಿ TET ಓದಿರಿ.

13) ನೆನಪಿಡಿ TET ಅಂದರೆ Talent eligible test.

14) Target ಮಿಸ್ಸಾಗದಿರಲಿ, Energy ಪ್ರತಿ ಕ್ಷಣ ವಿರಲಿ, Tension ಬಿಟ್ಟು ಬಿಡಿರಿ (TET)

15) ಇವರ ಕೈಯಿಂದ ಏನು ಆಗಲ್ಲ ಅಂದವರೇ ಇವರು ನಮ್ಮವರು ಅನ್ನುವಂತಾಗ ಬೇಕು.

16) ನೆನಪಿರಲಿ ಪರೀಕ್ಷೆಗೆ ಉಳಿದ ಸಮಯ Golden time ಅಲ್ಲ Diamond time.

17) ಯುದ್ಧಕ್ಕೆ ಹೋಗದೆ ಸೋಲನ್ನು ಒಪ್ಪಿ ಕೊಳ್ಳದಿರಿ.

18) ಈ ಜಗತ್ತಿನಲ್ಲಿ ಅತಿ ಬುದ್ಧಿವಂತ powerfull ವ್ಯಕ್ತಿ ಯಾರಾದರೂ ಇದ್ದರೆ ಅದು ನೀವು ಎಂಬ ಭಾವ ವಿರಲಿ.

ನಿಮ್ಮ ಅಧ್ಯಯನಕ್ಕೆ ಹಾಗೂ ನಿಮ್ಮ ಪರೀಕ್ಷೆಗೆ ಶುಭವಾಗಲಿ…

ಶ್ರೀ ಮುತ್ತು ಯ. ವಡ್ಡರ (ಶಿಕ್ಷಕರು)

HPS ಹಿರೇಮಳಗಾವಿ

ಮೊ/ನಂ-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button