ಶ್ರಾವಣ ಮಾಸದ ಪ್ರಯುಕ್ತ ರಾಜ್ಯದಾದ್ಯಂತ – ಮನೆ ಮನದಲ್ಲಿ ಕೂಡಲ ಸಂಗಮ ಹಾಗೂ ಇಷ್ಠಲಿಂಗ ಪೂಜಾ ದೀಕ್ಷಾ ಅಭಿಯಾನ ಕಾರ್ಯಕ್ರಮ.

ಸಿಂದಗಿ ಸೆ.02

ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲ ವರ್ಧನೆಗಾಗಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ದಿವ್ಯ ಸನ್ನಿಧಾನದಲ್ಲಿ ಆಸಾಂಗಿಹಾಳ ಆರೂಡಮಠದ ಶಂಕರನಂದ ಮಹಾ ಸ್ವಾಮಿಗಳ ಸಮ್ಮುಖದಲ್ಲಿ ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿ ಕೊಂಡಿರುವ ಮನೆ ಮನದಲ್ಲಿ ಕೂಡಲ ಸಂಗಮ ಹಾಗೂ ಇಷ್ಠಲಿಂಗ ಪೂಜಾ ದೀಕ್ಷಾ ಅಭಿಯಾನವನ್ನು ಸಿಂದಗಿ ಹಾಗೂ ಅಲಮೇಲ ತಾಲೂಕಿನ ಆಶ್ರಯದಲ್ಲಿ ನಾಗರಾಳ್ಳಿ ಗ್ರಾಮದ ಶರಣ ಗೊಲ್ಲಾಳೆಶ್ವರ ದೇವಾಲಯದಲ್ಲಿ ಹಮ್ಮಿ ಕೊಳ್ಳಲಾಗಿತ್ತು ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆಲಮೇಲ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ ಎಂ ಹಂಗರಗಿ ಹಾಗೂ ನಾಗರಳ್ಳಿ ಬಸವ ಸಮಿತಿ ಅಧ್ಯಕ್ಷ ನಾನಾಗೌಡ ಪಾಟೀಲ, ಎ ಪಿ ಎಂ ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ವಿ. ಬಿ ಕುರುಡಿ, ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ, ಎಂ. ಎಸ್ ಪಾಟೀಲ. ಸಿದ್ದು ಪಾಟೀಲ ಹುನಳ್ಳಿ. ಬಾಳುಗೌಡ ಪಾಟೀಲ. ಗೋಪಾಲಗೌಡ ಪಾಟೀಲ, ಹಣಮಂತ್ರಯ ಬಾಗೇವಾಡಿ, ಮುತ್ತು ಅಣವಿ, ಅಪ್ಪುಗೌಡ ಪಾಟೀಲ, ಆನಂದ ಶಾಬಾದಿ ಸೇರಿದಂತೆ ಗ್ರಾಮಸ್ಥರು ಇದ್ದರು. ವೆತಾಳ ಜೋಶಿ, ಶ್ರೀದೇವಿ ಪತ್ತಾರ. ಶ್ರೀಶ್ಯಲ ಸಂಗೀತ ಸೇವೆ ಸಲ್ಲಿಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button