ಪರಿಶುದ್ಧ ಹೃದಯವುಳ್ಳವರು ಸೂಫೀ ಸಂತರು – ಮಾತಾಜೀ ಅಮೂಲ್ಯಮಯೀ ಅಭಿಮತ.
ಚಳ್ಳಕೆರೆ ಸೆ.02


ಉಣ್ಣೆ ಬಟ್ಟೆಯನ್ನು ಧರಿಸುತ್ತಿದ್ದ ಸೂಫೀ ಸಂತರು ಅತ್ಯಂತ ಪರಿಶುದ್ಧ ಹೃದಯವುಳ್ಳವರು ಎಂದು ಹುಬ್ಬಳಿಯ ಶ್ರೀಮಾತಾ ಆಶ್ರಮದ ಮಾತಾಜೀ ಅಮೂಲ್ಯಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ವಿಶೇಷ ಭಜನೆ ನಡೆಸಿ ಕೊಟ್ಟ ಅವರು “ಸೂಫೀ ಸಂತರ ಕಥೆಗಳು” ಎಂಬ ವಿಷಯವಾಗಿ ಪ್ರವಚನ ನೀಡುತ್ತಾ ಮಾತನಾಡಿದರು.

ಭಾರತದಲ್ಲಿ ಅನೇಕ ಸೂಫೀ ಸಂತರನ್ನು ಕಾಣುತ್ತೇವೆ.ಅವರ ಜೀವನದ ಕಥೆಗಳು ರೋಚಕವಾಗಿವೆ. ಅವರು ಅನುಭವದ ಮೂಲಕ ಜ್ಞಾನವನ್ನು ಪಡೆದವರು ಎಂದು ಮಾತಾಜೀ ಹೇಳಿದರು. ದಿವ್ಯತ್ರಯರಿಗೆ ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಎಂ ಗೀತಾ ನಾಗರಾಜ್, ವನಜಾಕ್ಷಿ, ರುದ್ರಪ್ಪ, ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಸರಸ್ವತಿ, ಗೋವಿಂದರಾಜು, ಮಂಜುಳಾ, ಸಿ.ಎಸ್ ಭಾರತಿ, ಯತೀಶ್ ಎಂ ಸಿದ್ದಾಪುರ, ಸಂಧ್ಯಾ, ಡಾ, ಭೂಮಿಕಾ, ಸಂತೋಷ್, ಬಿ.ಸುಮನಾ, ನಾಗರತ್ನಮ್ಮ, ಗೀತಾ ಭಕ್ತವತ್ಸಲ, ಡಾ, ಸುನೀತಾ, ಹೃತಿಕ್, ಚೇತನ್, ಹರ್ಷ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

