ನನ್ನವ್ವ

ನನ್ನವ್ವ ತಾನೆನನ್ನು ತಿನ್ನಲಿಲ್ಲ,
ಎಲ್ಲವೂ ನನಗೆಂದೆ ಉಳಿಸಿದಳು.
ನನ್ನವ್ವ ನಾ ಎಡವಿ ಬಿದ್ದಾಗ,
ತಾನೊಳಗೊಳಗೆ ಮರುಗಿಹಳು.
ನನ್ನವ್ವ ತನ್ನ ಬಗ್ಗೆ ಚಿಂತಿಸಲಿಲ್ಲ,
ನನಗೆ ಹುಷಾರಿಲ್ಲವೆಂದಾಗ ಅತ್ತಳು.
ನಿನಗೆಂದೂ ಏನು ಮಾಡಲಿ ನನ್ನವ್ವ,
ಇಗೊ ನಾನಾಗುವೆ ನಿನ್ನ ಜೀವದಾಳು.
✍️ಕು||ತ್ರಿವೇಣಿ ಆರ್. ಹಾಲ್ಕರ್ಗೊಬ್ಬರವಾಡಿ,
ಕಲಬುರ್ಗಿ ಜಿಲ್ಲೆಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ.