ಈ ವಾರ ತೆರೆಗೆ ಬರಲಿದೆ ಓಂ ಪ್ರಕಾಶ್‌ ನಾಯಕ್‌ ಅಭಿನಯದ – ದಸರಾ ಬೊಂಬೆ.

ಬೆಂಗಳೂರು ಸೆ.29

ನೀತು ಫಿಲಂ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ದಸರಾ ಬೊಂಬೆ ಚಲನಚಿತ್ರವು ಇದೀಗ ಸೆನ್ಸಾರ್‌ ಆಗಿದ್ದು. ಚಿತ್ರ ಮಂದಿರಗಳಲ್ಲಿ ಬಿಡುಗಡೆ ಯಾಗುತ್ತಿದೆ. ಓಂಪ್ರಕಾಶ್‌ ನಾಯಕ್‌ ಕಥೆ ಚಿತ್ರಕಥೆ ಸಂಭಾಷಣೆ ಬರೆದು, ಸ್ವತಃ ಸಂಕಲನ ಮಾಡಿ ನಿರ್ದೇಶಿಸಿರುವ ದಸರಾ ಬೊಂಬೆಯಲ್ಲಿ ನಾಯಕನ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಆದರೆ ಈ ಚಿತ್ರ ಮಕ್ಕಳ ಚಿತ್ರವಾಗಿದ್ದು. ಇದರ ಪ್ರಮುಖ ಪಾತ್ರದಲ್ಲಿ ಬೇಬಿ ನೀತೂನಾಯಕ್‌ ಅಭಿನಯಿಸಿದ್ದಾಳೆ. ಕೇವಲ ಐದೂವರೆ ವರ್ಷದ ಪುಟಾಣಿ ಬೇಬಿ ನೀತೂ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು ಚಿತ್ರದಲ್ಲಿ ಅವಳ ಅಭಿನಯ ಎಲ್ಲರನ್ನೂ ಸೆಳೆಯುವಂತಿದೆ.

ನೀತೂಳಿಗೆ ಅಣ್ಣನಾಗಿ ಮಾಸ್ಟರ್‌ ಆರ್ಯನ್ ಅಭಿನಯಿಸಿದ್ದು ಇಬ್ಬರೂ ಮೈಸೂರು ದಸರಾದಲ್ಲಿ ಲಕ್ಷಾಂತರ ಜನರೆದುರು ಯಾವುದೇ ಹಿಂಜರಿಕೆಯಿಲ್ಲದೆ ಅಭಿನಯಿಸಿರುವುದು ಚಿತ್ರದ ಪ್ರಮುಖ ಹೈಲೈಟ್‌ ಎನ್ನಬಹುದು. ಕಳೆದ ಬಾರಿಯ ದಸರಾದಲ್ಲಿ ದಸರಾ ಬೊಂಬೆಯ ಚಿತ್ರೀಕರಣ ನಡೆಸಿದ್ದು ಈ ಬಾರಿಯ ದಸರಾ ಸಮಯದಲ್ಲಿ ಚಿತ್ರವು ಬಿಡುಗಡೆ ಯಾಗುತ್ತಿದೆ.

ಈ ಚಿತ್ರಕ್ಕೆ ಛಾಯಾಗ್ರಹಣ ರವಿ, ಸಹ ನಿರ್ದೇಶನ ಮೋಹಿತ್‌, ಮೇಕಪ್‌ ರುದ್ರೇಶ್‌, ಪತ್ರಿಕಾ ಸಂಪರ್ಕ – ವಿ.ಎಂ.ಎಸ್ ಗೋಪಿ ಮಾಡಿದ್ದಾರೆ.

ತಾರಾಗಣದಲ್ಲಿ ಬೇಬಿ ನೀತು ನಾಯಕ್‌, ಮಾಸ್ಟರ್‌ ಆರ್ಯನ್ ಓಂಪ್ರಕಾಶ್‌ ನಾಯಕ್‌, ನಿರುಪಮಾ ಚಂದ್ರಕಾಂತ್‌, ಉಮಾದೇವಿ, ಮಂಜುನಾಥ್‌, ರುದ್ರೇಶ್‌, ಮೈಸೂರು ಹರೀಶ್‌, ಅಭಿಸಾರಿಕ, ಮಧು, ತುಳಸಿ ಗಣೇಶ್‌, ಮುಂತಾದವರು ಅಭಿನಯಿಸಿದ್ದಾರೆ. ಚಿತ್ರವು ಅಕ್ಟೋಬರ್‌ 2 ರಂದು ಬಿಡುಗಡೆ ಯಾಗುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

– ವಿ.ಎಂ.ಎಸ್.ಗೋಪಿ ✍️

ಬೆಂಗಳೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button