“ಸಾರ್ಥಕತೆಯ ಪ್ರಜೆಯಾಗು”…..

ಸ್ವಾಮಿ ವಿವೇಕಾನಂದರ ಅನುಸರಿಸಿ

ಅಂತರಂಗ ಜ್ಞಾನ ಬೆಳಸು
ಮೋಹ ಆಸೆ ತೊರೆಯಲು ಶ್ರೀಸಿದ್ಧೇಶ್ವರರ
ನುಡಿ ಪಾಲಿಸು
ಸಕಲರ ದಯಪಾಲಿಸಲು ಶ್ರೀ ಶಿವಕುಮಾರ
ಮಹಾಸ್ವಾಮಿಗಳ ಶಿರಬಾಗಿ ನಮಿಸು
ಲೋಕೊದ್ಧಾರಕೆ ಸಿದ್ಧನಾಗು
ಬುದ್ಧ ಬಸವ ಅಂಬೇಡ್ಕರ್ ತತ್ವ ಆದರ್ಶಗಳಿಗೆ
ಬದ್ದನಾಗು
ಚಾಣಕ್ಯನ ತಂತ್ರ ಚಾಲಕ್ಯನ ಸೌಹರ್ದತೆಯ
ಅಣಿ ಮುತ್ತನಾಗು
ನೇತಾಜಿ ಭಗತರ ಧೈರ್ಯದ ಬೆಳಕಲಿ
ನಿರ್ಭಿತನಾಗು
ಅಟಲ್ ಬಿಹಾರಿ ವಾಜಪೇಯಿ ಎಪಿಜೆ
ಅಬ್ಬುಲ್ ಕಲಾಮರ ಶಿಸ್ತಿಗೆ ಮಸ್ತಾಗಿ ಬಾಳು
ಮಹಾತ್ಮರ ಸತ್ಯವ ನಿತ್ಯಪಾಲಿಸಿ ಜೀವನ
ಉದ್ಧೇಶವ ಅರಿತು ಜನಪಾಲಕನಾಗು
ದಾನ ಶೂರ ಕರ್ಣ ಜೆ.ಆರ್.ಡಿ ಬಿರ್ಲಾರ
ನಿಸ್ವಾರ್ಥ ಅರಿತು ಜೀವನ ಸಾಗಿಸು ಜಗದಲಿ
ಸಾರ್ಥಕತೆ ಪ್ರಜೆಯಾಗಿ ಬಾಳು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

