ಆಲ್ ಇಂಡಿಯಾ ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷರಾಗಿ – ವೈ.ಸಿ. ಕಾಂಬಳೆ ಆಯ್ಕೆ.
ಬಾಗಲಕೋಟೆ ಸ.11

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ನೂತನವಾಗಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ವೈ.ಸಿ.ಕಾಂಬಳೆ ಹಾಗೂ ಡಾ, ದಸ್ತಗಿರ್ ಮುಲ್ಲಾ ರವರನ್ನು ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಬಾಗಲಕೋಟೆ, ಬಿಜಾಪುರ, ಬೆಳಗಾಂ, ಚಿಕ್ಕೋಡಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ ಮತ್ತು ಈ 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸದರಿಯವರನ್ನು ಪಕ್ಷದ ವತಿಯಿಂದ ಮಾಧ್ಯಮ ವಕ್ತಾರರನ್ನಾಗಿ ಸಹ ನೇಮಕ ಮಾಡಲಾಗಿದೆ.

ಈ ಆದೇಶವು ಇಂದಿನಿಂದಲೇ ಜಾರಿಗೆ ಬರುತ್ತದೆ. ಸದರಿಯವರು ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜಿಲ್ಲಾ ಸಮಿತಿ ಮತ್ತು ವಿಧಾನ ಸಭಾ ಕ್ಷೇತ್ರ ಸಮಿತಿಯನ್ನು ರಚಿಸ ಬೇಕೆಂದು ಸೂಚಿಸಿ ನೂತನ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ರವರು ತಮ್ಮ ರಾಜ್ಯ ಸಮಿತಿಯ ಆದೇಶದಲ್ಲಿ ಪ್ರಕಟಿಸಿದ್ದಾರೆ.