ಶಾಸಕನೆಂಬ ಅಹಂ ಇಲ್ಲದೇ, ಪರಿಸ್ಥಿತಿಗಳನ್ನು ಗುರುತಿಸಿ ಪ್ರೀತಿಯಿಂದ ಕೆಲಸ ತರುತ್ತೇನೆ – ಡಾ, ಶ್ರೀ ನಿವಾಸ್.ಎನ್.ಟಿ. ಶಾಸಕರು.
ಕೂಡ್ಲಿಗಿ ಸ.11

ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿ ಸಿ.ಸಿ ರಸ್ತೆ ಮತ್ತು ಪೇವರ್ಸ್ ನಿರ್ಮಾಣದ (250 ಲಕ್ಷಗಳ ಕಾಮಗಾರಿ) ಭೂಮಿ ಪೂಜೆಯನ್ನು ದಿ;11-09-24 ರಂದು ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್.ಎನ್ ಟಿ ಅವರು ನೆರವೇರಿಸಿ ಮಾತನಾಡಿ, ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಮಾನ್ಯ ಶ್ರೀ ಸಿರಾಜ್ ಶೇಖ್ ರವರು ನಮ್ಮಲ್ಲಿ ಒಂದು ಮಾದರಿ ನಗರವನ್ನು ನಿರ್ಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವೆ. ನಮ್ಮ ಕ್ಷೇತ್ರದ ಪರಿಸ್ಥಿತಿಗಳು, ಸಮಸ್ಯೆಗಳು ಮತ್ತು ತೊಂದರೆಗಳನ್ನು ಗಮನ ದಲ್ಲಿಟ್ಟುಕೊಂಡು ರಾಜೀವ್ ಗಾಂಧಿ ನಗರದಲ್ಲಿ ಸಿ.ಸಿ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಚ್ಚುಕಟ್ಟಾಗಿ ನಿರ್ಮಿಸುವೆ ಎಂದರು. ಒಟ್ಟಿನಲ್ಲಿ ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮ ವಹಿಸಿ ದುಡಿಯುವೆ ಎಂದೂ ಹೇಳಿದರು. ಈ ವೇಳೆ ಅಧಿಕಾರಿಗಳು, ಗುತ್ತಿಗೆದಾರರು, ಪ.ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ, ರಾಜೀವ್ ಗಾಂಧಿ ನಗರದ ಪ.ಪಂ ಸದಸ್ಯರಾದ ಕೆ. ಈಶಪ್ಪ, ಜಯಮ್ಮನವರ್ ರಾಘವೇಂದ್ರ, ಬಣಕಲ್ ಪ್ರಶಾಂತ್ ಗೌಡ, ದುರ್ಗೇಶ್, ಹಾಗೂ ಇತರ ಪ.ಪಂ. ಸದಸ್ಯರು, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನ ಗೌಡ, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ