ಬಸ್ ಚಾಲಕನ ಜನ್ಮ ದಿನಾಚರಣೆ – ಆಚರಿಸಿದ ಪ್ರಯಾಣಿಕರು.
ಕಲಕೇರಿ ಸ.21

ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸೇರಿ ಬಸ್ ಚಾಲಕನ ಜನ್ಮ ದಿನಾಚರಣೆ ಆಚರಿಸಿದ್ದಾರೆ. ಕಲಕೇರಿ ಮಾರ್ಗವಾಗಿ ಸಂಚರಿಸುವ ಬಳ್ಳಾರಿ ವಿಜಯಪೂರ ಬಸ್ ಚಾಲಕ ಮುರಗೇಶ ಮಲ್ಲಪ್ಪ ನಾಗೂರ ಅವರ ಜನ್ಮ ದಿನವನ್ನು ಆಚರಿಸಿದರು.

ಜನಸ್ನೇಹಿ ಚಾಲಕರಾದ ಮುರಿಗೇಶ ಬಳ್ಳಾರಿ ಘಟಕದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬಳ್ಳಾರಿ ಯಿಂದ ವಿಜಯಪುರ ಮಾರ್ಗದ ಗ್ರಾಮಗಳ ಪ್ರಯಾಣಿಕರು ಜನ ಸ್ನೇಹಿಯಾಗಿದ್ದಾರೆ. ಇಂದು ಅವರ ಜನ್ಮ ದಿನವಿದ್ದರು ಕರ್ತವ್ಯ ದಲ್ಲಿದ್ದನ್ನು ಗಮನಿಸಿದ ಪ್ರಯಾಣಿಕರು ಚಾಲಕ ಮುರಿಗೇಶ ನಾಗೂರ ಅವರ ಜನ್ಮ ದಿನಾಚರಣೆ ಆಚರಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ.