ಮಲೇರಿಯಾ ರೋಗ ನಿರ್ಲಕ್ಷಿಸ ಬೇಡಿ, ಜವಾಬ್ದಾರಿ ನಿಭಾಯಿಸಿ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಹೊನ್ನಾಕಟ್ಟಿ ಸ.21

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಹೊನ್ನಾಕಟ್ಟಿ, ಗುಂಡನಪಲ್ಲೆ ಗ್ರಾಮಗಳಲ್ಲಿ, ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಅನಾಫಿಲೀಸ್ ಹೆಣ್ಣು ಸೊಳ್ಳೆಗಳು ಕಚ್ಚುವಿಕೆಯಿಂದ ಮಲೇರಿಯಾ ಒಬ್ಬರಿಂದ ದೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವುದು. ಸೊಳ್ಳೆಗಳು ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗಳಲ್ಲಿ ಲಾರ್ವಾ ಉತ್ಪತ್ತಿ ಮಾಡುತ್ತವೆ. ಚಳಿ, ನಡುಕ, ಜ್ವರ ಮಲೇರಿಯಾ ರೋಗ ಲಕ್ಷಣಗಳು ಯಾವುದೇ ತರಹದ ಜ್ವರ ತಲೆನೋವು ಕಾಣಿಸಿದರೆ ನಿರ್ಲಕ್ಷ್ಯ ಬೇಡ ನಿಮ್ಮ ಗ್ರಾಮಕ್ಕೆ ಭೇಟಿ ನೀಡುವ ಆರೋಗ್ಯ ನಿರೀಕ್ಷಣಾಧಿಕಾರಿಗಳಲ್ಲಿ, ಆಶಾ ಕಾರ್ಯಕರ್ತೆಯರಲ್ಲಿ ರಕ್ತ ಲೇಪನ ಪರೀಕ್ಷಿಸಿ ಕೊಳ್ಳಿ ಮಲೇರಿಯಾ ಖಚಿತ ಪ್ರಕರಣಗಳಿಗೆ ನಿಗದಿತ ಚಿಕಿತ್ಸೆಯಿರುತ್ತದೆ. ಮುಂಜಾಗ್ರತೆಯಾಗಿ ಸೊಳ್ಳೆ ಪರದೆ, ನಿರೋಧಕ ಬಳಸಬೇಕು ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು, ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಯಾವುದೇ ತರಹ ಜ್ವರ, ತಲೇನೋವು ಕಾಣಿಸಿದರೆ ಭಯ ಬೇಡ ಎಚ್ಚರಿಕೆ ಇರಲಿ, ಸಮೀಪದ ಸರಕಾರಿ ಆಸ್ಪತ್ರೆಗೆ ಭೇಟಿ ಮಲೇರಿಯಾ ರಕ್ತ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಎಂದು ಗ್ರಾಮದಲ್ಲಿ ಶೂನ್ಯ ಮಲೇರಿಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ಆದ್ಯತೆ ನೀಡಬೇಕು ಎಂದರು. ಗ್ರಾಮದಲ್ಲಿ ಮಲೇರಿಯಾ ಸಂಶಯಸ್ಥತರ ರಕ್ತ ಲೇಪನ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಗ್ರಾಮದ ಮುಖಂಡರು, ಯುವಕರು, ಭಾಗವಹಿಸಿದ್ದರು.