“ಜೀವನ ಕಾವ್ಯ ದಿವ್ಯ ಭವ್ಯ ನೂತನವಾಗಿರಲಿ”…..

ಲೋಕ ಡೊಂಕು ನೀನಗೇಕೆ
ನಿನ್ನ ನ್ಯೂನತೆ ಅರಿ ಜನರಲಿ ಬೆರಿ
ಯಾರು ತಿರಸ್ಕರಿಸಿದರೇನು
ಉತ್ತಮತನ ಸದಾ ಪುರಸ್ಕರಿಸಿ
ಸುಖಾಸುಮ್ಮನೆ ಕೀಳು ಭಾವವೇಕೆ
ನಿನ್ನ ಸುಖ ಜೀವನಕ್ಕೆ ಸುಭಾವ ಸಿರಿ ಇರಲಿ
ಕರುಣೆ ಇಲ್ಲದವರನ್ನೇಕೆ ಮೆಚ್ಚುವೇ
ಕರುಳ ಬಳ್ಳಿಯವರ ಕನಿಕರಿಸಿ
ಅಜ್ಞಾನದಿ ಪಶುವಿನಂತೆ ಹಲಬುವೇಕೆ
ಸ್ವಚ್ಛ ಮನದ ಸುಜ್ಞಾನದಿ ನಲಿ
ಹಣ ಆಸ್ತಿ ಅಧಿಕತಮವೇಕೆ
ಸುಖ ಶಾಂತಿ ಬಾಳ್ವೇಗೆ ಸಂತೃಪ್ತ ಸಿರಿ ಅರಿ
ಆತ್ಮ ಸ್ತುತಿ ಪರನಿಂದೆ ಗೊಡವೇಕೆ
ಸರಳ ಸ್ವಚ್ಛ ಶಿಸ್ತು ನಿತ್ಯ ಸತ್ಯ ಸಿರಿತನವಿರಲಿ
ನಿನ್ನ ಬಾಳ್ವೆಗೆ ಬೇರೆಯವರ ಮಾದರಿತನವೇಕೆ
ನೀನಗೆ ನಿನ್ನ ಆದರ್ಶತನ ಜಗದಿ ಇರಲಿ
ಲೇಸ ಕಂಡು ಮರಗುವದೇಕೆ
ಸಕಲ ಜೀವ ಲೇಸ ಸದಾ ಬಯಿಸಿ
ಮನದಿ ಕ್ಷುಲ್ಲಕತನ ಭಾವವೇಕೆ
ಹಿರಿತನದ ಗುಣ ಸ್ವಭಾವ ಸಿರಿವಿರಲಿ
ಭವಿಷ್ಯದಲಿ ನಿರಾಶಕ್ತಿ ಹೊಂದುವುದೇಕೆ
ಜೀವನ ಕಾವ್ಯ ದಿವ್ಯ ಭವ್ಯ ನೂತನವಾಗಿರಲಿ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಮಾನವ ಜೀವ ರಕ್ಷಕ”
ರಾಷ್ಟ್ರೀಯ ಐಕಾನ್ ಪ್ರಶಸ್ತಿ ಪುರಸ್ಕೃತರು.
ಬಾಗಲಕೋಟೆ.