ಊಟದಲ್ಲಿ ಹುಳುಗಳು ಕೂಡಲೇ ವಾರ್ಡನ್ ಅಮಾನತ್ ಗೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆ ಯಿಂದ ಆಗ್ರಹ.
ಬಳ್ಳಾರಿ ಸ.21

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ನಗರದಲ್ಲಿ ಇರುವಂತ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಿವಿಧ ಸ್ನಾರ್ಥಕೋತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೆಚ್ಚಿನವರು ವಿದ್ಯಾಭ್ಯಾಸಕ್ಕಾಗಿ ಈ ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ವಸತಿಯಲ್ಲಿ ಇದ್ದುಕೊಂಡು ಹೆಚ್ಚಿನ ವಿದ್ಯಾಭ್ಯಾಸ ಮಾಡ ಬೇಕಾಗಿರುವುದು ಹಾಸ್ಟೆಲ್ ನಲ್ಲಿ ಬೆಳಗಿನ ಉಪಹಾರ ಮಾಡುವಂತ ಸಮಯದಲ್ಲಿ ಉಪ ಆಹಾರದಲ್ಲಿ ಸುಮಾರು ಹುಳುಗಳಿಂದ ಕೂಡಿದಂತ ವಿದ್ಯಾರ್ಥಿಗಳಿಗೆ ಉಪಹಾರವನ್ನು ಬಡಿಸಿದ್ದು ವಿದ್ಯಾರ್ಥಿಗಳು ತಮ್ಮ ಪ್ಲೇಟಿನಲ್ಲಿ ಏನು ಇಂತಹ ಇಷ್ಟೊಂದು ಹುಳಗಳು ಕ್ರಿಮಿ ಕೀಟ ಹಾಗೂ ಕೂದಲು ಕಂಡು ಇದ್ದು ಇದನ್ನು ಹೇಗೆ ಊಟ ಮಾಡಬೇಕು ನಾವೇನು ಮನುಷ್ಯರಾ ಅಥವಾ ಪ್ರಾಣಿಗಳ ಎಂಬಂತೆ ನಿಮ್ಮ ಕಣ್ಣಿಗೆ ಕಾಣುತ್ತೇವೆ ಎಂದು ಸಂಬಂಧ ಪಟ್ಟ ವಸತಿ ನಿಲಯದ ಮೇಲ್ವಿಚಾರಕರಿಗೆ ಹಾಗೂ ಅಡಿಗೆ ಮಾಡುತ್ತಿರುವಂತಹ ಇವರಿಗೆ ಎಷ್ಟೋ ಸಾರಿ ಮನವರಿಕೆ ಮಾಡಿ ಕೊಟ್ಟರೂ ಸಹ ಸರಿಪಡಿಸಿ ಕೊಳ್ಳಲಾರದೆ ಇರುವುದು ನಾಚಿಕೆ ಗೇಡಿತನವಾಗಿದ್ದು ಎಂದು ಹೇಳಿದರು ಸರಿಪಡಿಸಿ ಕೊಳ್ಳಲಾರದೆ ಇಂಥ ಊಟ ಉಪಹಾರ ನಿಮ್ಮ ಮಕ್ಕಳಿಗೆ ಹಾಕುತ್ತೀರಾ, ಈ ಊಟವನ್ನು ನಿಮ್ಮ ಮಕ್ಕಳಿಗೆ ಹಾಗೂ ನೀವು ತಿಂದು ತೋರಿಸಿ. ಇದು ನಿಮಗೆ ಈ ಹಿಂದೆ ಸಹ ಇದೇ ರೀತಿಯಾದ ಊಟ ಉಪ ಆಹಾರ ನಮಗೆ ಹಾಕುತ್ತಿದ್ದರು ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಗಲಾಟೆ ಮಾಡಿದಂತಹ ಸಮಯದಲ್ಲಿ ಸಂಬಂಧ ಪಟ್ಟ ಕುಲ ಸಚಿವರು ಸಹ ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿ ಹೋಗಿ ಬಿಡುವುದು ಈ ವಿಶ್ವವಿದ್ಯಾಲಯದ ವ್ಯವಸ್ಥೆ ನಿರಂತರವಾಗಿದ್ದು.

ವಿದ್ಯಾರ್ಥಿಗಳು ಮಾನವೀಯತೆಯ ದೃಷ್ಟಿಯಿಂದ ನಾವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆಗಿದ್ದರಿಂದ ನಮಗೆ ಅತಿ ಮುಖ್ಯವಾಗಿ ವಿದ್ಯಾಭ್ಯಾಸ ಮಾಡಬೇಕೆಂಬ ಭಾವನೆಯಿಂದ ಕೂಡಿ ಕೊಂಡಿದ್ದು ಸಂಬಂಧ ಪಟ್ಟ ಹಾಸ್ಟೆಲ್ ಮೇಲು ಉಸ್ತುವಾರಿ ನೋಡಿ ಕೊಳ್ಳುವ ಅಧಿಕಾರಿಗಳು ಈ ವಿದ್ಯಾರ್ಥಿಗಳಿಗೆ ಯಾವ ತರದ ಕಳಪೆ ಮಟ್ಟದ ಕ್ರಿಮಿ ಕೀಟ ಹುಳುಗಳು ಅದರಲ್ಲಿ ಇದ್ದರೂ ಅದನ್ನು ಬೇರ್ಪಡಿಸಿ ಸರಿಯಾದ ಊಟ ಉಪ ಆಹಾರ ಹಾಕಲಿಲ್ಲದಿದ್ದರೂ ನಡೆದು ಹೋಗುತ್ತದೆ ಎಂಬ ಮನೋಭಾವನೆಯಿಂದ ಅಧಿಕಾರಿಗಳಿಗ ಬೇಜವಾಬ್ದಾರಿ ತನದ ವರ್ತನೆ ಯಾಗಿದ್ದರಿಂದ ವಿದ್ಯಾರ್ಥಿಗಳು ಎಷ್ಟೋ ಸಾರಿ ಹೇಳಿದರು ಇವರು ಸರಿಪಡಿಸಿ ಕೊಳ್ಳಲಾರದೆ ಇರುವುದು ನಿರಂತರ ವಾಗಿದ್ದರಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದರಿಂದ ತಾವುಗಳು ಕೂಡಲೇ ಅಧಿಕಾರ ದುರ್ಬಳಕೆ ಆಧಾರದ ಮೇಲೆ ವಸತಿ ನಿಲಯದ ಮೇಲ್ವಿಚಾರಕರನ್ನು ಅಮಾನತ್ ಮಾಡಿ ಹಾಗೂ ಕುಲ ಸಚಿವರನ್ನು ಬೇರೆ ಕಡೆ ವರ್ಗಾವಣೆ ಮಾಡಿ ವಿದ್ಯಾರ್ಥಿಗಳಿಗೆ ಮುಂದೆ ಈ ರೀತಿಯಾಗಿ ಆಗಲಾರದಂತೆ ಕಟ್ಟು ನಿಟ್ಟಿನ ಶಿಸ್ತಿನ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ಮುಂದೆಂದೂ ಮರುಕಳಿಸದಂತೆ ಪತ್ರಿಕಾ ಮೂಲಕ ಎಚ್ಚರಿಕೆ ನೀಡಿದ್ದಾರೆ.