ದೇಶ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಸೈನಿಕನಿಗೆ – ಅದ್ಧೂರಿ ಸ್ವಾಗತ.
ಬೈಲಹೊಂಗಲ ಅ. 02

ಭಾರತೀಯ ಸೇನೆಯಲ್ಲಿ ಸುದೀರ್ಘ 17 ವರ್ಷ ಸೇವೆ ಸಲ್ಲಿಸಿ ಹವಾಲ್ದಾರ್ ಆಗಿ ನಿವೃತ್ತಿಯಾಗಿ ಆಗಮಿಸಿದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ತಾಲೂಕಿನ ಸಿದ್ದಸಮುದ್ರ ಗ್ರಾಮದ ಫಕ್ಕಿರಪ್ಪಾ. ಭೀಮಪ್ಪ ಅರವಳ್ಳಿ ಅವರನ್ನು ಗ್ರಾಮಸ್ಥರು,ಮಾಜಿ ಸೈನಿಕರು ಹಾಗೂ ದೇಶಾಭಿಮಾನಿಗಳು, ಫಕ್ಕೀರಪ್ಪಾ. ಭೀಮಪ್ಪ. ಅರವಳ್ಳಿ ಸಂಬಂಧಿಕರು ಅದ್ಧೂರಿಯಾಗಿ ಬರ ಮಾಡಿಕೊಂಡರು. ಬೆಳವಡಿ ಗ್ರಾಮದ ಆರಾಧ್ಯ ದೇವರಾದ ವೀರಭದ್ರ ದೇವರ ದರ್ಶನ ಪಡೆದು ವೀರರಾಣಿ ಮಲ್ಲಮ್ಮ ಮತ್ತು ಕ್ರಾಂತಿ ವೀರ್ ಸಂಗೊಳ್ಳಿ ರಾಯಣ್ಣನ ಪುತ್ತಳಿಗೆ ಮಾಲಾರ್ಪಣೆ ಮಾಡಿ ಹೂವಲ್ಲಿ ಶೃಂಗಾರ ಗೊಂಡ ತೆರೆದ ವಾಹನದಲ್ಲಿ ಪಕ್ಕೀರಪ್ಪ ಅವರನ್ನು ಮೆರವಣಿಗೆ ಮೂಲಕ ಸಿದ್ದಸಮುದ್ರ ಗ್ರಾಮಕ್ಕೆ ಕರೆದು ಕೊಂಡು ಬರಲಾಯಿತು.ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಹಾರೈಸಿದ, ದೇಶಾಭಿಮಾನಿಗಳು ಮಾಜಿ ಸೈನಿಕನ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದರು. ಗ್ರಾಮದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತೆರೆದ ವಾಹನದಲ್ಲಿ ಸಾಗಿದ ಪಕ್ಕೀರಪ್ಪ ಅವರು ಸೆಲ್ಯೂಟ್ ಹೊಡೆಯುವ ಮೂಲಕ ದೇಶಾಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದರು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಮತ್ತು ಲಾಲಬಹದ್ದೂರ್ ಶಾಸ್ತ್ರೀ ರವರ ಜನ್ಮದಿನವಾದ ಇಂದು ಮಹನೀಯರಿಗೆ ಪೂಜೆ ಸಲ್ಲಿಸಿದ ನಂತರ ಮಾಜಿ ಸೈನಿಕರಿಗೆ, ಶಿಕ್ಷಕರಿಗೆ ಮತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಕ್ಕೀರಪ್ಪ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಅಕ್ಟೋಬರ್ 02 ರಂದು ನಿವೃತ್ತಿಯಾಗಿದ್ದೇನೆ. ಇವತ್ತು ಸ್ವಗ್ರಾಮಕ್ಕೆ ಬಂದಿದ್ದು, ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ. ಅಲ್ಲದೆ ದೇಶದ ಯುವಕರು ಹೆಚ್ಚು ಹೆಚ್ಚು ಸೇನೆಯತ್ತ ಆಕರ್ಷಿತರಾಗಬೇಕು. ಸೈನ್ಯಕ್ಕೆ ಸೇರಿ ಭಾರತಾಂಬೆಯ ಸೇವೆ ಮಾಡಬೇಕು. ಅದ್ಧೂರಿಯಾಗಿ ಬರ ಮಾಡಿಕೊಂಡ ಅಭಿಮಾನಿಗಳಿಗೆ ಮಾಜಿ ಸೈನಿಕರಿಗೆ ಧನ್ಯವಾದ ತಿಳಿಸಿದರು. ಇದೆ ಸಂದರ್ಭದಲ್ಲಿ ಸೈನಿಕ ಪಕ್ಕೀರಪ್ಪ ಎಲ್ಲಾ ಶಾಲಾ ಮಕ್ಕಳಿಗೆ ಪೆನ್ನು, ಮತ್ತು ನೋಟ್ ಬುಕ್ ಗಳನ್ನು ಪ್ರೀತಿಯ ಪೂರ್ವಕವಾಗಿ ವಿರತರಣೆ ಮಾಡಿದರು . ಈ ಸಂದರ್ಭದಲ್ಲಿ ಮಲ್ಲಯ್ಯ ಹಿರೇಮಠ್, ಗ್ರಾ ಪಂ ಅಧ್ಯಕ್ಷ ಕಾಂತಯ್ಯ್ ಕಾರೀಮನಿ, ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ವಿ. ಹಣಬರಟ್ಟಿ, ಶಿಕ್ಷಕರಾದ ಎಸ್. ತೀರಕನ್ನವರ, ಸಿದ್ದಪ್ಪ ನಂದಿಹಳ್ಳಿ, ವಿಠ್ಠಲ್ ಬಾಗನ್ನವರ, ಸಂಗಪ್ಪ ದೂಪದಾಳ, ಮಂಜುನಾಥ್ ಕರೀಕಟ್ಟಿ, ಸಿದ್ದಪ್ಪ ಕಂಬಾರ, ಪ್ರಾಚಾರ್ಯರಾದ ಉಪ್ಪಿನ ಸರ್, ದೈಹಿಕ ಶಿಕ್ಷಕರಾದ ಶಂಕರ ಕರೀಕಟ್ಟಿ. ಗ್ರಾಮದ ಗ್ರಾಮಸ್ಥರು, ಯುವಕರು, ಪಕ್ಕೀರಪ್ಪ ರವರ ಕುಟುಂಬಸ್ಥರು, ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ