ಸಮಾನ ಕವಿ ಮನಸ್ಸುಗಳಿಂದ ಮಾತ್ರ ಕನ್ನಡ ಸಾಹಿತ್ಯದ ತೇರು ಎಳೆಯಲು ಸಾಧ್ಯ – ಡಾ, ಎಚ್.ಎಸ್ ಶಫಿ ಉಲ್ಲಾ ಅಭಿಮತ.
ಚಿತ್ರದುರ್ಗ ಅ.02

ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದಲ್ಲಿ ಇಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಹದಿನೆಂಟನೆಯ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮತಿ ಕೆ.ಟಿ ಶಾಂತಮ್ಮ ಮತ್ತು ಶ್ರೀಮತಿ ಶೋಭಾ ಮಲ್ಲಿಕಾರ್ಜುನ್ ರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ವಕೀಲರು ಹಾಗೂ ನಮ್ಮ ವೇದಿಕೆಯ ಗೌರವಾಧ್ಯಕ್ಷರು ಆದ ಶ್ರೀಯುತ ಬಿ.ಕೆ ರೆಹಮತ್ ವುಲ್ಲ ಮತ್ತು ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರಿಂದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ನಂತರ ಎಲ್ಲ ಜಾತಿ ಧರ್ಮಗಳನ್ನು ಮೀರಿದ್ದು ಈ ಸಾಹಿತ್ಯ ಅನೇಕ ಹಿರಿಯ ಸಾಹಿತಿಗಳು ಈ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಉದ್ಘಾಟನಾ ನುಡಿಗಳಲ್ಲಿ ಬಿ.ಕೆ ರಹಮತ್ ಉಲ್ಲಾ ರವರು ಸ್ಮರಿಸಿದರು.ನಂತರ ಸಂಸ್ಥಾಪಕರಾದ ಶ್ರೀಮತಿ ದಯಾವತಿ ಪುತ್ತುರ್ಕರ್ ಮಾತನಾಡಿ ಈ ಸಾಹಿತ್ಯ ಬದುಕಿನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿ ಕೊಂಡು ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಿನ್ಮುಲಾದ್ರಿ ಸಿರಿ ಶಿಕ್ಷಕ ಪ್ರಶಸ್ತಿಯನ್ನು ಡಾ, ಏಚ್.ಎಸ್ ಶಫಿ ಉಲ್ಲಾ ರವರು ಸ್ವೀಕರಿಸಿ ಮಾತನಾಡಿ “ಸಮಾನ ಕವಿ ಮನಸ್ಸುಗಳಿಂದ ಮಾತ್ರ ಕನ್ನಡ ಸಾಹಿತ್ಯದ ತೇರನ್ನು” ಎಳೆಯಲು ಸಾಧ್ಯ ಇದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಂತರ ಈ ವರ್ಷದ ವೇದಿಕೆ ಸಾಧಕರು ಎಂಬ ಪ್ರಶಸ್ತಿಯನ್ನು ಶ್ರೀಮತಿ ಸತ್ಯ ಪ್ರಭಾ ವಸಂತ್ ಕುಮಾರ್ ರವರು ಸ್ವೀಕರಿಸಿ ಮಾತನಾಡಿ ನಮ್ಮ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯು ಪ್ರತಿವರ್ಷ ಎಲೆಮರೆ ಕಾಯಿಯಂತೆ ಇರುವ ಕವಿಗಳನ್ನು ಸಾಹಿತಿಗಳನ್ನು ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ನಾನು ಕೂಡ ಒಬ್ಬಳು ನನ್ನನ್ನು ಸನ್ಮಾನಿಸಿದ ಈ ವೇದಿಕೆಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಹಾಗೆ ನನ್ನ ಜೀವನದ ಮರೆಯಲಾಗದ ಅವಿಸ್ಮರಣೀಯ ಕ್ಷಣಗಳು ಎಂದು ನೆನದು ಭಾವುಕರಾದರು.ವಿಶೇಷ ಸನ್ಮಾನಿತರಾಗಿ ಆಗಮಿಸಿದ ಚಿತ್ರದುರ್ಗ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಶ್ರೀಯುತ ಡಾ, ಕೆ.ಎಂ ವೀರೇಶ್ ರವರು ಮಾತನಾಡಿ ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ವಿರಬೇಕು, ವಚನ ಸಾಹಿತ್ಯ ಶರಣ ಸಾಹಿತ್ಯ ಹನ್ನೆರಡನೇ ಶತಮಾನದ ಬಸವಾದಿ ಶರಣರ ಪರಿಕಲ್ಪನೆ ಇದು ಈ ಬಾರಿ ಚಿತ್ರದುರ್ಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಡೆಸಲು ನನಗೆ ಅವಕಾಶ ಸಿಕ್ಕಿದೆ ಎಂದರು, ಈ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಗೆ ನನ್ನ ಸಂಪೂರ್ಣ ಬೆಂಬಲ ಸಹಕಾರವಿದೆ ಇನ್ನೂ ಹೆಚ್ಚು ಹೆಚ್ಚು ಉತ್ತಮ ಸಮಾಜ ಸೇವಾ, ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ದ ಕಾರ್ಯಕ್ರಮಗಳನ್ನು ನಡೆಸುವಂತಹ ಶಕ್ತಿ ನೀಡಲಿ ಹಾಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಲಿ ಈ ಕಾರ್ಯಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಶುಭ ಹಾರೈಸಿದರು.

ನಂತರ ವಿಶೇಷ ಉಪನ್ಯಾಸ ನೀಡಿದ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ರಾಜ್ಯಾಧ್ಯಕರು ಹಾಗೂ ಪ್ರಕಾಶಕರಾದ ಶ್ರೀಯುತ ರಾಜು.ಎಸ್ ಸೋಲೇನಹಳ್ಳಿ ರವರು ಸಾಹಿತ್ಯ ಮತ್ತು ಸಂಘಟನೆಗಳು ಎಂಬ ವಿಷಯ ಸಂಬಂಧಿಸಿದಂತೆ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಜ್ಞಾನ ಭಂಡಾರ ಬರೆಯುವ ಕೌಶಲ್ಯ ಇರುತ್ತದೆ ತನ್ನ ಸಾಮರ್ಥ್ಯ ತಿಳಿಯುವುದು ಅವರ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಾಗ ಮಾತ್ರ ತಿಳಿಯುತ್ತದೆ ಎಂದು ಸಲಹೆ ನೀಡಿದರು, ನಿಮ್ಮ ಕವನಗಳು ಮತ್ತು ಬರಹಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಾದರಿ ಪುಸ್ತಕ ಗಳಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಏಕ ಪಾತ್ರಭಿನಯ ಭಕ್ತಿ ಗೀತೆಗಳು, ಭಾವಗೀತೆಗಳು, ಕೋಲಾಟ ನೃತ್ಯ, ಪರಿಸರ ಗೀತೆಗಳು, ಸ್ವರಚಿತ ಕವನ ವಾಚನಗಳು, ದೇಶ ಭಕ್ತಿ ಗೀತೆಗಳು ವೀಕ್ಷರಕರ ಗಮನ ಸೆಳೆಯಿತು, ಎಲ್ಲರಿಗೂ ಚಿತ್ರದುರ್ಗದ ಕಲ್ಲಿನ ಕೋಟೆ ಖ್ಯಾತ ವಕೀಲರಾದ ಬಿ.ಕೆ.ಆರ್ ಸರ್ ರವರು ಎಲ್ಲರಿಗೂ ಉತ್ತಮ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಚಿತ್ರದುರ್ಗದ ಸಮಾಜ ಸೇವಕರು ಆದ ಶ್ರೀಯುತ ಈ. ಅಶೋಕ್ ಕುಮಾರ್ ರವರು ಕಾರ್ಯಕ್ರಮದ ನೆನಪಿನ ಕಾಣಿಕೆಗಳ ದಾನಿಗಳಾಗಿದ್ದರು, ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಡಾ, ಕೆ.ಎಂ ವೀರೇಶ್, ಶೋಭಾ ಮಲ್ಲಿಕಾರ್ಜುನ್, ಪ್ರಕಾಶಕರು ಆದ ರಾಜು.ಎಸ್ ಸೂಲೇನ ಹಳ್ಳಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ, ಡಾ, ನವೀನ್ ಸಜ್ಜನ್, ಶಿವಾನಂದ್ ಬಂಡೆ ಮೆಗಳಹಳ್ಳಿ, ಆರ್.ಜೆ ವಿನಾಯಕ್ ಜೆ.ಆರ್ ಶಿವಕುಮಾರ್, ರೇಣುಕಾ ಪ್ರಕಾಶ್, ಕೆ.ಟಿ ಶಾಂತಮ್ಮ, ಕೆ.ಎಸ್ ತಿಪ್ಪಮ್ಮ, ಸತೀಶ್ ಕುಮಾರ್, ಮುದ್ದು ರಾಜ್ ಹುಲಿತೊಟ್ಲು , ಪ್ರವೀಣ್ ಬೆಳೆಗೆರೆ, ವೀರೇಶ್ ಪಿಲ್ಲ ಹಳ್ಳಿ, ಶಿವರುದ್ರಪ್ಪ ಪಂಡ್ರ ಹಳ್ಳಿ, ಮಹಮದ್ ಸಾದತ್, ಹಿರಿಯ ಸಾಹಿತಿಗಳು ಆದ ಕೊರ್ಲ ಕುಂಟೆ ತಿಪ್ಪೇಸ್ವಾಮಿ, ಸುಮಾ ರಾಜ್ ಶೇಖರ್, ಮೀರಾ ನಾಡಿಗ್, ಜಯದೇವ್ ಮೂರ್ತಿ, ಶಾರದಾ ಜೈರಾಮ್, ತಿಪ್ಪೀರಮ್ಮ, ಉಷಾ ರಾಣಿ, ರಾಜೇಶ್ವರಿ ಶ್ರೀಧರ್, ನಾಗೇಂದ್ರಪ್ಪ,ಬಸವರಾಜ್ ಹರ್ತಿ, ನಿರ್ಮಲ ಭಾರದ್ವಾಜ್, ಡಾಕ್ಟರ್, ಗೌರಮ್ಮ ಮತ್ತು ಸ್ನೇಹಿತರು ಹಾಗೂ ಮೆಹಬೂಬ್,ಸವಿತಾ, ಬೆಳಕು ಪ್ರಿಯ, ತಿಪ್ಪಿರಮ್ಮ, ಮಹಮದ್ ರಫಿ, ಮುರುಳಿಧರ್.ಬಿ , ಕೆ. ಏಚ್ ಜಯಪ್ರಕಾಶ್ ಹಾಗೂ ಎಲ್ಲ ಸಾಹಿತ್ಯ ಆಸಕ್ತರು, ಕಲಾವಿದರು,ಕವಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ, ನವೀನ್ ಸಜ್ಜನ್ ಸ್ವಾಗತಿಸಿದರು, ಶಿವಮೂರ್ತಿ.ಟಿ ಕೋಡಿಹಳ್ಳಿ, ಮೀರಾ ನಾಡಿಗ್, ನಿರೂಪಿಸಿದರು, ವಿನಾಯಕ್ ಆರ್. ಜೆ ಮತ್ತು ಮುದ್ದುರಾಜ್ ಹುಲಿ ತೊಟ್ಟಿಲು ವಂದಿಸಿದರು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ