ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ.
ಕಾನಾ ಹೊಸಹಳ್ಳಿ ಜನೇವರಿ.13

ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ನೋವಿಗೆ ಸ್ಪಂದಿಸಿದಾಗ ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ ಹೇಳಿದರು. ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ನೋವಿಗೆ ಸ್ಪಂದಿಸಿದಾಗ ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ವೈದ್ಯರೆಂಬುದು ಹುದ್ದೆಯಲ್ಲ, ಅದು ಪ್ರಾಮಾಣಿಕ ಸೇವೆಗೆ ಹೆಸರಾದ ಸೇವಕ ಎಂಬ ಭಾವನೆ ವೈದ್ಯರಲ್ಲಿರ ಬೇಕು,ವೈದ್ಯರು ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಯಾಕಂದರೆ ಇಲ್ಲಿಗೆ ಬರುವವರು ಬಡವರು, ಅಶಕ್ತರಾಗಿರುತ್ತಾರೆ. ಈ ಭಾಗದ ಚಿಕಿತ್ಸಾ ಕೇಂದ್ರಕ್ಕೆ ಜಾಸ್ತಿ 85 ಹಳ್ಳಿಗಳು ಒಳಪಡುವುದರಿಂದ ಹೆಚ್ಚಿನ ಹಾಸಿಗೆಗಳ ಹಾಗೂ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇತ್ತು. ಹಳೆ ಕಟ್ಟಡ ತೆರವುಗೊಳಿಸಿ ವೆದ್ಯರ ವಸತಿ ಗೃಹಗಳನ್ನು ನಿರ್ಮಿಸಲು ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದೇನೆ ಎಂದರು.ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಶಂಕರ್ ನಾಯ್ಕ್ ಮಾತನಾಡಿ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ ಇದೆ. ಮಾನ್ಯ ಶಾಸಕರು ಆರೋಗ್ಯ ಸಚಿವರ ಹತ್ತಿರ ಮಾತನಾಡಿ ಇನ್ನೊಬ್ಬ ವೈದ್ಯರನ್ನು ನೇಮಕ ಮಾಡುವುದರ ಬಗ್ಗೆ ಈಗಾಗಲೇ ಚರ್ಚೆಯಾಗಿದೆ ಸಧ್ಯದಲ್ಲಿಯೇ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯರನ್ನು ನೇಮಕ ಮಾಡುತ್ತೇವೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದಾವೆ. ಈಗಾಗಲೇ ನಾವು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ನೋಟಿಸ್ ನೀಡಿದ್ದೇವೆ.

ಮುಂದಿನ ದಿನಗಳಲ್ಲಿ ಈ ರೀತಿ ಆಗುವುದಿಲ್ಲ ಎಂದರು.ಈ ಕಾರ್ಯಕ್ರಮದಲ್ಲಿ ಡಾ ಪ್ರದೀಪ್ ಎಸ್.ಪಿ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೂಡ್ಲಿಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಸಿ ಚೇತನ್, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕುಮಾರ್ ಗೌಡ್ರು, ಸಹಾಯಕ ಅಭಿಯಂತರು ಡಿ ಇ ನಾಗೇಂದ್ರ, ಅಭಿವೃದ್ಧಿ ಅಧಿಕಾರಿ ಬಿ ಬಸಮ್ಮ, ಮುಖಂಡರು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕ್ಷೇತ್ರದ ಗಡಿ ಭಾಗದ ಗ್ರಾಮಗಳಿಗೆ ಆಸ್ಪತ್ರೆ ಅವಶ್ಯಕತೆಯಿತ್ತು. ಹೀಗಾಗಿ ಚಿರತಗುಂಡು, ಶಿವಪುರ, ಬಡೇಲಡಕು ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದೆ.ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಹೂಡೇಂ, ಆಲೂರು, ಸೋಲದಳ್ಳಿ, ನಿಂಬಳಗೆರೆ ಆಸ್ಪತ್ರೆಗೆ 4ಕ್ಕು ಆಂಬುಲೆನ್ಸ್ ಮಂಜೂರು ಆಗಿದ್ದಾವೆ ಸಧ್ಯದಲ್ಲಿ ಬರುತ್ತವೆ.ಗುಡೆಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಿ ಸಮುದಾಯ ಆರೋಗ್ಯ ಕೇಂದ್ರ ಅತಿ ಶೀಘ್ರದಲ್ಲಿ ಅನುಮೋದನೆ.ಕಾನಹೊಸಹಳ್ಳಿ ಪಟ್ಟಣವು ಜನ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳೆದಿದ್ದು, ಪ್ರಾಥಮಿಕ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ನಿರ್ಮಿಸಬೇಕು ಇಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಹೆಚ್ಚಿನ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಗಳು ಹೋಗಿವೆ, ಹಾಗೂ ಪಟ್ಟಣಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು, ಜನಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಣ ಪಂಚಾಯಿತಿ ಮಾಡಬೇಕು ಹಾಗೂ ಮುಕ್ತಿ ವಾಹನ, ಇತರೆ ಅಭಿವೃದ್ಧಿ ಪಟ್ಟಣಕ್ಕೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೊಸಹಳ್ಳಿ ಎ.ಸಿ. ಚೇತನ್ ಮನವಿ ಸಲ್ಲಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ