ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿ ಅನುದಾನ ವಿತರಣೆ ಹಾಗೂ 2251ನೇ. ಸ್ವಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ.
ಮರಿಯಮ್ಮನಹಳ್ಳಿ ಫೆಬ್ರುವರಿ.6

ದಿನಾಂಕ 6/2/23 ರದ ಮರಿಯಮ್ಮನಹಳ್ಳಿಯ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿ ಅನುದಾನ ವಿತರಣೆ ಹಾಗೂ 2251.ನೇ ಸ್ವಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು ಇತ್ತೀಚಿನ ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುವವರ ಸಂಖ್ಯೆ ತುಂಬಾ ವಿರಳವಾಗಿದ್ದು ಇಂತಹ ಜನರಿಗೆ ಉತ್ತೇಜನ ನೀಡಲೆಂದು ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ರೈತರಿಗಾಗಿ ವಿಶೇಷವಾಗಿ ಕೃಷಿ ಅನುದಾನ ಕಾರ್ಯಕ್ರಮ ಹುಟ್ಟು ಹಾಕಿದ್ದಾರೆ ಕೇವಲ ಪ್ರಗತಿ ನಿಧಿ ಮಾತ್ರ ಕೊಡುವುದಲ್ಲದೆ ರೈತರಿಗೆ ಸೂಕ್ತ ತರಬೇತಿಗಳು, ಅಧ್ಯಯನ ಪ್ರವಾಸಗಳು ಮುಂತಾದ ಕಾರ್ಯಕ್ರಮಗಳನ್ನು ರೈತರಿಗಾಗಿಯೇ ಮಾಡುತ್ತಿದ್ದಾರೆ ಸಂಘದಲ್ಲಿ ನೊಂದಾಯಿತ ರೈತ ಸದಸ್ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆದ ಶಿವಮೂರ್ತಿ ಅವರು ಮಾತನಾಡಿ ನಾವು ಕೂಡ ತಳ ಮಟ್ಟದಲ್ಲಿ ರೈತರನ್ನು ಸಂಪರ್ಕ ಮಾಡುವ ಪ್ರಯತ್ನದಲ್ಲಿದ್ದು ಧರ್ಮಸ್ಥಳ ಸಂಸ್ಥೆಯ ಜೊತೆಗೆ ಕೈಜೋಡಿಸಿದಾಗ ಅದಕ್ಕೆ ಆನೆ ಬಲ ಬಂದಂತಾಗುತ್ತದೆ ಎಂದು ಶ್ಲಾಘಿಸಿದರು. ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯ ರೈತರ ಪರವಾಗಿ ಹಾಗೂ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿರುವ ಇಡಿ ಸಮಾಜ ಮೆಚ್ಚುವಂಥದ್ದು ಎಂದು ವಣಿ೯ಸಿದರು ಈ ಸಂದರ್ಭದಲ್ಲಿ ಆಯ್ದ ರೈತರಿಗೆ ಅನುದಾನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು ಹಾಗೂ 2251.ನೇ ಹೊಸ ಸಂಘ ಉದ್ಘಾಟನೆ ಮಾಡಿ ದಾಖಲೆಗಳನ್ನು ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳು ಮಾರುತಿ ಎಸ್, ತಾಲೂಕು ಕೃಷಿ ಅಧಿಕಾರಿ ಚೆನ್ನಪ್ಪ, ಮೇಲ್ವಿಚಾರಕರಾದ ವೆಂಕಟೇಶ್ ನಂದನ್ ಸೇವಾ ಪ್ರತಿ ನಿಧಿಗಳಾದ ನಾಗರತ್ನ ವಿ ಲಕ್ಷ್ಮಿ ಮಂಜುಳಾ ಎಂ ಮಂಜುಳಾ ಎಚ್ ವಿ ,ಹಾಗೂ ಉಮಾ ಎನ್ ಹಸೀನಾ ರೇಣುಕಾ ಅವರು ಸಿ ಎಸ್ ಇ ಸೇವಾದಾರರು ಶರಣಬಸಪ್ಪ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ