ಜಿಲ್ಲಾ ಪತ್ರಿಕಾ ಭವನದಲ್ಲಿ ಎಲ್ಲಾ ಪತ್ರಕರ್ತರಿಗೆ ಮುಕ್ತ ಅವಕಾಶ – ತಹಶೀಲ್ದಾರ್ ಎಂ. ಶೃತಿ. ಮಳ್ಳಪ್ಪಗೌಡ್ರ.
ಹೊಸಪೇಟೆ ಸ.21

ವಿಜಯನಗರ ಜಿಲ್ಲಾ ಪತ್ರಿಕಾ ಭವನವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಹಿಡಿತದಲ್ಲಿದ್ದು, ಸುದ್ದಿಗೋಷ್ಠಿಗೆ ಉಳಿದ ಪತ್ರಕರ್ತರಿಗೆ ಪ್ರವೇಶ ವಿರದಿದ್ದುದ್ದನ್ನು ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾದ ಜಿಲ್ಲಾ ಪತ್ರಕರ್ತರು ಖಂಡಿಸಿ ಪತ್ರಕರ್ತರಿಗೆ ನ್ಯಾಯ ಸಿಗಬೇಕೆಂದು ತಾಲೂಕು ಕಚೇರಿ ಮುಂದೆ ಸೆ. 20 ರಂದು ಬೆಳೆಗ್ಗೆ 10:00.ಘಂಟೆಯಿಂದ ಸಾಯಂಕಾಲ 7:30 ರವರೆಗೆ ಆಮರಣಾಂತ ಉಪವಾಸ ಮೌನ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಘಟನೆ ಏನು :- ಹೊಸಪೇಟೆ ತಾಲೂಕ ಕಛೇರಿಯ ಸರ್ಕಾರಿ ಕಟ್ಟಡದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಸಂಘದ ಬ್ಯಾನರ್ ಹಾಕಿ ಕೊಂಡು ಸರ್ಕಾರಿ ಕಚೇರಿಯಲ್ಲಿರುವ ಪತ್ರಿಕಾ ಭವನವನ್ನು ಸರ್ಕಾರದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಸಂಘದ ಸುಪರ್ದಿಗೆ ಯಲ್ಲಿಟ್ಟುಕೊಂಡು ಯಾವುದೇ ಸುದ್ದಿ ಗೋಷ್ಠಿಗಳಲ್ಲಿ ಸಂಘದ ಸದಸ್ಯರು ಮಾತ್ರ ಭಾಗವಹಿಸಿ ಕಟ್ಟಡವನ್ನು ಬಳಸಿ ಕೊಳ್ಳುತ್ತಿದ್ದರು. ಇನ್ನೂಳಿದ ಪತ್ರಕರ್ತರಿಗೆ ಪ್ರವೇಶ ನಿಷೇದಿಸಿದ್ದನ್ನು ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದ ಸದಸ್ಯ ಪತ್ರಕರ್ತರು ಈ ಧೋರಣೆಯನ್ನು ಖಂಡಿಸಿ, ಸುದ್ದಿ ಗೋಷ್ಠಿಯಲ್ಲಿ ಭಾಗಿಯಾಗಲು ಎಲ್ಲಾ ಪತ್ರಕರ್ತರಿಗೆ ಮುಕ್ತ ಪ್ರವೇಶವಿರ ಬೇಕು. ಸುದ್ದಿ ಗೋಷ್ಠಿಯ ಮಾಹಿತಿಗಳು ವಾರ್ತಾ ಇಲಾಖೆಯಿಂದಲೇ ಬರಬೇಕೆಂದು ಈ ಕುರಿತು ಸಮಗ್ರವಾಗಿ ಹಲವು ಬಾರಿ ಒಂದು ವರ್ಷದಿಂದ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿ ಕೊಡುತ್ತಾ ಬಂದಿದ್ದರೂ. ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಳ್ಳದೆ ಜಿಲ್ಲಾಡಳಿತ ಮೌನ ವಹಿಸಿದ್ದರು, ಒಂದು ವರ್ಷದಿಂದ ತಾಳ್ಮೆಯಿಂದ ಕಾದು ನೋಡಲಾಗಿ ವಿಳಂಬ ಧೋರಣೆಯನ್ನು ಜಿಲ್ಲಾ ಪತ್ರಕರ್ತರು ಖಂಡಿಸಿ ನಾವು ಅನಿವಾರ್ಯವಾಗಿ ಸತ್ಯಾಗ್ರಹ ಹಮ್ಮಿಕೊಳ್ಳುವ ಕೊಳ್ಳುವಂತಾಗಿದೆ ಎಂದು ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಹೆಚ್.ಎಸ್. ರಾಜು ಹೇಳಿದರು. ಸ್ಥಳಕ್ಕೆ ಭೇಟಿ :- ಆಮರಣಾಂತ ಉಪವಾಸ ಮೌನ ಸತ್ಯಾಗ್ರಹ ಕುಳಿತ ಪತ್ರಕರ್ತರ ಬಳಿಗೆ ತಹಶೀಲ್ದಾರರಾದ ಎಂ. ಶೃತಿ ಮಳ್ಳಪ್ಪ ಗೌಡ್ರ ಇವರು ಸಾಯಂಕಾಲ 7:30 ರ ಸಮಯಕ್ಕೆ ಆಗಮಿಸಿ ಪತ್ರಕರ್ತರ ಸಮಸ್ಯೆಗಳನ್ನು ಆಲಿಸಿ ಕೂಡಲೇ ತಮ್ಮ ಮನವಿಗೆ ಸ್ಪಂದಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗೆ ನ್ಯಾಯ ಸಮ್ಮತವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗಾಗಿ ತಾವು ಈ ಸತ್ಯಾಗ್ರಹವನ್ನು ಕೈಬಿಡಿ ಎಂದು ಅವರೊಂದಿಗೆ ನಾನು ಸಹ ಕೋರುತ್ತೇನೆ ಎಂದಾಗ ಸದಸ್ಯರು ನಿಮ್ಮ ಮೇಲೆ ವಿಶ್ವಾಸವಿದೆ ನಮಗೆ ಲಿಖಿತವಾಗಿ ಭರವಸೆ ಕೊಡಿ ಎಂದು ಕೇಳಿಕೊಂಡರು ಆಗ ಅವರು ಸ್ಪಂದಿಸಿ ಪತ್ರಿಕಾ ಭವನದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಸಮಿತಿ ರಚನೆ ಯಾಗಿದ್ದು, ಜಿಲ್ಲಾಮಟ್ಟದ ಪತ್ರಿಕಾ ಭವನ ನಿರ್ವಹಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ನಡೆದಿದೆ. ತಾಲೂಕ ಕಚೇರಿ ಮೇಲೆ ಹೀಗಿರುವ ಪತ್ರಿಕಾ ಭವನವನ್ನು, ಜಿಲ್ಲಾ ಪತ್ರಿಕಾ ಭವನವನ್ನಾಗಿಸಿ ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ತರಹದ ದಾಖಲೆಗಳನ್ನು ಸಿದ್ಧಗೊಳಿಸಿ. ಸುದ್ದಿ ಗೋಷ್ಠಿಗಳಿಗೆ ಮತ್ತು ಸುದ್ದಿ ಪ್ರಸಾರಕ್ಕಾಗಿ ಯಾವುದೇ ತಾರತಮ್ಯಗಳಿಲ್ಲದೆ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಮುಕ್ತ ಪ್ರವೇಶ ಕಲ್ಪಿಸಿ ಕೊಡಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ಇನ್ನೂ ಒಂದು ವಾರದೊಳಗೆ ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಕಾರ್ಯರೂಪಕ್ಕೆ ತರಲಾಗುವುದು ಎಂದು ವಾರ್ತಾ ಅಧಿಕಾರಿಯಾದ ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಇವರೊಂದಿಗೆ ಲಿಖಿತವಾಗಿ ಭರವಸೆ ನೀಡಿದರು.ಲಿಖಿತ ಪತ್ರದಲ್ಲಿ : ದಿನಾಂಕ 27-08-2024 ರಂದು ಜಿಲ್ಲಾ ಮಟ್ಟದ ಪತ್ರಿಕಾ ಭವನ ನಿರ್ವಹಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ನಡೆದಿರುತ್ತದೆ. ಈ ಸಭೆಯಲ್ಲಿ ಪತ್ರಿಕಾ ಭವನದ ವಿಷಯದ ಕುರಿತಂತೆ ಚರ್ಚಿಸಲಾಗಿರತ್ತದೆ. ಮಾಧ್ಯಮ ಮಾನ್ಯತೆ ಹೊಂದಿದ ಜಿಲ್ಲೆಯಲ್ಲಿನ ಎಲ್ಲಾ ಪತ್ರಕರ್ತರಿಗೂ ಪತ್ರಿಕಾ ಭವನದಲ್ಲಿ ಅವಕಾಶವಿರುವ ರೀತಿಯಲ್ಲಿ ಅತೀ ಶೀಘ್ರುದಲ್ಲಿ ನಿಯಾಮನುಸಾರ ಪರಿಶೀಲಿಸಿ ಕ್ರಮ ವಹಿಸ ಲಾಗುವುದೆಂದು ಕೋರುತ್ತಾ, ತಾವು ಕೈಗೊಂಡ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಈ ಮೂಲಕ ತಮ್ಮಲ್ಲಿ ಕೋರಿದೆ ಎಂದು ತಹಶೀಲ್ದಾರ್ ರುಜುವಿ ನೊಂದಿಗೆ ಹೇಳಲಾಗಿದೆ.ತಹಶೀಲ್ದಾರ್ ಅವರು ಲಿಖಿತವಾಗಿ ಭರವಸೆಯನ್ನು ನೀಡಿ, ಆಮರಣಾಂತ ಉಪವಾಸ ಮೌನ ಸತ್ಯಾಗ್ರಹ ಕುಳಿತ ಪತ್ರಕರ್ತರಾದ ಕೆ. ಬಿ. ಹಿರೇಮಠ್ ಅವರಿಗೆ ಸ್ವತಹ ಅವರೇ ಕುಡಿಯಲು ನೀರನ್ನು ಕೊಟ್ಟು ಲಿಖಿತ ಭರವಸೆ ಕೊಟ್ಟಿದ್ದರಿಂದ ಅವರ ಭರವಸೆಗೆ ಮಣಿದು ಉಪವಾಸ ಸತ್ಯಾಗ್ರಹವನ್ನು ಅಂತ್ಯ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಆಮರಣಾಂತ ಉಪವಾಸ ಮೌನ ಸತ್ಯಾಗ್ರಹ ಕುಳಿತ ಕೆ.ಬಿ ಹಿರೇಮಠ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಿ ಹೆಚ್ ಎಸ್ ರಾಜು, ವಿ.ಗಾಳೆಪ್ಪ, ನಾಗರಾಜ, ರಾಮು ಅಶ್ರೀತ್, ಪಣಿಂದ್ರ ಗೌಡ, ಎ. ಚಿದಾನಂದ, ಕೆ.ಬ್ರಹ್ಮಯ್ಯ, ಎಲ್.ಮಂಜುನಾಥ, ಗೀತಾ ಸುರೇಶ್, ಮಹಮದ್ ಗೌಸ್, ರಾಘವೇಂದ್ರ, ವೆಂಕಟೇಶ್, ಮಾಲತೇಶ ಶೆಟ್ಟರ್, ಎಸ್.ಆರ್.ಗಾಯತ್ರಿ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ .