ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯಿಂದ “ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ”.
ಹೊಸಪೇಟೆ ಸ.21

ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯಿಂದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ದಿನಾಂಕ:10:11:2024 ರಂದು ರೋಟರಿ ಹಾಲ್, ರೇಲ್ವೆ ಸ್ಟೇಶನ್ ರಸ್ತೆ, ಹೊಸಪೇಟೆಯಲ್ಲಿ ಹಮ್ಮಿ ಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಯು ಹತ್ತಾರು ವರ್ಷಗಳಿಂದ ಹೊಸಪೇಟೆಯಲ್ಲಿ ಅಬಾಕಸ್ ಹಾಗೂ ನರ್ಸರಿ ಶಿಕ್ಷಕಿಯರ ತರಬೇತಿಯನ್ನು ನೀಡುತ್ತಾ, ನೂರಾರು ಜನರಿಗೆ ಉದ್ಯೋಗ ಕಲ್ಪಸಿದಲ್ಲದೇ, ಅಬಾಕಸ್ ತರಬೇತಿಯಲ್ಲಿ ಅಪಾರ ಅನುಭವ ಹಾಗೂ ಮಾನವ ಸಂಪನ್ಮೂಲವನ್ನು ಹೊಂದಿ ಹೊಸಪೇಟೆಯಲ್ಲಿ ತನ್ನದೇ ಆದ ವಿಶಿಷ್ಟ ಹಾಗೂ ವಿನೂತವಾಗಿ ಸಾಧನೆಯತ್ತ ದಾಪುಗಾಲು ಹಾಕುತ್ತಿದೆ. ಮಾನಸಿಕ ಅಂಕ ಗಣಿತದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಮಕ್ಕಳಲ್ಲಿ ಬುದ್ದಿಮತ್ತೆ , ಏಕಾಗ್ರತೆ, ವೇಗ & ನಿಖರತೆ, ಶ್ರವಣ ಕೌಶಲ್ಯ, ದೃಶ್ಯ ಕೌಶಲ್ಯ, ಮಾನಸಿಕ ಗಣಿತ ಕೌಶಲ್ಯ, ಆತ್ಮ ವಿಶ್ವಾಸ, ಹಾಗೂ ಉತ್ತಮ ಶೈಕ್ಷಣಿಕ ಫಲಿತಾಂಶ ಬೆಳಸುವ ಸದುದ್ದೇಶದಿಂದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ದಿನಾಂಕ:10:11:2024 ರಂದು ವಿಜಯನಗರ ಜಿಲ್ಲೆ, ಹೊಸಪೇಟೆಯ ರೇಲ್ವೆ ಸ್ಟೇಶನ್ ರಸ್ತೆಯಲ್ಲಿರುವ ರೋಟರಿ ಹಾಲ್ ನಲ್ಲಿ ಹಮ್ಮಿ ಕೊಳ್ಳಲಾಗಿದೆ.ರಾಜ್ಯದ ಯಾವುದೇ ಜಿಲ್ಲೆ ಹಾಗೂ ಎಲ್ಲ ಊರುಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ವರೆಲ್ಲರೂ ದಿನಾಂಕ:10:10:2024 ರೊಳಗೆ ನೋಂದಣಿ ಮಾಡಿ ಕೊಳ್ಳಬೇಕು. ನಂತರ ಬಂದವರಿಗೆ ಅವಕಾಶವಿಲ್ಲಾ, ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845930867, 8711911628.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ .