ಶೀಘ್ರದಲ್ಲೇ ಐದು ಜಿಲ್ಲೆಗಳಲ್ಲಿ ಶಾಖೆಗಳನ್ನು ಆರಂಭಿಸುವ ಗುರಿ – ಶಾಸಕ ಕಾಶಪ್ಪನವರ.

ಹುನಗುಂದ ಸ.21

ಶ್ರೀ ಎಸ್.ಆರ್.ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘ ಮುಂದಿನ ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ರೈತರು, ಬಡ ಕೂಲಿ ಕಾರ್ಮಿಕರಿಗೆ ಹಣಕಾಸಿನ ಅನುಕೂಲತೆಯನ್ನು ಒದಗಿಸಲಾಗುವುದು ಎಂದು ಎಸ್.ಆರ್.ಕೆ ಬ್ಯಾಂಕ್ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ನವ ನಗರದ ಪುರ ಸಭೆಯ ಮಂಗಲ ಭವನದಲ್ಲಿ ಶುಕ್ರವಾರ ನಡೆದ ಎಸ್.ಆರ್.ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘದ ೨೦೨೩-೨೪ ನೇ. ಸಾಲಿನ ೧೬ ನೇ. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೀಘ್ರದಲ್ಲಿಯೇ ರಾಯಚೂರ, ಕೊಪ್ಪಳ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಶಾಖೆಯನ್ನು ಆರಂಭಿಸಲಾಗುವುದು. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಯನ್ನು ಆರಂಭಿಸುವ ಗುರಿಯನ್ನು ಹೊಂದಲಾಗಿದೆ. ಗ್ರಾಹಕರ ಮತ್ತು ಸದಸ್ಯರ ಹಾಗೂ ನಿರ್ದೇಶಕ ಮಂಡಳಿಯ ಸಹಕಾರ ದೊಂದಿಗೆ ಸದ್ಯ ೧೩ ಕೋಟಿ ದುಡಿಯೋ ಬಂಡವಾಳನು ಹೊಂದುವ ಮೂಲಕ ಪ್ರಸಕ್ತ ವರ್ಷದಲ್ಲಿ ೬.೦೨ ಲಕ್ಷ ನಿವ್ವಳ ಲಾಭವನ್ನು ಹೊಂದಿದೆ.

ಇದೀಗ ಹುನಗುಂದ ಪಟ್ಟಣದಲ್ಲಿ ಪ್ರಧಾನ ಕಚೇರಿಯು ೧ ಕೋಟಿ ೫೦ ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ. ಸಹಕಾರಿ ಕ್ಷೇತ್ರವು ಬೆಳೆಯಲು ಷೇರುದಾರ, ಠೇವಣೆದಾರರು, ಸದಸ್ಯರ ಸಹಾಯ ಸಹಕಾರ ದಿಂದ ಬ್ಯಾಂಕ ಅಭಿವೃದ್ದಿ ಹೊಂದಲು ಸಾಧ್ಯ. ಗ್ರಾಹಕರ ಅನುಕೂಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕಿನಂತೆ ನಮ್ಮ ಬ್ಯಾಂಕಿನಲ್ಲಿ ಸಂಪೂರ್ಣ ಅನ್ಲೈನ್ ವ್ಯವಸ್ಥೆಯನ್ನು ಆರಂಭಿಸುವ ಚಿಂತನೆ ಮಾಡಲಾಗಿದೆ. ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳ ಪರಿಶ್ರಮ ದಿಂದ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದು. ಎಸ್. ಭದ್ರಶೆಟ್ಟಿ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ೬.೦೨ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. ದುಡಿಯುವ ಬಂಡವಾಳ ೧೧.೮೧ ಕೋಟಿ ಹೊಂದಿದೆ. ೯.೬೬ ಕೋಟಿ ಸಾಲವನ್ನು ನೀಡಿದೆ. ೭೪.೨೪ ಲಕ್ಷ ಶೇರ್ ಬಂಡವಾಳ, ೧೦.೦೪ ಕೋಟಿ ಠೇವುಗಳನ್ನು ಹೊಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಉತ್ತಮ ಲಾಭ ಗಳಿಸಿದ ಬೇವಿನಮಟ್ಟಿ ಶಾಖೆ ಸಿಬ್ಬಂದಿ, ಉತ್ತಮ ವಸುಲಾತಿಯನ್ನು ಮಾಡಿದ ಇದ್ದಲಗಿ ಶಾಖೆಯ ಸಿಬ್ಬಂದಿಯನ್ನು ಹಾಗೂ ನೂತನ ಸದಸ್ಯರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.ಉಪಾಧ್ಯಕ್ಷ ಯಮನಪ್ಪ ಚಲವಾದಿ, ನಿರ್ದೇಶಕರಾದ ಗಂಗಾಧರ ದೊಡಮನಿ, ಅಮರೇಶ ನಾಗೂರ, ಮುತ್ತಣ್ಣ ಕಲಗೋಡಿ, ಮಹಾಂತೇಶ ನರಗುಂದ, ಪ್ರಭು ಇದ್ದಲಗಿ, ಶಿವಪ್ಪ ಭದ್ರಶೆಟ್ಟಿ, ಮಹಾಂತೇಶ ಕಡಿವಾಲ, ನಿಂಗಪ್ಪ ಬಿದರಕುಂದಿ, ಸಂಗಮೇಶ ಹಾವರಗಿ, ಜಯಶ್ರೀ ತಳವಾರ, ಅಕ್ಕಮ್ಮ ಪಾಟೀಲ, ಸಂಪನ್ಮೂಲ ಅಧಿಕಾರಿ ರಾಮಣ್ಣ ಅಂಬಿಗೇರ ಇತರರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ .

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button