ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆದ್ದು ಬಿಗಿದ ಕೈ – ತೀವ್ರ ಮುಖಭಂಗ ಅನುಭವಿಸಿದ ಕಮಲ ಪಡೆ.
ಗಂಜೀಹಾಳ ಅ.06

ಕಳೆದ ಎರಡುವರೆ ತಿಂಗಳಿನಿಂದ ಇಡೀ ಜಿಲ್ಲಾಧ್ಯಂತ ಭಾರಿ ಸುದ್ದಿಯಾಗಿದ್ದ ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಫಲಿತಾಂಶ ಕೊನೆಗೂ ಶನಿವಾರ ಹೊರ ಬಿದ್ದಿದ್ದು ಒಟ್ಟು ೧೨ ಸ್ಥಾನಗಳ ಪೈಕಿ ೯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿ ಯಾದರೆ ಮೂವರು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದು. ಅನೇಕ ಆರೋಪ ಪ್ರತ್ಯಾರೋಪದ ಮಧ್ಯದಲ್ಲಿ ಕೈ ಮೇಲುಗೈ ಸಾಧಿಸಿದರೆ ಕಮಲ ಪಾಳೆಗೆ ಬಾರಿ ಹಿನ್ನಡೆ ಉಂಟಾಗಿದೆ. ಕಳೆದ ಜುಲೈ ೧೪ ರಂದು ಪಿಕೆಪಿಎಸ್ ಚುನಾವಣೆಯಲ್ಲಿ ಅಕ್ರಮ ಬ್ಯಾಲೇಟ್ ಪೇಪರ ಆರೋಪ ಮತ್ತು ನಾಮಪತ್ರ ತಿರಸ್ಕೃತ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಮಧ್ಯೆ ಬಹುದೊಡ್ಡ ಜಟಾಪಟಿ ನಡೆದಿತ್ತು. ಅಷ್ಟೇ ಅಲ್ಲ ಬಿಜೆಪಿ ಮುಖಂಡರು ಶಾಸಕ ವಿಜಯಾನಂದ ಕಾಶಪ್ಪನವರ ಮಾತು ಕೇಳಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಮ್ಮ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ. ಅಕ್ರಮ ಬ್ಯಾಲೆಟ್ ಹರಿದಿದ್ದು ಮತ್ತು ಉದ್ದೇಶ ಪೂರ್ವಕವಾಗಿ ನಾಮಪತ್ರ ತಿರಸ್ಕಾರ ಗೊಳಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮತ್ತು ಮರು ಚುನಾವಣೆ ನಡೆಸುವಂತೆ ಪ್ರತಿಭಟನೆ ನಡೆಸಿ ಯಶಸ್ವಿ ಕೂಡ ಆಗಿದ್ದರು. ಅದು ಅಲ್ಲದೆ ನಾಮಪತ್ರ ತಿರಸ್ಕೃತ ಗೊಂಡ ಐವರು ಬಿಜೆಪಿ ಬೆಂಬಲಿತರು ನಾಮಪತ್ರ ತಿರಸ್ಕೃತವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲನ್ನು ಏರಿದ್ರು ಹೈಕೋರ್ಟ್ ಐವರ ಪೈಕಿ ಮೂವರಿಗೆ ಚುನಾವಣೆಯ ಸ್ಪರ್ಧೆಗೆ ಅವಕಾಶದ ಸಿಹಿ ಸಿಕ್ಕು ಮರಳಿ ಚುನಾವಣೆ ಎದುರಿಸಿದರೂ ಕೂಡ ಶನಿವಾರ ಹೊರ ಬಿದ್ದ ಫಲಿತಾಂಶವು ಬಿಜೆಪಿ ಬೆಂಬಲಿತರಿಗೆ ಮತ್ತು ಮುಖಂಡರಿಗೆ ಭಾರಿ ಕಹಿ ಅನುಭವದ ಜೊತೆಗೆ ತೀವ್ರ ಮುಖಭಂಗವು ಕೂಡ ಆಗಿದೆ. ವಿಜಯ ಸಾಧಿಸಿದ ಕಾಂಗ್ರೆಸ್ ೯ ಜನ ಅಭ್ಯರ್ಥಿಗಳು-೧) ಮಹಾಂತೇಶ ಈಶ್ವರಪ್ಪ ಮಲ್ಲಾಡದ (೩೯೫ ಗಂಜಿಹಾಳ), ೨) ಶ್ರೀಕಾಂತಯ್ಯ ಶಿವಪುತ್ರಯ್ಯ ಹಿರೇಮಠ (೩೬೮ ಹೂವನೂರ),೩) ಸಂಗನಬಸಪ್ಪ ಸಂಗನಗೌಡ ಪಾಟೀಲ (೩೫೬ ಚಿಕ್ಕಮಳಗಾವಿ), ೪) ಮಹಾಂತಪ್ಪ ಸಿದ್ರಾಮಪ್ಪ ಮೇಟಿ (೩೫೧ ಹಿರೇಮಳಗಾವಿ), ೫) ದುರ್ಗಪ್ಪ ಲಕ್ಷ್ಮಪ್ಪ ದೊಡ್ಡಮನಿ (೩೬೬ ಗಂಜಿಹಾಳ), ೬) ಕನಕಪ್ಪ ಹಣಮಪ್ಪ ತಳವಾರ (೩೪೫ ನಂದನೂರ), ೭) ಶಂಕ್ರವ್ವ ರಾಯಪ್ಪ ಅಚನೂರ (೩೫೫ ಗಂಜಿಹಾಳ), ೮) ಗುರುನಾಥ ಹಳ್ಳೆಪ್ಪ ಶಿರೂರ (೩೯ ಗಂಜಿಹಾಳ), ೯) ಹನುಮಪ್ಪ ತಮ್ಮಣ್ಣ ಕಾಳಿ (ಗಂಜಿಹಾಳ). ಗೆಲುವು ಸಾಧಿಸಿದ ಮೂವರು ಬಿಜೆಪಿಗರು-೧) ಈರಯ್ಯ ಶರಣಯ್ಯ ಗಣಾಚಾರಿ (೪೧೮ ಗಂಜಿಹಾಳ) ೨) ಅಂದಾನಪ್ಪ ದ್ಯಾವಪ್ಪ ಜಡ್ರಾಮಕುಂಟಿ (೪೧೭ ಗಂಜಿಹಾಳ) ೩) ಚಂದ್ರವ್ವ ಶೇಖಪ್ಪ ಶಿರೂರ (೩೪೨ ಗಂಜಿಹಾಳ). ಸಂಭ್ರಮಾಚರಣೆ- ೯ ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿ ಆಗುತ್ತಿದ್ದಂತೆ ಹುನುಗುಂದ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಗುಲಾಲ ಎರಚಿ. ಪಟಾಕಿ ಸಿಡಿಸಿ ಸಿಹಿ ಹಂಚಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸುವ ಮೂಲಕ ವಿಜಯದ ಸಂಭ್ರಮಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಕಾಂಗ್ರೆಸ್ ಮುಖಂಡರಾದ ವಸಂತ ದೇಶಪಾಂಡೆ, ಮಹಾಂತೇಶ ಲಗಮನ್ನವರ, ಬಾಲೇಶ ಹಿರೇಗೌಡ, ತಾ.ಪಂ ಮಾಜಿ ಸದಸ್ಯ ಚಂದಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.
ಬಾಕ್ಸ್ ಸುದ್ದಿ:-
ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠಿತವಾಗಿದ್ದ ಗಂಜಿಹಾಳ ಪಿಕೆಪಿಎಸ್ ಚುನಾವಣೆಯಲ್ಲಿ ಜನರು ನಮ್ಮ ಪಕ್ಷದ ಪರವಾಗಿದ್ದಾರೆ ಎನ್ನುವುದು ಸಾಭೀತಾಗಿದೆ. ಸರ್ಕಾರದ ಅನೇಕ ಜನಪರ ಯೋಜನೆಗಳು ಮತ್ತು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ನಮ್ಮ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ. ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಗಳ ಸೋಲಿನ ಭೀತಿಯಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿಸಿ ನ್ಯಾಯಾಲಯದ ಮೆಟ್ಟಿಲೇರಿ ಕೊನೆಗೂ ಸೋತು ಸುಣ್ಣವಾಗಿದ್ದಾರೆ. ನ್ಯಾಯಾಲಯಕ್ಕೆ ಹೋದವರು ಅವರೇ ಮತ ಪೆಟ್ಟೆಗೆಯನ್ನು ಖಜಾನೆ ಕಚೇರಿಯಲ್ಲಿ ಇರಿಸಿದ್ದು ಅವರೇ ಮತ್ತೆ ೧೨ ಕ್ಕೆ ೧೨ ಅವರೇ ಗೆಲ್ತಾರೆ ಎನ್ನುವ ಆರೋಪ ಮಾಡೋದು ಬಿಡಬೇಕು. ಗಂಗಾಧರ ದೊಡಮನಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಹುನಗುಂದ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ