ಕೋಟೆ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಕಾರ್ಯಕ್ರಮ ಜರುಗಿತು.

ಕೊಟ್ಟೂರು ಅ.06

ಪಟ್ಟಣದ ಶೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶರವನ್ನರಾತ್ರಿ ಪ್ರಯುಕ್ತ ದೇವಿಗೆ ವಿವಿಧ ಅಲಂಕಾರ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಕಾಳಮ್ಮ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ, ಶ್ರೀ ವಿಶ್ವಕರ್ಮ ಯುವ ಬಳಗ,ಶ್ರೀ ವಿಶ್ವಕರ್ಮ ಮಹಿಳಾ ಸಂಘ ಹಾಗೂ ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘ ನಿ. ಇವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಅರ್ಚಕರಾದ ಕಮ್ಮಾರ ಗುರು ಬಸವರಾಜ ತಿಳಿಸಿದರು. ದಸರಾ ಹಬ್ಬದ ಪ್ರಯುಕ್ತ ಸನಾತನ ಧರ್ಮದ ಸಂಸ್ಕೃತಿಯಂತೆ ನಾಡಿನ ಜನತೆಗೆ ಮಂಗಳವನ್ನುಂಟು ಮಾಡಲಿ, ಜನರ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಲಿ ಎಂಬ ಸದುದ್ದೇಶದಿಂದ ಮತ್ತು ಸಮಾಜದಲ್ಲಿ ಎಲ್ಲಾ ಜಾತಿ ಧರ್ಮದವರಲ್ಲಿ ಶಾಂತಿ ನೆಲಸಲಿ ಎಂದು ಟಿ ರಾಮಣ್ಣ ಪ.ಪಂ ಸದಸ್ಯರು ಹಾಗೂ ಚಿರಿಬಿ ಪ್ರಕಾಶ ಕುಟುಂಬ ವರ್ಗದವರ ಸಹಕಾರ ದೊಂದಿಗೆ ಅ 6 ರ ಭಾನುವಾರ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೋಟೆ ಶ್ರೀ ಕಾಳಿಕಾದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ ಕಾರ್ಯಕ್ರಮ ಮಾಡಲಾಯಿತು. ಪುರೋಹಿತರಾದ ಶ್ರೀ ವಿದ್ಯಾಶಂಕರ್ ಶರ್ಮ ಹುಬ್ಬಳ್ಳಿ, ಶೀ ವಿಶ್ವನಾಥ ಶರ್ಮ ತಾಳಿಕೋಟೆ, ಶ್ರೀ ಮಹಾಚಂದನಸ್ವಾಮಿ ಲೇಬಗಿರಿ ಮಠ, ಶ್ರೀ ಕೊಟ್ರೇಶ ಶರ್ಮ ಕೊಟ್ಟೂರು ಶ್ರೀ ಸಿದ್ದೇಶ ಶರ್ಮ ಉಜ್ಜಿನಿ. ಶ್ರೀ ಹರೀಶ್ ಶರ್ಮ ಗಂಗಾವತಿ ಇವರಿಂದ ಚಂಡಿಕಾ ಹೋಮ ಕಾರ್ಯಕ್ರಮ ನಡೆಸಿ ಕೊಟ್ಟರು. ಪುರಾಣ ಪಠಣಕಾರರು ನೀಲಂಕಠಚಾರ್ಯ ಬೆಣ್ಣಿಹಳ್ಳಿ, ಹಾಗೂ ಜಕಣಚಾರಿ ಚಿಗಟೇರಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವಿ ಭಕ್ತರಿಗೆ ಪುರಾಣ ಪ್ರವಚನ ಕಾರ್ಯಕ್ರಮ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಹಾರ್ಮೋನಿಯಂ ಮಾಸ್ಟರ್ ಬಡಿಗೇರ ಜಂಬಣ್ಣಾಚಾರ್ ಹಾಗೂ ತಬಲ ಮಾಸ್ಟರ್ ಗುರುಸಿದ್ದನಗೌಡ್ರು ಭಾಗವಹಿಸಿದ್ದರು. ವಿವಿಧ ಹಣ್ಣು ಹಾಗೂ ವನಸ್ಪತಿ ಗಳಿಂದ ಹೋಮ ಮಾಡಿದರು ನಂತರ ಕಾಳಮ್ಮ ದೇವಿಗೆ ಪೂಜೆ ಸಲ್ಲಿಸಿ ಪುರೋಹಿತರು ಹಾಗೂ ತಂಡದವರ ಮಾರ್ಗ ದರ್ಶನದಂತೆ ಹೋಮ ಕುಂಡಲಕ್ಕೆ ಪೂರ್ಣ ಆಹುತಿ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಸದಸ್ಯರು ಹಾಗೂ ಗುರುಸಿದ್ದನಗೌಡ್ರು ಹಾಗೂ ಇತರರು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button